actress ramya come back to movie :ನಟಿ ರಮ್ಯಾ ನಿರ್ಮಾಣ ಸಂಸ್ಥೆಗೆ ಆ್ಯಪಲ್​ ಬಾಕ್ಸ್​ ಎಂದೇ ಹೆಸರಿಟ್ಟಿದ್ದೇಕೆ ಗೊತ್ತಾ

actress ramya come back to movie : ಚಂದನವನದ ಪದ್ಮಾವತಿ ನಟಿ ರಮ್ಯಾ ಸಿನಿಮಾ ರಂಗದಿಂದ ದೂರವುಳಿದು ಅನೇಕ ವರ್ಷಗಳೇ ಕಳೆದಿದ್ದರೂ ಸಹ ಈಗಲೂ ಕೂಡ ಅಭಿಮಾನಿಗಳ ಎದೆಯಲ್ಲಿ ಬೆಚ್ಚನೆಯ ಜಾಗ ಮಾಡಿಕೊಂಡಿದ್ದಾರೆ. ಕೆಲವು ವರ್ಷಗಳ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದ ನಟಿ ರಮ್ಯಾ ಕ್ರಮೇಣ ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ದೂರಾಗಿದ್ದರು. ಆದರೆ ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದ ನಟಿ ರಮ್ಯಾ ಇತ್ತೀಚಿಗೆ ಚಂದನವನಕ್ಕೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.


ನಿನ್ನೆ ನಟಿ ರಮ್ಯಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದರು. ಇದು ಸಖತ್​ ವೈರಲ್​ ಕೂಡ ಆಗಿತ್ತು. ಅದೇನೆಂದರೆ ಗಣೇಶ ಚತುರ್ಥಿಯ ದಿನದಂದು ನಿಮಗೆಲ್ಲ ಸಿಹಿ ಸುದ್ದಿ ನೀಡ್ತೇನೆ ಅಂತಾ ನಟಿ ರಮ್ಯಾ ಅನೌನ್ಸ್​ ಮಾಡಿದ್ದರು. ರಮ್ಯಾ ಇಂತಹದ್ದೊಂದು ಹಾಟ್​ ಟಾಪಿಕ್​ ನೀಡಿದ್ದೇ ತಡ ಅನೇಕರು ಅವರು ಚಂದನವನಕ್ಕೆ ಮರಳುತ್ತಾರಾ ಅಥವಾ ಮದುವೆ ವಿಚಾರ ಹಂಚಿಕೊಳ್ತಾರಾ ಎಂದೆಲ್ಲ ಯೋಚನೆ ಮಾಡಿದ್ದರು. ಆದರೆ ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ನಟಿ ರಮ್ಯಾ ತಾವು ಹೇಳಲು ಹೊರಟ ಸಿಹಿಸುದ್ದಿ ಯಾವುದಾಗಿದ್ದು ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.

ನಟಿ ರಮ್ಯಾ ವಿಚಾರದಲ್ಲಿ ಅನೇಕರು ಊಹೆ ಮಾಡಿದ್ದ ಸಿಹಿ ಸುದ್ದಿ ನಿಜವಾಗಿದೆ. ನಟಿ ರಮ್ಯಾ ಅನೇಕ ವರ್ಷಗಳ ಬಳಿಕ ಮತ್ತೊಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮರಳುತ್ತಿದ್ದೇನೆ ಎಂಬ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ವಿಶೇಷ ಅಂದರೆ ಅವರು ತಮ್ಮ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ನಟಿಯಾಗಿ ಅಲ್ಲದೇ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳಲು ಇಚ್ಛಿಸಿದ್ದಾರೆ. ಗಣೇಶ ಚತುರ್ಥಿಯ ಈ ಶುಭ ದಿನದಂದು ನಟಿ ರಮ್ಯಾ ತಮ್ಮ ಹೊಸ ಪ್ರಾಡಕ್ಷನ್​ ಹೌಸ್​ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ.


ತಮ್ಮ ನೂತನ ಪ್ರಾಡಕ್ಷನ್​ ಹೌಸ್​ಗೆ ನಟಿ ರಮ್ಯಾ ಆ್ಯಪಲ್​ ಬ್ಯಾಕ್ಸ್​ ಎಂದು ಹೆಸರಿಟ್ಟಿದ್ದಾರೆ. ಈ ಸಂಬಂಧ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್ ಮಾಡಿರುವ ನಟಿ ರಮ್ಯಾ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಿಹಿ ಸುದ್ದಿಯ ಬಗ್ಗೆ ನಿಮ್ಮಲ್ಲಿ ಅನೇಕರು ಮಾಡಿರುವ ಊಹೆ ಸರಿಯಾಗಿದೆ. ನಾನು ಮತ್ತೊಮ್ಮೆ ಸಿನಿಮಾವನ್ನು ಮಾಡಲು ತಯಾರಿದ್ದೇನೆ. ಆದರೆ ಈ ಬಾರಿ ನಾನು ನನ್ನ ನಿರ್ಮಾಣ ಸಂಸ್ಥೆಯಾದ ಆ್ಯಪಲ್​ ಬಾಕ್ಸ್​ ಸ್ಟುಡಿಯೋಸ್​ ಮೂಲಕ ನಿರ್ಮಾಪಕಿಯಾಗಲಿದ್ದೇನೆ .

ಆ್ಯಪಲ್​ ಬಾಕ್ಸ್​ ಏನಿರಬಹುದು ಎಂದು ನೀವು ಯೋಚನೆ ಮಾಡುತ್ತಿದ್ದರೆ, ಇದು ಸಣ್ಣದಾದ , ಬಹಳ ಉಪಯೋಗವನ್ನು ಹೊಂದಿರುವ ಸಾಧಾರಣವಾದ ಒಂದು ಪುಟಾಣಿ ಮರದ ಪೆಟ್ಟಿಗೆ. ಆದರೆ ಇದರ ಉಪಯೋಗ ಸಿನಿಮಾ ರಂಗದಲ್ಲಿ ಬಹಳಷ್ಟಿದೆ. ನನ್ನ ಸಿನಿಮಾ ಜರ್ನಿಯುದ್ದಕ್ಕೂ ಈ ಆ್ಯಪಲ್​ ಬಾಕ್ಸ್​ಗಳು ನನಗೆ ಸಾಥ್​ ನೀಡಿವೆ. ಸಿನಿಮಾ ಸೆಟ್​ನಲ್ಲಿ ಕೂರಲು ಜಾಗವಿಲ್ಲದೇ ಇದ್ದಾರೆ, ಕ್ಯಾಮರಾ ಅಥವಾ ಕಲಾವಿದರ ಎತ್ತರವನ್ನು ಹೆಚ್ಚಿಸಬೇಕಾದ ಸಂದರ್ಭಗಳಲ್ಲಿ ಈ ಆ್ಯಪಲ್​​ ಬಾಕ್ಸ್​ ತನ್ನ ಸಹಾಯವನ್ನು ಮಾಡಿದೆ. ಇದರ ಸರಳತೆಯನ್ನು ಕಂಡು ನಾನು ಈ ಪೆಟ್ಟಿಗೆಯಿಂದ ಸ್ಪೂರ್ತಿ ಪಡೆದಿದ್ದೇನೆ. ಹೀಗಾಗಿ ನಾನು ಇದೇ ಹೆಸರನ್ನು ನನ್ನ ನಿರ್ಮಾಣ ಸಂಸ್ಥೆಗೆ ಆಯ್ಕೆ ಮಾಡಿದ್ದೇನೆ ಎಂದು ಬರೆದುಕೊಡಿದ್ದಾರೆ.

ಇದನ್ನು ಓದಿ : Mikhail Gorbachev: ಸೋವಿಯತ್ ಒಕ್ಕೂಟದ ಕೊನೇ ನಾಯಕ ಮಿಖಾಯಿಲ್ ಗೋರ್ಬಚೇವ್ ಇನ್ನಿಲ್ಲ

ಇದನ್ನೂ ಓದಿ : Amazon Flipkart parcels : ಅಮೆಜಾನ್, ಫ್ಲಿಪ್ ಕಾರ್ಟ್ ಪಾರ್ಸಲ್ ಗಳ ಗತಿ ಏನಾಯ್ತು ನೋಡಿದ್ರೆ ನೀವೇ ಶಾಕ್ ಆಗ್ತೀರಾ

Comments are closed.