ಕೊರೋನಾದಿಂದ ನಾನು ಬದುಕುವುದಿಲ್ಲ ಎನ್ನಿಸಿತು…? ಸೋಂಕಿನ ಕರಾಳತೆ ಬಿಚ್ಚಿಟ್ಟ ನಟಿ ಶಾಲಿನಿ…!!

ಕಿರುತೆರೆಯ ರಿಯಾಲಿಟಿ ಶೋ ಹಾಗೂ ಹಾಸ್ಯ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ನಟಿ ಶಾಲಿನಿಗೆ ಕೊರೋನಾ ಸೋಂಕು ತಗುಲಿದೆ. ಸೋಂಕಿನಿಂದ ಉಂಟಾದ ಕರಾಳ ಅನುಭವವನ್ನು ಶಾಲಿನಿ ಬಿಚ್ಚಿಟ್ಟಿದ್ದು ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.

ಟಿವಿಶೋಗಳ ಶೂಟಿಂಗ್ ನಲ್ಲಿದ್ದ ಶಾಲಿನಿಯವರಿಗೆ ಮೊದಲು ಗಂಟಲ ನೋವು ಆರಂಭವಾಗಿದೆ. ಇದು ಶೂಟಿಂಗ್ ಪ್ರಭಾವ ಎಂದುಕೊಂಡ ಶಾಲಿನಿ ಬಳಿಕ ನೋವು ಕಿವಿಮೂಗಿಗೆ ವಿಸ್ತರಿಸಿದಾಗ ವೈದ್ಯರ ಸಲಹೆ ಪಡೆದಿದ್ದಾರೆ.

ಈ ವೇಳೆ ಶಾಲಿನಿಗೆ ಕೊರೋನಾ ತಗುಲಿದ್ದು ತಿಳಿದಿದೆ. ತಕ್ಷಣ ಹೋಂಐ ಷೋಲೇಶನ್ ಗೆ ಒಳಗಾದ ಶಾಲಿನಿ ಮಗುವನ್ನು ಸಂಬಂಧಿ‌ ಮನೆಗೆ ಕಳುಹಿಸಿದ್ದಾರೆ. ಪತಿ ಮನೆಯಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಆದರೆ ಶಾಲಿನಿಗೆ ಕೊರೋನಾ ಸೋಂಕಿನಿಂದ ತೀವ್ರವಾದ ಜ್ವರ, ಮೈಕೈ ನೋವು ಕಾಣಿಸಿಕೊಂಡಿದ್ದು ಹಲ್ಲುಜ್ಜಲು ಸಾಧ್ಯವಾಗದಷ್ಟು ಅಶಕ್ತತೆ ಕಾಡಿತು ಎಂದಿದ್ದಾರೆ

ಅಷ್ಟೇ ಅಲ್ಲ, ನಾನು ಎಂಟನೇ ತರಗತಿಯಲ್ಲಿದ್ದಾಗ ತೀವ್ರ ಅನಾರೋಗ್ಯ ದಿಂದ ಬಳಲಿದ್ದೆ. ಅದೆಲ್ಲವೂ ನೆನಪಾಗಿ ಈ ಭಾರಿ ನಾನು ಬದುಕು ವುದೇ ಇಲ್ಲ ಎನ್ನಿಸಿತು‌. ಹೀಗಾಗಿ ವಿದೇಶದಲ್ಲಿರೋ ಸಹೋದರನಿಗೆ ಪೋನ್ ಮಾಡಿ ವಿಪರೀತ ಅಳಲಾರಂಭಿಸಿದ್ದೆ.

ವಾಸ್ತವ ಪ್ರಜ್ಞೆಯನ್ನೇ ಕಳೆದುಕೊಂಡ ನನಗೆ ಭ್ರಮೆಗಳು ಕಾಡಲಾರಂಭಿ ಸಿತು. ಉಸಿರಾಟದ ತೊಂದರೆ ಎದುರಾಯಿತು. ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಿದ ಮೇಲೆ ಸರಿಯಾಯಿತು. ನನ್ನ ಪತಿಗೂ ಕೊರೊನಾ ಪಾಸಿಟಿವ್ ಬಂದಿತ್ತು ಎಂದು ಶಾಲಿನಿ‌ ಕೊರೋನಾ ಸಂಕಷ್ಟದ ಕತೆ ಹೇಳಿದ್ದಾರೆ.

ಸೆಲೆಬ್ರೆಟಿಗಳು ಸತ್ಯ ಹೇಳಬೇಕು ಎಂದಿರೋ ಶಾಲಿನಿ, ಕೆಲ ಸೆಲಿಬ್ರೆಟಿ ಗಳು ಕೊವೀಡ್ ಕಾಲವನ್ನು ಎಂಜಾಯ್ ಮಾಡ್ತಿರೋದಾಗಿ ಎಲ್ಲ ಪೋಸ್ಟ್ ಹಾಕುತ್ತಿದ್ದಾರೆ. ಇದೆಲ್ಲ ಸರಿಯಲ್ಲ. ಸತ್ಯವನ್ನು ಜನರಿಗೆ ತಿಳಿಸಿ ತಿಳುವಳಿಕೆ ಮೂಡಿಸಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಚೇತರಿಸಿಕೊಂಡಿರೋ ಶಾಲು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿ ದ್ದಾರಂತೆ.

Comments are closed.