ನಟ ವಿಜಯರಾಘವೇಂದ್ರ ಅಭಿನಯದ “ಕಾಸಿನ ಸರ” ರಿಲೀಸ್‌ಗೆ ರೆಡಿ

ಕನ್ನಡ ಸಿನಿರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿರುವ ನಟ ವಿಜಯರಾಘವೇಂದ್ರ ಅಭಿನಯದ “ಕಾಸಿನ ಸರ” (Kasina Sara Movie) ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ನಟ ವಿಜಯರಾಘವೇಂದ್ರ ಇತ್ತೀಚೆಗೆ ಹೆಚ್ಚಾಗಿ ಕಿರುತೆರೆಯ ರಿಯಾಲಿಟಿ ಶೋಗಳ ಜಡ್ಜ್‌ ಆಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಯ ಸಿನಿಮಾಗಳು ತುಂಬಾ ವಿರಳವಾಗಿದ್ದವು. ಇದೀಗ ನಟ ವಿಜಯರಾಘವೇಂದ್ರ ಹಾಗೂ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಅಭಿನಯದ “ಕಾಸಿನ ಸರ” ಸಿನಿಮಾ ರಿಲೀಸ್‌ ಡೇಟ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಸಿಕ್ಕಿದೆ.

ಹೌದು ಇದೇ ಬರುವ ಮಾರ್ಚ್‌ 3 ರಂದು ತೆರೆ ಕಾಣಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸಿನಿಮಾ ಸೆಟ್ಟೇರಿದ್ದು, ನಟ ವಿಜಯ್‌ ರಾಘವೇಂದ್ರ ಅವರು ರೈತ ಹೋರಾಟಗಾರನಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಂಜುಂಡೇಗೌಡ ನಿರ್ದಶನ ಮಾಡಿದ್ದಾರೆ. ಈ ಸಿನಿಮಾದ ಕಥೆ ಕೇಳಿದ ನಟ ವಿಜಯರಾಘವೇಂದ್ರ,”ಸಿನಿಮಾದ ವಿಷಯದ ಆಯ್ಕೆ ಚೆನ್ನಾಗಿದೆ.

ಅದನ್ನೊಂದು ಕಥೆಯ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಕಾಸಿನ ಸರ ಎನ್ನುವುದು ಬರೀ ಆಭರಣವಲ್ಲ. ಗರಾಮೀಣ ಭಾಗದಲ್ಲಿ ಅದಕ್ಕೊಂದು ಒಳಾರ್ಥವಿದೆ. ಅದರ ಜೊತೆಗೆ ರೈತರ ಸಮಸ್ಯೆಗಳು ಇವೆ. ಈ ಸಿನಿಮಾದಲ್ಲಿ ಸುಂದರೇಶ ಎಂಬ ರೈತ ಹೋರಾಟಗಾರನಾಗಿ ನಾನು ಕಾಣಿಸಿಕೊಂಡಿದ್ದೇನೆ. ವ್ಯವಸಾಯದ ಮೇಲೆ ಭರವಸೆ ಇಟ್ಟು ಬರುವ ಯುವಕನ ಪಾತ್ರದಲ್ಲಿ ನಟಿಸಿದ್ದೇನೆ” ಎಂದು ಸಿನಿಮಾ ಆರಂಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ “ಕಬ್ಜ” ಸಿನಿಮಾದ ಟ್ರೈಲರ್‌ ಲಾಂಚ್‌ ಡೇಟ್‌ ಫಿಕ್ಸ್‌

ಇದನ್ನೂ ಓದಿ : Shilpa Shetty : ಸ್ಯಾಂಡಲ್‌ವುಡ್‌ಗೆ ಮತ್ತೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ : ಯಾವ ಸಿನಿಮಾಕ್ಕಾಗಿ ಗೊತ್ತಾ ?

ಇದನ್ನೂ ಓದಿ : ಉರ್ಫಿ ಜಾವೇದ್‌ ರೀತಿ ಕಾಣಿಸಿಕೊಂಡ ಕಿರಿಕ್‌ ಬೆಡಗಿ : ಫೋಟೋ ಆಯ್ತು ಸಖತ್‌ ವೈರಲ್‌

ನಟಿ ಹರ್ಷಿಕಾ ಪೂರ್ಣಚ್ಚ ಕನ್ನಡ ಸಿನಿರಂಗದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿ ಹರ್ಷಿಕಾ ಸಂಪಿಗೆ ಪಾತ್ರದಲ್ಲಿ ಮಿಂಚಿದ್ದಾರೆ. ಕೃಷಿ ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿ ಹರ್ಷಿಕಾ ನಟಿಸಿದ್ದಾರೆ. ಇನ್ನು ಈ ಸಿನಿಮಾಕ್ಕೆ ದೊಡ್ಡ ನಾಗಯ್ಯ ಬಂಡವಾಳವನ್ನು ಹೂಡಿದ್ದಾರೆ. ಗ್ರಾಮೀಣ ಭಾಗದ ಕಥೆಯಾಗಿದ್ದರಿಂದ ಈ ಸಿನಿಮಾದ ಶೂಟಿಂಗ್‌ನ್ನು ಚೆನ್ನಪಟ್ಟಣ, ಮಳವಳ್ಳಿ ಮುಂತಾದ ಕರ್ನಾಟಕದ 40 ಭಾಗಗಳಲ್ಲಿ ಮಾಡಲಾಗಿದೆ. ಈ ಸಿನಿಮಾದಲ್ಲಿ ಸುಧಾ ಬೆಳವಾಡಿ, ಹಿರಿಯ ನಟಿ ಉಮಾಶ್ರೀ ಕೂಡ ನಟಿಸಿದ್ದಾರೆ.

Actor Vijayaraghavendra – Harshika Poonach starrer Kasina Sara Movie ready for release

Comments are closed.