ಇಂದು ರೆಬೆಲ್ ಸ್ಟಾರ್ ಬರ್ತಡೇ : ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

0

ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ. ಕನ್ನಡ ಚಿತ್ರರಂಗ ಸ್ಟಾರ್ ನಟರಾಗಿ ಅಭಿಮಾನಿಗಳ ಪಾಲಿಗೆ ದೇವರಾಗಿರುವ ಅಂಬಿಯಿಲ್ಲದೇ ಎರಡನೇ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿಕೊಳ್ಳುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ಹಂಬಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡೋದಕ್ಕೆ ಸಜ್ಜಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಖಳನಟ ಜಲೀಲನಾಗಿ ಎಂಟ್ರಿ ಪಡೆದು ಚಂದನವನದ ದೊಡ್ಡಣ್ಣನಾಗಿ ಬೆಳೆದ ಅಂಬರೀಶ್​ ಅವರು 2018 ನವಂಬೆಬರ್​ 24ರಂದು ಮೃತಪಟ್ಟಿದ್ದರು.

ಅಂಬಿ ಮೃತಪಟ್ಟ ನಂತರ ಅವರ ಪತ್ನಿ ಸುಮಲತಾ ಅಂಬರೀಶ್​ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ, ಅವರ ಮಗ ಅಭಿಷೇಕ್​ ಮೊದಲ ಸಿನಿಮಾ ರಿಲೀಸ್​ ಆಗಿತ್ತು. ಈಗ ಅಭಿಷೇಕ್​ ಎರಡನೇ ಸಿನಿಮಾ ಕೆಲಸಗಳು ಆರಂಭಗೊಂಡಿವೆ.

ರೆಬೆಲ್​ ಸ್ಟಾರ್​ ಅಂಬರೀಶ್​ ಇಂದು ಬದುಕಿದ್ದರೆ 68ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಪ್ರತೀ ವರ್ಷವೂ ಅಭಿಮಾನಿಗಳು ಅಂಬಿ ಹುಟ್ಟು ಹಬ್ಬವನ್ನು ವಿಭಿನ್ನವಾಗಿಯೇ ಆಚರಿಸಿಕೊಂಡು ಬಂದಿದ್ದರು.

ಆದ್ರೆ ಈ ಬಾರಿ ಲಾಕ್ ಡೌನ್ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಸಮಾಧಿ ಸ್ಥಳಕ್ಕೆ ತೆರಳೋದಕ್ಕೂ ಅಭಿಮಾನಿಗಳಿಗೆ ಅವಕಾಶವಿಲ್ಲ.

ಆದರೆ ಅಂಬಿ ಅಭಿಮಾನಿಗಳಿಗೆ ತನ್ನ ಹೊಸ ಸಿನಿಮಾವನ್ನು ಗಿಫ್ಟ್ ನೀಡಲು ಹೊರಟಿದ್ದಾರೆ ಅಭಿಷೇಕ್. ಅಂಬರೀಶ್​ ಮಗ ಅಭಿಷೇಕ್​ ಅಂಬರೀಶ್​ ಸುಕ್ಕಾ ಸೂರಿ ನಿರ್ದೇಶನದ ಬ್ಯಾಡ್​ ಮ್ಯಾನರ್ಸ್​ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಇತ್ತೀಚೆಗೆ ಫಸ್ಟ್​ ಪೋಸ್ಟರ್​ಗಳು ಕೂಡ ರಿಲೀಸ್​ ಆಗಿದ್ದವು. ಇಂದು ಈ ಸಿನಿಮಾದ ಫಸ್ಟ್‌ಲುಕ್ ವಿಡಿಯೋ ಇಂದು ರಿಲೀಸ್ ಆಗಲಿದೆ. ಅನೇಕರು ಅಂಬರೀಶ್​ ಅವರಷ್ಟೇ ಗೌರವವನ್ನು ಅಂಬಿ ಪುತ್ರ ಅಭಿಷೇಕ್​ ಮೇಲೂ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಫಸ್ಟ್‌ಲುಕ್ ವಿಡಿಯೋ ಗಿಫ್ಟ್​ ಆಗಿ ಸಿಗಲಿದೆ.

Leave A Reply

Your email address will not be published.