Gangubai Kathiawadi : ಆಸ್ಕರ್​ಗೆ ಅಧಿಕೃತ ಆಯ್ಕೆ ಪಡೆದುಕೊಳ್ಳುತ್ತಾ ಬಾಲಿವುಡ್​ನ ಗಂಗೂಬಾಯಿ ಕಾಥಿಯಾವಾಡಿ

Gangubai Kathiawadi  : ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಾಥಿಯವಾಡಿ ಸಿನಿಮಾ ಈ ವರ್ಷದ ಅತಿದೊಡ್ಡ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ.ಮುಂಬೈನ ರೆಡ್​ ಲೈಟ್​ ಏರಿಯಾ ಕಮಾಟಿಪುರದ ಅತ್ಯಂತ ಶಕ್ತಿ ಶಾಲಿ, ಪ್ರೀತಿಪಾತ್ರ ಹಾಗೂ ಗೌರವಾನ್ವಿತ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಆಲಿಯಾ ಭಟ್​ (Alia Bhatt) ಅತ್ಯಂತ ಮನೋಜ್ಞವಾಗಿ ನಟಿಸಿದ್ದರು. 1960ರಲ್ಲಿ ನಡೆದ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾವು ಕೊರೊನಾ ಕಾರಣದಿಂದಾಗಿ ರಿಲೀಸ್​ ಡೇಟ್​ನ್ನು ಅನೇಕ ಬಾರಿ ಮುಂದೂಡಿತ್ತು. ಕೊನೆಗೂ ಅಂತಿಮವಾಗಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ ಈ ಸಿನಿಮಾವು ಬ್ಲಾಕ್​ಬಸ್ಟರ್​ ಹಿಟ್​ ಆಯಿತು.

ಸಿನಿಮಾದ ಕತೆ ಹಾಗೂ ಗಂಗೂಬಾಯಿ (Gangubai Kathiawadi) ಪಾತ್ರಕ್ಕೆ ನಟಿ ಆಲಿಯಾ ಭಟ್​ ಜೀವ ತುಂಬಿದ ರೀತಿ ಸಿನಿಮಾ ವಿಮರ್ಷಕರು ಹಾಗೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿತ್ತು. ಇದೀಗ ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಅಧಿಕೃತವಾಗಿ ಆಸ್ಕರ್​ಗೆ ಪ್ರವೇಶ ಪಡೆಯಲಿದೆ ಎಂದು ಹೇಳಲಾಗ್ತಿದೆ. ಗಂಗೂಬಾಯಿ ಕಾಥಿಯಾವಾಡಿ ಬರ್ಲಿನ್​ ಫಿಲಂ ಫೆಸ್ಟಿವಲ್​​ನಲ್ಲಿ ತನ್ನ ವರ್ಲ್ಡ್​ ಪ್ರೀಮಿಯರ್​​ ಪ್ರದರ್ಶನ ಕಂಡಿತ್ತು. ಈ ಸಮಯದಲ್ಲಿ ಗಂಗೂಬಾಯಿ ಸಿನಿಮಾ ಬರೋಬ್ಬರಿ 8 ನಿಮಿಷಗಳ ಕಾಲ ಕರತಾಡನವನ್ನು ಕಂಡಿತ್ತು.

ಇನ್ನು ಒಂದೆರಡು ತಿಂಗಳಲ್ಲಿ ಆಸ್ಕರ್ ಪ್ರಶಸ್ತಿ ಘೋಷಣೆಯಾಗುವ ನಿರೀಕ್ಷೆ ಇದೆ. ಈ ಹಿಂದೆ, ಶಾರುಖ್ ಖಾನ್ ಮತ್ತು ಐಶ್ವರ್ಯ ರೈ ಅಭಿನಯದ ಬನ್ಸಾಲಿಯವರ 2002 ರ ಚಿತ್ರ ‘ದೇವದಾಸ್’ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿತ್ತು.ಬನ್ಸಾಲಿ ಪ್ರಾಡಕ್ಷನ್​ನ ಅಡಿಯಲ್ಲಿ ಜಯಂತಿಲಾಲ್ ಗಡಾದ ಪೆನ್ ಇಂಡಿಯಾ ಲಿಮಿಟೆಡ್‌ನ ಸಹ-ನಿರ್ಮಾಣದಲ್ಲಿ ಮೂಡಿಬಿಂದ ಈ ಸಿನಿಮಾದಲ್ಲಿ ನಟ ಅಜಯ್​ ದೇವಗನ್​ ಆಸಕ್ತಿದಾಯಕ ಪಾತ್ರದಲ್ಲಿ ನಟಿಸಿದ್ದಾರೆ.

ಸದ್ಯ ಬಾಲಿವುಡ್​ನ ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗುತ್ತಿದ್ದು ದೇಸಿ ಮಾರುಕಟ್ಟೆಯಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ತಿದೆ. ಇತ್ತೀಚಿಗೆ ತೆರೆ ಕಂಡ ಲೈಗರ್​ ಸಿನಿಮಾ ಕೂಡ ರಿಲೀಸ್​ ಆದ ಮೊದಲ ದಿನವೇ ನೆಲ ಕಚ್ಚಿದೆ. ಇಂತಹ ಕ್ಲಿಷ್ಟಕರ ಸ್ಥಿತಿಯಲ್ಲಿ ಬಾಲಿವುಡ್​ನ ಸಿನಿಮಾವೊಂದು ಆಸ್ಕರ್​ ಮಟ್ಟಕ್ಕೆ ಏರುತ್ತಿರುವುದು ಬಾಲಿವುಡ್​ ಮಂದಿಯ ಪಾಲಿಗೆ ಮರಭೂಮಿಯಲ್ಲಿ ಓಯಸಿಸ್​ ಸಿಕ್ಕಂತಾಗಿದೆ .

ಇದನ್ನು ಓದಿ : Kerala NEET exam : ಒಳ ಉಡುಪು ತೆಗೆದು ಪರೀಕ್ಷೆ ಬರೆದವ್ರಿಗೆ, ಮತ್ತೊಂದು ಚಾನ್ಸ್

ಇದನ್ನೂ ಓದಿ : Man Lives Atop Palm Tree :ಪತ್ನಿ ಕಾಟದಿಂದ ಬೇಸತ್ತು ಮರವೇರಿ ಕುಳಿತ ಭೂಪ :ಖಾಸಗಿತನಕ್ಕೆ ಧಕ್ಕೆಯೆಂದ ಗ್ರಾಮಸ್ಥರು

Alia Bhatt’s Gangubai Kathiawadi Being Considered As India’s Official Entry to Oscars

Comments are closed.