raja rani season 2 show : ರಾಜಾ ರಾಣಿ ಸೀಸನ್​ 2 ನಿರೂಪಕಿ ಬದಲಾದ ಬಗ್ಗೆ ಸ್ಪಷ್ಟನೆ ನೀಡಿದ ಅನುಪಮಾ ಗೌಡ

raja rani season 2 show : ಕಲರ್ಸ್​ ಕನ್ನಡದಲ್ಲಿ ಅದ್ಧೂರಿಯಾಗಿ ರಾಜಾ ರಾಣಿ ರಿಯಾಲಿಟಿ ಶೋನ 2ನೇ ಆವೃತ್ತಿ ತೆರೆ ಕಂಡಿದೆ. ಈ ಹಿಂದೆ ಪ್ರಸಾರವಾಗಿದ್ದ ರಾಜಾ ರಾಣಿ ಸೀಸನ್​ 1 ಯಶಸ್ಸಿನ ಬಳಿಕ ಕಲರ್ಸ್ ಕನ್ನಡ ಇದೀಗ ಮತ್ತೊಮ್ಮೆ ಮತ್ತಷ್ಟು ತಾರಾ ದಂಪತಿಯ ಜೊತೆಯಲ್ಲಿ ಈ ಸೀಸನ್​ನ್ನು ಆರಂಭಿಸಿದೆ. ಸೀಸನ್​ 1ನಲ್ಲಿ ನಟ ಸೃಜನ್​ ಲೋಕೇಶ್​, ನಟಿ ತಾರಾ ಅನುರಾಧಾ ತೀರ್ಪುಗಾರರಾಗಿದ್ದರೆ ಅನುಪಮಾ ಗೌಡ ಕಾರ್ಯಕ್ರಮವನ್ನು ನಿರ್ವಹಿಸಿದ್ದರು. ರಾಜಾ ರಾಣಿ ಸೀಸನ್​ 2ನಲ್ಲಿ ಸೃಜನ್​ ಲೋಕೇಶ್​ ಹಾಗೂ ತಾರಾ ಅನುರಾಧ ತೀರ್ಪುಗಾರರಾಗಿ ಮುಂದುವರಿದಿದ್ದಾರೆ. ಆದರೆ ಅನುಪಮಾ ಗೌಡ ಬದಲು ಈ ಬಾರಿ ಜಾನ್ವಿ ರಾಯಲ ಎಂಬವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅನುಪಮಾ ಗೌಡರನ್ನೇ ನಿರೂಪಕಿಯಾಗಿ ಮಾಡಬೇಕಿತ್ತು ಎಂದು ಅನೇಕರು ಶೋ ಬಳಿಕ ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೇ ಸೋಶಿಯಲ್​ ಮೀಡಿಯಾದಲ್ಲಿ ಅನುಪಮಾ ಗೌಡ ಯಾಕೆ ಈ ಶೋನ ನಿರೂಪಣೆ ಮಾಡುತ್ತಿಲ್ಲ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಇಂತಹದ್ದೊಂದು ಚರ್ಚೆ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಾಗುತ್ತಿದ್ದಂತೆಯೇ ಸ್ವತಃ ಅನುಪಮಾ ಗೌಡ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.


ಪ್ರತಿಯೊಬ್ಬರೂ ರಾಜ ರಾಣಿ ಬಗ್ಗೆ ಕೇಳುತ್ತಿದ್ದೀರಿ. ‘ಯುಟ್ಯೂಬ್​​ಗಳಲ್ಲಿ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಹೀಗಾಗಿ ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಅನೇಕರು ನಾನು ಜೀ ಕನ್ನಡದ ಸೂಪರ್ ಜೋಡಿ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೇನೆ ಎಂಬ ಸುದ್ದಿ ಕೂಡ ಹರಿದಾಡ್ತಿದೆ. ಇನ್ನೂ ಕೆಲವರು ನಾನು ಸ್ಟಾರ್​ ಸುವರ್ಣ ಬಳಗ ಸೇರಿದ್ದೀನಿ ಎಂದು ಕೂಡ ಹೇಳ್ತಿದ್ದಾರೆ. ಆದರೆ ನಾನು ಜೀಯಾಗಲಿ ಅಥವಾ ಸುವರ್ಣದಲ್ಲಿಯಾಗಲಿ ಕೆಲಸ ಮಾಡುತ್ತಿಲ್ಲ. ನಾನು ಅಲ್ಲೆಲ್ಲ ಕೆಲಸ ಮಾಡ್ತಿದ್ದರೆ ಇಷ್ಟೊತ್ತಿಗೆ ಶೂಟಿಂಗ್​ನಲ್ಲಿರುತ್ತಿದ್ದೆ. ಆದರೆ ನಾನು ಶೂಟಿಂಗ್​ನಲ್ಲಿ ಭಾಗಿಯಾಗಿರಬೇಕಿತ್ತು. ಆದರೆ ನಾನು ಶೂಟಿಂಗ್​ನಲ್ಲಿ ಭಾಗಿಯಾಗಿಲ್ಲ ಎಂದರೆ ಈ ಶೋಗಳಲ್ಲಿ ನಾನು ಭಾಗಿಯಾಗಿಲ್ಲ ಎಂದೇ ಅರ್ಥ ಎಂದು ಹೇಳಿದ್ದಾರೆ.


ರಾಜಾ ರಾಣಿ ಯಾಕೆ ಮಾಡ್ತಿಲ್ಲ ಎಂದು ಅನೇಕರು ಕೇಳುತ್ತಿದ್ದೀರಿ. ನಾನು ವೈಯಕ್ತಿಕವಾಗಿ ಬ್ಯುಸಿ ಇದ್ದೇನೆ. ನಾನು ರಾಜಾ ರಾಣಿ ಶೋನಿಂದ ಹೊರಬಿದ್ದಿಲ್ಲ. ನನಗೆ ನಿರೂಪಣೆ ಮಾಡಿ ಎಂದು ಕರೆ ಮಾಡುತ್ತಿದ್ದರೆ ನಾನು ಖಂಡಿತವಾಗಿಯೂ ಮಾಡ್ತಿದ್ದೆ. ಆದರೆ ನನಗೆ ಯಾರೂ ಕರೆ ಮಾಡಿಲ್ಲ. ನಾನು ಸೀಸನ್​ 2 ರಾಜಾ ರಾಣಿಯ ನಿರೂಪಕಿಯಲ್ಲ. ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : Teen Shot Mother :ಮೊಬೈಲ್​​ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕ

ಇದನ್ನೂ ಓದಿ : Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್

actress anupama gowda clarifies why she is not part of the raja rani season 2 show

Comments are closed.