ಚಿಂತೆ ಬೇಡ, ನಾನು ನಿನ್ನ ಹಿಂದಿದ್ದೇನೆ; ರಕ್ಷಿತ್‌ ಶೆಟ್ಟಿಗೆ ಸಿಕ್ತು ದೈವದ ಅಭಯ

Rakshith Shetty: ಉಡುಪಿ: ತುಳುನಾಡಿನ ಸಂಪ್ರದಾಯ ಹಾಗೂ ದೈವಾರಾಧನೆಯಲ್ಲಿ ಅತೀವ ನಂಬಿಕೆ ಹೊಂದಿರುವ ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಉಡುಪಿಯ ಅಲೆವೂರಿನಲ್ಲಿ ನಡೆದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಅವರು ಭಾಗವಹಿಸಿ ದೈವದ ಆಶೀರ್ವಾದ ಪಡೆದಿದ್ದಾರೆ.

ಅಲೆವೂರು ದೊಡ್ಡಮನೆ ಕುಟುಂಬದ ಕುಡಿಯಾಗಿರುವ ರಕ್ಷಿತ್ ಶೆಟ್ಟಿ, ಈ ನೇಮೋತ್ಸವದ ಸಂದರ್ಭದಲ್ಲಿ ತಮ್ಮ ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರ ಜೊತೆಗೂಡಿ ಆಗಮಿಸಿದ್ದರು. ರಾತ್ರಿಯಿಡೀ ನಡೆದ ನೇಮೋತ್ಸವದಲ್ಲಿ ಬಹಳ ಹೊತ್ತು ಕುಳಿತು ದೈವದ ಸೇವೆಯನ್ನು ಕಣ್ತುಂಬಿಕೊಂಡ ಅವರು, ಮುಂಜಾನೆಯ ವೇಳೆ ತನಿಮಾನಿಗ ಮತ್ತು ಬಬ್ಬು ಸ್ವಾಮಿ ದೈವದ ಮುಂದೆ ನಿಂತು ಅಭಯ ಕೇಳಿದರು. ಈ ವೇಳೆ ದೈವವು ರಕ್ಷಿತ್ ಅವರಿಗೆ ಪ್ರಸಾದ ನೀಡಿ, “ಚಿಂತಿಸಬೇಡ, ನಾನು ನಿನ್ನ ಹಿಂದೆ ಇದ್ದೇನೆ” ಎಂದು ಅಭಯ ನೀಡಿತು.

ಅಲೆವೂರು ದೊಡ್ಡಮನೆ ಮನೆತನದವರಿಂದ ನಿರ್ವಹಿಸಲ್ಪಡುವ ಈ ವೈದ್ಯನಾಥ ಬಬ್ಬು ಸ್ವಾಮಿ ನೇಮೋತ್ಸವವು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೈವದ ನುಡಿ ಮತ್ತು ಪ್ರಸಾದ ಸ್ವೀಕರಿಸಿದ ಬಳಿಕ ರಕ್ಷಿತ್ ಶೆಟ್ಟಿ ಅವರು ಅಲ್ಲಿಂದ ವಾಪಸಾದರು.

Oscars 2026: ಆಸ್ಕರ್‌ ಕಣದಲ್ಲಿ ಕಾಂತಾರ ಚಾಪ್ಟರ್ 1, ರಿಷಬ್‌ ಶೆಟ್ಟಿ ಸಿನಿಮಾಗೆ ಜಾಗತಿಕ ಮನ್ನಣೆ

ಪ್ರಸ್ತುತ ರಕ್ಷಿತ್ ಶೆಟ್ಟಿ ಅವರು ತಮ್ಮ ಮುಂಬರುವ ಸಿನಿಮಾಗಳ ಸ್ಕ್ರಿಪ್ಟ್ ಕೆಲಸಗಳಲ್ಲಿ ಅತ್ಯಂತ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಡುವಿಲ್ಲದ ಕೆಲಸದ ನಡುವೆಯೂ ತಮ್ಮ ಮೂಲ ಮನೆತನದ ದೈವದ ಸೇವೆಗಾಗಿ ಸಮಯ ಮೀಸಲಿಟ್ಟು ಆಗಮಿಸಿದ್ದು ಅಭಿಮಾನಿಗಳ ಗಮನ ಸೆಳೆದಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories