Protein Diet : ನಿಮಗಿದು ಗೊತ್ತಾ; ದೇಸಿ ಡಯಟ್‌ನಲ್ಲಿ ಯಾವ ರೀತಿ ಪ್ರೋಟೀನ್‌ ಆಹಾರಗಳನ್ನು ಸೇರಿಸಿಕೊಳ್ಳಬೇಕು ಎಂದು…

ಪ್ರೋಟೀನ್‌ (Protein) ಗಳು ನಮ್ಮ ದೇಹ ನಿರ್ಮಾಣ ಮಾಡುವ ಘಟಕಗಳೆಂದು (Building Blocks) ಕರೆಯುತ್ತಾರೆ. ಇದು ಸ್ನಾಯುಗಳ ನಿರ್ಮಾಣಕ್ಕೆ, ಕ್ರಮಬದ್ಧವಾದ ತೂಕ, ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಪ್ರೋಟೀನ್‌ ಅತಿ ಅವಶ್ಯಕ. ಪ್ರೋಟೀನ್‌ಗಳು ಮೈಕ್ರೋನ್ಯೂಟ್ರಿಯೆಂಟ್‌, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿದೆ. ದೇಹದ ಹಲವಾರು ಕಾರ್ಯಗಳನ್ನು ನಡೆಸಲು ಪ್ರೋಟೀನ್‌ ಅಗತ್ಯವಾಗಿದೆ. ಇದು ಸ್ನಾಯು, ಅಂಗಾಂಗ ಮತ್ತು ಕೋಶಗಳ ಅಭಿವೃದಿಗೆ ಅವಶ್ಯಕವಾಗಿರುವ ಮೈನೋ ಆಸಿಡ್‌ಗಳಿಂದ ಮಾಡಲ್ಪಟ್ಟಿವೆ. ಪ್ರೋಟೀನ್‌ ಅನ್ನು ದಿನನಿತ್ಯದ ಆಹಾರದಲ್ಲಿ (Protein Diet) ಸೇರಿಸಿಕೊಳ್ಳುವ ಅಗತ್ಯವೇನಿದೆ ಇಲ್ಲಿದೆ ಓದಿ.

ದಿನನಿತ್ಯದ ಆಹಾರದಲ್ಲಿ ಪ್ರೋಟೀನ್‌ ಸೇರಿಸಿಕೊಳ್ಳಲು ಇರುವ 5 ಕಾರಣಗಳು :

ಹಾರ್ಮೋನ್‌ ಮತ್ತು ಕಿಣ್ವಗಳ ಉತ್ಪತ್ತಿಗೆ:
ಹಾರ್ಮೋನ್‌ ಮತ್ತು ಕಿಣ್ವಗಳ ಉತ್ಪಾದಿಸಲು ಪ್ರೋಟೀನ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕಿಣ್ವಗಳು ಆಹಾರಗಳನ್ನು ಒಡೆಯಲು ಮತ್ತು ರಾಸಾಯನಿಕ ಕ್ರಿಯೆಗಳನ್ನು ನಡೆಸಲು ಸಹಾಯ ಮಾಡುತ್ತದೆ. ಆದರೆ ಹಾರ್ಮೋನುಗಳು ಚಯಾಪಚಯ ಕ್ರಿಯೆ, ಮತ್ತು ಬೆಳವಣಿಗೆಯಂತಹ ಅನೇಕ ದೈಹಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತವೆ.

ಸ್ನಾಯುಗಳ ಅಭಿವೃದ್ಧಿ ಮತ್ತು ದುರಸ್ಥಿ:
ಸ್ನಾಯು ಅಂಗಾಂಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಪ್ರೋಟೀನ್‌ ಅಗತ್ಯವಾಗಿದೆ. ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳ ನಂತರ ದೇಹದ ಸ್ನಾಯುಗಳನ್ನು ಸರಿಪಡಿಸಲು ಮತ್ತು ಅವುಗಳ ಬೆಳವಣಿಗೆಗೆ ಅಗತ್ಯವಾದ ಅಮೈನೋ ಆಸಿಡ್‌ಗಳನ್ನು ಪ್ರೋಟೀನ್‌ ಒದಗಿಸುತ್ತದೆ.

ಶಕ್ತಿ ಹೆಚ್ಚಿಸಲು :
ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬುಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವ ಪ್ರಾಥಮಿಕ ಮೂಲಗಳಾಗಿವೆ. ಆದರೆ ಇತರ ಪೋಷಕಾಂಶಗಳ ಕೊರತೆಯಲ್ಲಿ ಪ್ರೋಟೀನ್‌ಗಳು ಶಕ್ತಿ ಉತ್ಪಾದನೆ ಮಾಡುತ್ತವೆ.

ಪ್ರತಿರಕ್ಷಣಾ ಕಾರ್ಯ ಹೆಚ್ಚಿಸಲು:
ಇಮ್ಯುನ–ಗ್ಲೋಬ್ಯುಲಿನ್ಸ್‌ ನಂತಹ ಪ್ರೋಟೀನ್‌ಗಳು, ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಅವು ಸೋಂಕುಗಳ ವಿರುದ್ಧ ಹೋರಾಡಿ ಶರೀರವನ್ನು ಕಾಪಾಡುತ್ತದೆ.

ಹಸಿವನ್ನು ತಡೆಯಲು:
ಪ್ರೋಟೀನ್‌ಗಳು ಜೀರ್ಣವಾಗಲು ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬುಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಅವು ಬಹಳ ಸಮಯದವರೆಗೆ ಹಸಿವನ್ನು ತಡೆಯುತ್ತವೆ. ಇದು ತೂಕ ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅತಿಯಾಗಿ ತಿನ್ನುವುದರಿಂದಾಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

ಪ್ರೋಟೀನ್‌ ಅಂಶ ಹೆಚ್ಚಿರುವ ದೇಸಿ ಆಹಾರಗಳು:

  • ಬೇಳೆ ಕಾಳುಗಳು
  • ಪನೀರ್‌
  • ಬಾದಾಮಿ
  • ಸೋಯಾಬೀನ್‌
  • ಮೊಟ್ಟೆ

ಇದನ್ನೂ ಓದಿ : National Science Day 2023: ರಾಮನ್ ಎಫೆಕ್ಟ್ ಎಂದರೇನು? ಇದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಇದನ್ನೂ ಓದಿ : Garlic Health Benefits : ದಿನನಿತ್ಯ ಆಹಾರದಲ್ಲಿ ಬೆಳ್ಳುಳ್ಳಿ ಬಳಸಿ ಉತ್ತಮ ಆರೋಗ್ಯ ಪ್ರಯೋಜನ ಪಡೆಯಿರಿ

(Protein Diet, Why we include proteins in our desi diet)

Comments are closed.