ಕೊರೋನಾ ಎರಡನೇ ಅಲೆಗೆ ಭಾರತ ಅಕ್ಷರಷಃ ನಲುಗಿ ಹೋಗಿದೆ. ಆರೋಗ್ಯ ಸೌಲಭ್ಯ ಕೊರತೆ ಹಾಗೂ ಮೆಡಿಸಿನ್ ಕೊರತೆಯ ಕಾರಣಕ್ಕೆ ಸೋಂಕಿತರ ಸಾವಿನ ಸಂಖ್ಯೆ ಏರುತ್ತಿದೆ. ಇಂಥ ಸಂಕಷ್ಟದ ಹೊತ್ತಿನಲ್ಲಿ ಬಾಲಿವುಡ್ ನಟರು ಸುರಕ್ಷಿತವಾಗಿರಲು ಬೇರೆ ದೇಶಕ್ಕೆ ಪಲಾಯನ ಗೈಯ್ಯುತ್ತಿದ್ದರೇ, ವಿದೇಶದಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ತಾಯ್ನಾಡಿಗಾಗಿ ಮಿಡಿದಿದ್ದು, ಅಮೇರಿಕಾ ಅಧ್ಯಕ್ಷರ ಬಳಿ ಲಸಿಕೆ ನೀಡುವಂತೆ ಮನವಿಮಾಡಿದ್ದಾರೆ.

ತಮ್ಮ ಪತಿ ನಿಕ್ ಜೋನಸ್ ಜೊತೆ ಅಮೇರಿಕಾದಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಭಾರತದ ಸ್ಥಿತಿ ಕಂಡು ಕಳವಳಗೊಂಡಿದ್ದು, ಸಹಾಯ ನೀಡುವಂತೆ ಟ್ವೀಟ್ ಮೂಲಕ ಅಮೇರಿಕ ಅಧ್ಯಕ್ಷರಿಗೆ ಕೋರಿದ್ದಾರೆ.
ಭಾರತ ಕೋವಿಡ್-19 ನಿಂದ ನರಳುತ್ತಿದೆ. ಅದನ್ನು ನೋಡಿ ನನ್ನ ಹೃದಯ ಛಿದ್ರವಾಗಿದೆ. ಯುಎಸ್ ಅಗತ್ಯಕ್ಕಿಂತ 550 ಹೆಚ್ಚಿನ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೆ ನನ್ನ ದೇಶದ ಪರಿಸ್ಥಿತಿ ಸಂಕಷ್ಟದಲ್ಲಿದೆ. ನೀವು ತುರ್ತಾಗಿ ಲಸಿಕೆ ಹಂಚಿಕೊಳ್ಳುತ್ತೀರಾ ಎಂದು ಪ್ರಿಯಾಂಕಾ ಟ್ವೀಟ್ ನಲ್ಲಿ ಪ್ರಶ್ನಿಸಿದ್ದು, ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಗೆ ಟ್ಯಾಗ್ ಮಾಡಿದ್ದಾರೆ.

ನಿತ್ಯಭವಿಷ್ಯ : ಮಿಥುನ ರಾಶಿಯವರಿಗೆ ಹಂತ ಹಂತವಾಗಿ ಅಭಿವೃದ್ದಿಯಾಗಲಿದೆ
ಪ್ರಿಯಾಂಕಾ ಟ್ವೀಟ್ ಗೆ ಧನ್ಯವಾದ ಹೇಳಿರುವ ಗ್ಲೋಬಲ್ ಸಿಟಿಜನ್, ಲಸಿಕೆ ಸಮಾನತೆ ಬಗ್ಗೆ ನಿಮ್ಮ ಕಾಳಜಿ ಶ್ಲಾಘನೀಯ ಎಂದಿದೆ. ಅಲ್ಲದೇ ಆದಷ್ಟು ಬೇಗ ಭಾರತಕ್ಕೆ ಲಸಿಕೆ ನೀಡುತ್ತಿರಾ ಅಗತ್ಯವಿದೆ ಎಂದು ಕೇಳಿಕೊಂಡಿದೆ.

ಕರ್ನಾಟಕ 14 ದಿನ ಜನತಾ ಕರ್ಪ್ಯೂ : ಯಾವುದಕ್ಕೆ ಅವಕಾಶ…? ಯಾವುದಕ್ಕೆ ನಿರ್ಬಂಧ.?
ವಿದೇಶದಲ್ಲಿದ್ದು ತಾಯ್ನಾಡಿನ ಬಗ್ಗೆ ಕಾಳಜಿ ಹೊಂದಿರುವ ಪ್ರಿಯಾಂಕಾಗೆ ಹಾಗೂ ಆಕೆಯ ಟ್ವೀಟ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಅಭಿಮಾನಿಗಳು ನಟ-ನಟಿಯರು ಇಷ್ಟಾದರೂ ದೇಶಪ್ರೇಮ ಮೆರೆಯದೇ ಇರಲು ಹೇಗೆ ಸಾಧ್ಯ. ದೇಶಭಕ್ತಿ ಅಂದ್ರೇ ಇದು ಎಂದು ಪ್ರಿಯಾಂಕಾರನ್ನು ಹೊಗಳಿದ್ದಾರೆ.
