ಕೊರೋನಾ ಸೋಂಕಿತ ರನ್ನು ಕೇಳೋರೇ ಇಲ್ಲ…! ಕಹಿಸತ್ಯ ಬಿಚ್ಚಿಟ್ರು ನಟಿ ಅನುಪ್ರಭಾಕರ್…!!

ರಾಜ್ಯದಲ್ಲಿ ಸೆಲೆಬ್ರೆಟಿಗಳಿಗೆ ಕರೋನಾ ವೈರಸ್ ಸೋಂಕು ಕಾಡಲಾ ರಂಭಿಸಿದ್ದು, ಸ್ಟಾರ್ ನಟರ ಬಳಿಕ ಇದೀಗ ನಟಿ ಅನುಪ್ರಭಾಕರ್ ಮುಖರ್ಜಿ ಕೊರೋನಾದಿಂದ ಬಳಲುತ್ತಿದ್ದಾರೆ. ಸೋಂಕಿನಿಂದ ಬಳಲುತ್ತಿರುವ ಅನುಪ್ರಭಾಕರ್ ರಾಜ್ಯ ಸರ್ಕಾರದ ವೈಫಲ್ಯವನ್ನು ಜನತೆ ಮುಂದಿಟ್ಟಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಕಿರುತೆರೆ ನಟಿ ಸುನೇತ್ರಾ ಪಂಡಿತ್ ತಮ್ಮ ಸಹೋದರಿ ಕರೋನಾದಿಂದ ಬಳಲಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ದಿಂದಲೇ ಸಾವನ್ನಪ್ಪಿದರು ಎಂದು ಆರೋಪಿಸಿದ್ದರು. ಕರೋನಾ ಸೋಂಕಿತರಿಗೆ ಅಗತ್ಯವಾದ ಬಿಯು ನಂಬರ್ ಸಿದ್ದಪಡಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಚಿಕಿತ್ಸೆ ವಿಳಂಬವಾಗಿ ಅಕ್ಕ ತೀರಿಕೊಂಡರು ಎಂದಿದ್ದರು. ಇದೀಗ ಈ ಆರೋಪಕ್ಕೆ ಪೂರಕ ಎಂಬಂತೆ ಕೊರೋನಾ ಸೋಂಕಿಗೆ ತುತ್ತಾದ ನಟಿ ಅನುಪ್ರಭಾಕರ್ ಕೂಡ ತಮಗಾದ ಕೆಟ್ಟ ಅನುಭವ ಬಿಚ್ಚಿಟ್ಟಿದ್ದಾರೆ.

ಏಪ್ರಿಲ್ 17ರಂದೇ ಅನುಪ್ರಭಾಕರ್ ಕೊರೋನಾ ಸೋಂಕಿಗೆ ಒಳಗಾಗಿದ್ದರೂ ಇನ್ನು ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಅವರ‌ ಮಾಹಿತಿಯನ್ನು ಕೊರೋನಾ ಸೋಂಕಿತರ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ ಅವರಿಗೆ ಬಿಯು ನಂಬರ್ ದೊರಕಿಸುವಲ್ಲಿ ವಿಫಲವಾಗಿದೆ.

ಬಿಯು ನಂಬರ್ ಇಲ್ಲದೇ ಹಣದಲ್ಲಿ ಕೊರೋನಾ ಸೋಂಕಿತರಿಗೆ ತುರ್ತು ಚಿಕಿತ್ಸೆ ಅಸಾಧ್ಯ. ಹೀಗಾಗಿ ಸರ್ಕಾರದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಅನುಪ್ರಭಾಕರ್ ಆರೋಗ್ಯ ಸಚಿವ ರಿಗೆ ನೇರವಾಗಿ ಟ್ವೀಟ್ ಮಾಡುವ ಮೂಲಕ ಗಮನಕ್ಕೆ ತಂದಿದ್ದಾರೆ.

ಬಳಿಕ ಅನುಪ್ರಭಾಕರ್ ಕಷ್ಟಕ್ಕೆ ಸ್ಪಂದಿಸಿದ ಬಿಬಿಎಂಪಿ ಅಗತ್ಯವಾದ ಎಲ್ಲ ಮಾಹಿತಿ ನೀಡಿದ್ದು, ಬಿಯು ನಂಬರ್ ಒದಗಿಸಿ ಬೇಗ ಹುಶಾರಾಗಿ ಎಂದು ಹಾರೈಸಿದೆ. ಅನುಪ್ರಭಾಕರ್ ಅಂತ ಸೆಲೆಬ್ರೆಟಿಗಳ ಕತೆಯೇ ಹೀಗಾದ್ರೆ ಇನ್ನು ಕೆ.ಆರ್.ಮಾರುಕಟ್ಟೆ  ಪ್ರದೇಶದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರು ಪಾಡೇನು ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ.

ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣ ಹಾಗೂ ಚಿಕಿತ್ಸೆ ಒದಗಿಸುವ ಪ್ರಯತ್ನದಲ್ಲಿ ಸಂಪೂರ್ಣ ವಿಫಲ ವಾಗಿದೆ ಎಂಬ ಮಾತಿಗೆ ಅನು ಪ್ರಭಾಕರ್ ಪ್ರಕರಣ ಒಂದು ಉದಾಹರಣೆ. ಪ್ರತಿನಿತ್ಯ ಇಂಥಹ ನೂರಾರು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಿದ್ದು, ನಿಮ್ಮ ಜೀವಕ್ಕೆ ನೀವೇ ಹೊಣೆ. ರಾಜ್ಯ ಸರ್ಕಾರ ಏನು ಮಾಡುತ್ತಿಲ್ಲ ಎಂಬ ಆಕ್ರೋಶ ಜನರಿಂದ ವ್ಯಕ್ತವಾಗುತ್ತಿದೆ.

Comments are closed.