Development fee is mandatory: ಮಂಗಳೂರು ವಿಮಾನ ನಿಲ್ಡಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ : ಅಭಿವೃದ್ಧಿ ಶುಲ್ಕ ಕಡ್ಡಾಯ

ಮಂಗಳೂರು: (Development fee is mandatory) ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೂ ಫೆಬ್ರವರಿ 1 ರಿಂದ ಬಳಕೆದಾರರ ಅಭಿವೃದ್ದಿ ಶುಲ್ಕವನ್ನು ಪಾವತಿಸಲು ಕಡ್ಡಾಯ ಮಾಡಲಾಗಿದೆ.

ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಗಮನದ ಪ್ರಯಾಣಿಕರು ಮಾತ್ರ ಬಳಕೆದಾರರ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಆದರೆ ಫೆಬ್ರವರಿ ಒಂದರಿಂದ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೂ ಕೂಡ ಬಳಕೆದಾರರ ಶುಲ್ಕ ಪಾವತಿಸುವುದು ಕಡ್ಡಾಯ (Development fee is mandatory) ಮಾಡಲಾಗಿದೆ.

ಮೊದಲ ಭಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅಭಿವೃದ್ದಿ ಶುಲ್ಕವನ್ನು ವಿದಿಸಲು ಮತ್ತು ನಿರ್ಗಮಿಸುವ ಪ್ರಯಾಣಿಕರ ಮೇಲೆ ಅಭಿವೃದ್ದಿ ಶುಲ್ಕವನ್ನು ಹೆಚ್ಚಳ ಮಾಡಲು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು ಮಂಗಳೂರು ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿದೆ.

ಎಪ್ರಿಲ್‌ ನಿಂದ ದೇಶೀಯ ನಿರ್ಗಮನ ಪ್ರಯಾಣಿಕರು 150 ರೂ. ಬದಲು 560 ರೂ. ಪಾವತಿಸಬೇಕು. ಈ ಶುಲ್ಕ ಪ್ರತಿ ವರ್ಷ ಏರಲಿದೆ. ಮತ್ತು ನಿರ್ಗಮನ ಪ್ರಯಾಣಿಕರು ಸದ್ಯದಲ್ಲಿ 825 ರೂ. ಪಾವತಿಸುತ್ತಿದ್ದರೆ ಎಪ್ರಿಲ್‌ ನಿಂದ 1,105 ರೂ. ಆಗಲಿದ್ದು, ಮುಂದಿನ ವರ್ಷ ಮತ್ತೆ ಏರಿಕೆಯಾಗಲಿದೆ. ಆಗಮನ ದೇಶೀಯ ಪ್ರಯಾಣಿಕರು ಎಪ್ರಿಲ್‌ ನಿಂದ ಮೊದಲ ಬಾರಿಗೆ 150 ರೂ. ಶುಲ್ಕ ಪಾವತಿಸಲಿದ್ದು, ಮುಂದಿನ ವರ್ಷ ಮಾರ್ಚ್‌ ನಂತರದಲ್ಲಿ 240 ರೂ. ಪಾವತಿಸಬೇಕಾಗುತ್ತದೆ.

ಕಳೆದ ಹನ್ನೆರಡು ವರ್ಷದಿಂದ ಬಳಕೆದಾರರ ಶುಲ್ಕವನ್ನು ಏರಿಕೆ ಮಾಡಿರಲಿಲ್ಲ. ಆದರೆ ಈಗ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೇರಿಸುವುದು, ರನ್‌ ವೇ ವಿಸ್ತರಣೆ ಸಹಿತ ವಿವಿಧ ಅಭಿವೃದ್ದಿ ನಡೆಸುವ ಕಾರಣದಿಂದ ಶುಲ್ಕ ಏರಿಕೆಗೆ ನಿರ್ಧರಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ : Revival of govt school: ಮುಚ್ಚುತ್ತಿದ್ದ ಸರಕಾರಿ ಶಾಲೆಗೆ ಮರುಜೀವ: ವಾತಾವರಣವನ್ನೇ ಬದಲಾಯಿಸಿದ ಹಳೆ ವಿದ್ಯಾರ್ಥಿಗಳು

ಇದನ್ನೂ ಓದಿ : The World luxury cruise ship: ನವಮಂಗಳೂರಿಗೆ ಆಗಮಿಸಿದ ದಿ ವರ್ಲ್ಡ್‌ ಐಷಾರಾಮಿ ಕ್ರೂಸ್‌ ಹಡಗು

ಇದನ್ನೂ ಓದಿ : ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಮಣ ಉತ್ಸವ: ದೇವಳದತ್ತ ಹರಿದು ಬಂದ ಭಕ್ತಸಾಗರ

ಈ ಮಧ್ಯೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಈಗಿರುವ ದರವು ಫೆಬ್ರವರಿ ಹಾಗೂ ಮಾರ್ಚ್‌ ಗೆ ಮಾತ್ರ ಅನ್ವಯವಾಗುವಂತೆ 80 ರೂ. ಇಳಿಕೆಯಾಗಲಿದ್ದು, ಎಪ್ರಿಲ್‌ ನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

Development fee is mandatory: Additional burden for passengers at Mangalore airport: Development fee is mandatory

Comments are closed.