Rohit Sharma Record: ಸಚಿನ್ ತೆಂಡೂಲ್ಕರ್, ಧೋನಿ, ಕೊಹ್ಲಿಗೂ ಸಾಧ್ಯವಾಗದ ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

ದುಬೈ: ಟೀಮ್ ಇಂಡಿಯಾ ನಾಯಕ, (Rohit Sharma Record)ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿಗೂ ಸಾಧ್ಯವಾಗದ ವಿನೂತನ ದಾಖಲೆಯೊಂದನ್ನು ಬರೆದಿದ್ದಾರೆ.

ಟೀಂ ಇಂಡಿಯಾದ ನಾಯಕ ಹಿಟ್ ಮ್ಯಾನ್ ರೋಹಿತ್​ ಶರ್ಮಾ ವರಿಗೆ ಧೊನಿ ಮತ್ತು ಕೊಹ್ಲಿ (Kohli)ಅಷ್ಟು ಹೈಪ್​ ಸಿಗದಿದ್ದರೂ, ತಮ್ಮದೇ ಆದ ರಣತಂತ್ರಗಳೊಂದಿಗೆ ಭಾರತ ತಂಡದ ಗೆಲುವಿನಲ್ಲಿ ಪ್ರಮುಖರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2022) ಆಡುವ ಮೂಲಕ (Rohit Sharma Record) ಹಿಟ್ ಮ್ಯಾನ್ ರೋಹಿತ್ ಶರ್ಮಾ ದಾಖಲೆಯೊಂದನ್ನು ಬರೆದಿದ್ದಾರೆ. ರೋಹಿತ್ ಶರ್ಮಾ ಈಗ ಭಾರತ ಪರ ಅತೀ ಹೆಚ್ಚು ಏಷ್ಯಾ ಕಪ್ ಟೂರ್ನಿಗಳಲ್ಲಿ ಆಡಿದ ಆಟಗಾರ.

2008ರಿಂದ ಇಲ್ಲಿಯವರೆಗೆ ರೋಹಿತ್ ಶರ್ಮಾ ಸತತ 7 ಏಷ್ಯಾ ಕಪ್ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2008, 2010, 2012, 2014, 2016, 2018 ಮತ್ತು 2022.. ಕಳೆದ 14 ವರ್ಷಗಳಲ್ಲಿ ನಡೆದ ಎಲ್ಲಾ ಏಷ್ಯಾ ಕಪ್ ಟೂರ್ನಿಗಳಲ್ಲಿ ರೋಹಿತ್ ಆಡಿದ್ದಾರೆ. ಭಾರತದ ಯಾವೊಬ್ಬ ಆಟಗಾರನೂ ಇದುವರೆಗೆ 7 ಏಷ್ಯಾ ಕಪ್ ಟೂರ್ನಿಗಳಲ್ಲಿ ಆಡಿಲ್ಲ. ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿದಿದ್ದಾರೆ

ಒಟ್ಟು 7 ಏಷ್ಯಾ ಕಪ್ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಒಟ್ಟು 28 ಪಂದ್ಯಗಳನ್ನಾಡಿದ್ದು, 42ರ ಸರಾಸರಿಯಲ್ಲಿ ಒಂದು ಶತಕ ಹಾಗೂ ಏಳು ಅರ್ಧಶತಕಗಳ ಸಹಿತ 898 ರನ್ ಕಲೆ ಹಾಕಿದ್ದಾರೆ. ಏಷ್ಯಾ ಕಪ್’ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆಯೂ ರೋಹಿತ್ ಶರ್ಮಾ ಹೆಸರಲ್ಲಿದೆ. ಭಾರತ ಪರ 2ನೇ ಸ್ಥಾನದಲ್ಲಿರುವ ಮಾಜಿ ನಾಯಕ ಎಂ.ಎಸ್ ಧೋನಿ ಏಷ್ಯಾ ಕಪ್’ನಲ್ಲಿ ಒಟ್ಟು 24 ಪಂದ್ಯಗಳನ್ನಾಡಿದ್ದು, ಒಂದು ಶತಕ ಹಾಗೂ 3 ಅರ್ಧಶತಕಗಳ ನೆರವಿನಿಂದದ 690 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಮನೆ ಮನೆಗೆ ಬಂದಿದೆ ಹಿಂದೂ ಜಾಗೃತಿ ಸಂದೇಶ

ಇದನ್ನೂ ಓದಿ: ಸಿಹಿಸುದ್ದಿ, ನಿರ್ಮಾಪಕಿಯಾಗಿ ರಮ್ಯಾ ರೀ ಎಂಟ್ರಿ

ಇದನ್ನೂ ಓದಿ: ಏಷ್ಯಾ ಕಪ್ 2022: ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಜೊತೆ ಫೋಟೋ ಕ್ಲಿಕ್ಕಿಸಿದ ಈ ವಿಶೇಷ ವ್ಯಕ್ತಿ ಯಾರು ?

ಏಷ್ಯಾ ಕಪ್’ನಲ್ಲಿ ರೋಹಿತ್ ಶರ್ಮಾ ಸಾಧನೆ:

ಪಂದ್ಯ: 28, ರನ್: 898, ಬೆಸ್ಟ್: 111*, ಸರಾಸರಿ: 42.02, ಶತಕ: 01

2008-2022: ಏಷ್ಯಾ ಕಪ್’ನಲ್ಲಿ ರೋಹಿತ್ ಶರ್ಮಾ:


2008: ಪಂದ್ಯ:06, ರನ್:116, ಸರಾಸರಿ:29, ಬೆಸ್ಟ್:58, ಶತಕ/ಅರ್ಧಶತಕ:00/01
2010: ಪಂದ್ಯ: 04, ರನ್: 132, ಸರಾಸರಿ: 33, ಬೆಸ್ಟ್: 69, ಶತಕ/ಅರ್ಧಶತಕ: 00/01
2012: ಪಂದ್ಯ: 03, ರನ್: 72, ಸರಾಸರಿ: 36, ಬೆಸ್ಟ್: 68, ಶತಕ/ಅರ್ಧಶತಕ: 00/01
2014: ಪಂದ್ಯ: 04, ರನ್: 108, ಸರಾಸರಿ: 36, ಬೆಸ್ಟ್: 56, ಶತಕ/ಅರ್ಧಶತಕ: 00/01
2016: ಪಂದ್ಯ: 05, ರನ್: 138, ಸರಾಸರಿ: 27.60, ಬೆಸ್ಟ್: 83, ಶತಕ/ಅರ್ಧಶತಕ: 00/01
2018: ಪಂದ್ಯ: 05, ರನ್: 317, ಸರಾಸರಿ: 105.66, ಬೆಸ್ಟ್: 111, ಶತಕ/ಅರ್ಧಶತಕ: 01/02

2022: ಪಂದ್ಯ: 01, ರನ್: 12, ಸರಾಸರಿ: 12, ಬೆಸ್ಟ್: 12, ಶತಕ/ಅರ್ಧಶತಕ: 00/00

Hitman Rohit Sharma who broke the records of Sachin, Dhoni and Kohli

Comments are closed.