communal conflict :ಕೋಮು ಸಂಘರ್ಷದ ಪ್ರಕರಣದಲ್ಲಿ ಶಿವಮೊಗ್ಗ ನಂಬರ್​ 1 , ರೌಡಿಸಂ ಕೇಸ್​ನಲ್ಲಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

communal conflict : ದೇಶದಲ್ಲಿ ಕೋಮುಗಲಭೆಯ ಕಾರಣಕ್ಕೆ ಸಾಕಷ್ಟು ಸಂಘರ್ಷಗಳು ಸಂಭವಿಸುತ್ತಲೇ ಇದೆ. ಅದರಲ್ಲೂ ಕರ್ನಾಟಕದ ವಿಚಾರ ಬಂದರೆ ಕೋಮು ಗಲಭೆ ಅಂದಾಕ್ಷಣ ಮೊದಲು ನೆನಪಿಗೇ ಬರೋದೇ ಮಂಗಳೂರು. ಧರ್ಮದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲಾಗಿ ಮೂರು ಸರಣಿ ಕೊಲೆಗಳು ನಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದ ಮಸೂದ್​​ ಹಾಗೂ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಹಾಗೂ ಸುರತ್ಕಲ್​​ನಲ್ಲಿ ನಡೆದ ಫಾಜಿಲ್​ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದಕ್ಕೂ ಮುನ್ನ ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ ಕೂಡ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು.


ರಾಜ್ಯದಲ್ಲಿ ಧರ್ಮದ ಕಾರಣಕ್ಕೆ ಈ ರೀತಿಯ ಕೊಲೆ ನಡೆಯುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಶಿವಮೊಗ್ಗದಲ್ಲಂತೂ ಸ್ವಾತಂತ್ರ್ಯ ಅಮೃತಮಹೋತ್ಸವದ ದಿನದಂದು ವೀರ ಸಾವರ್ಕರ್​​ ಫೋಟೋ ಅಳವಡಿಸುವ ವಿಚಾರವಾಗಿಯೂ ನಡೆದ ಘರ್ಷಣೆಯಲ್ಲಿ ಇಬ್ಬರ ಮೇಲೆ ಕೊಲೆ ಯತ್ನ ನಡೆದಿತ್ತು. ಈ ಎಲ್ಲಾ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಕೋಮು ಸಂಘರ್ಷದ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಮುಂಚೂಣಿಯಲ್ಲಿವೆ ಎಂಬ ವಿಚಾರ ತಿಳಿದು ಬಂದಿದೆ.


ಕೋಮು ಗಲಭೆ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಅಗ್ರ ಸ್ಥಾನದಲ್ಲಿದ್ದರೆ ರೌಡಿಸಂ ಪ್ರಕರಣಗಳಲ್ಲಿ ಉಡುಪಿ ಹಾಗೂ ಕೋಲಾರ ಜಿಲ್ಲೆಗಳು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಇಲ್ಲಿಯವರೆಗೆ 242 ಪ್ರಕರಣಗಳು ಕೋಮುಗಲಭೆಯ ಕಾರಣಕ್ಕೆ ದಾಖಲಾಗಿದೆ. ಇದರಲ್ಲಿ ಮೊದಲನೇ ಸ್ಥಾನವನ್ನು ಪಡೆದಿರುವ ಶಿವಮೊಗ್ಗದಲ್ಲಿ ಇಲ್ಲಿಯವರೆಗೆ 57 ಪ್ರಕರಣಗಳು ದಾಖಲಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 46 ಕೋಮು ಸಂಘರ್ಷದ ಪ್ರಕರಣಗಳು ದಾಖಲಾಗಿವೆ.


ನಂತರದ ಸ್ಥಾನಗಳಲ್ಲಿ ಬಾಗಲಕೋಟೆ, ದಾವಣಗೆರೆ, ಹಾವೇರಿ ಜಿಲ್ಲೆಗಳು ಸ್ಥಾನ ಪಡೆದಿದ್ದು ಈ ಜಿಲ್ಲೆಗಳಲ್ಲಿ ಕ್ರಮವಾಗಿ 26, 18 ಹಾಗೂ 18 ಕೋಮು ಸಂಘರ್ಷದ ಪ್ರಕರಣಗಳು ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಮಂಡ್ಯ, ಉತ್ತರ ಕನ್ನಡ, ರಾಮನಗರ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮಾತ್ರ ಯಾವುದೇ ರೀತಿಯ ಕೋಮು ಸಂಘರ್ಷದ ಪ್ರಕರಣಗಳು ದಾಖಲಾಗಿಲ್ಲ ಎಂಬುದು ಸಮಾಧಾನಕರ ವಿಚಾರವಾಗಿದೆ.


ಇನ್ನು ರೌಡಿಸಂ ಪ್ರಕರಣಗಳ ಅಂಕಿ ಅಂಶಗಳನ್ನು ನೋಡೋದಾದ್ರೆ ಉಡುಪಿ ಜಿಲ್ಲೆ ಈ ಪ್ರಕರಣಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದ್ದು ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 431 ಪ್ರಕರಣಗಳು ದಾಖಲಾಗಿವೆ. ಇತ್ತ ಕೋಲಾರದಲ್ಲಿ 165 ಪ್ರಕರಣಗಳು ದಾಖಲಾಗಿವೆ. ಈ ಪಟ್ಟಿಯಲ್ಲಿ ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಪಡೆದಿದ್ದು ಕ್ರಮವಾಗಿ 156 ಮತ್ತು 152 ರೌಡಿಸಂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನುಳಿದಂತೆ ಕಲಬುರಗಿಯಲ್ಲಿ 97 ಹಾಗೂ ಬೆಂಗಳೂರು ನಗರದಲ್ಲಿ 60 ರೌಡಿಸಂ ಪ್ರಕರಣಗಳು ವರದಿಯಾಗಿದೆ.


ಕಳೆದ ಮೂರು ವರ್ಷಗಳ ಲೆಕ್ಕಾಚಾರವನ್ನು ನೋಡೋದಾದ್ರೆ ರಾಜ್ಯದಲ್ಲಿ ನಾಲ್ಕು ಕೊಲೆಗಳು ಧರ್ಮ ಸಂಘರ್ಷದ ಕಾರಣಕ್ಕೆ ಸಂಭವಿಸಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ಮಂಗಳೂರು ನಗರದಲ್ಲಿ 1, ಗದಗದಲ್ಲಿ 1 ಹಾಗೂ ಶಿವಮೊಗ್ಗದಲ್ಲಿ 1 ಹತ್ಯೆ ಪ್ರಕರಣ ಸಂಭವಿಸಿದೆ. ಇಷ್ಟು ಮಾತ್ರವಲ್ಲದೇ ಕೋಮು ಸಂಘರ್ಷದ ಸಂದರ್ಭದಲ್ಲಿ ಮಧ್ಯ ಪ್ರವೇಶಕ್ಕೆ ಯತ್ನಿಸಿದ ಪೊಲೀಸರ ಪೈಕಿ 380 ಪೊಲೀಸರು ಗಾಯಗೊಂಡಿದ್ದಾರೆ.

ಇದನ್ನು ಓದಿ : Mohammed Shami Covid Positive : ಮೊಹಮ್ಮದ್ ಶಮಿಗೆ ಕೋವಿಡ್ ಪಾಸಿಟಿವ್.. ಕಂಬ್ಯಾಕ್‌ಗೆ ಮೊದಲೇ ಶಾಕ್, ಆಸೀಸ್ ಸರಣಿಯಿಂದ ಔಟ್

ಇದನ್ನೂ ಓದಿ : Veda Krishnamurthy: ಖಾಸಗಿ ಹೋಟೆಲ್‌ನಲ್ಲಿ ನಡೆಯಿತು ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ.. ಅರ್ಜುನ್ ಜೊತೆ ಉಂಗುರ ಬದಲಿಸಿಕೊಂಡ ಸ್ಟಾರ್ ಕ್ರಿಕೆಟರ್

Comments are closed.