ನಟ ರಾಮ್‌ ಚರಣ್‌ ಪತ್ನಿ ಡೆಲಿವರಿ ಮಾಡಿಸುವ ಡಾಕ್ಟರ್‌ ಯಾರು ಗೊತ್ತಾ ?

ತೆಲುಗು ನಟ ರಾಮ್‌ಚರಣ್‌ ತೇಜಾ ಹಾಗೂ ಉಪಾಸನಾ ಕೋನಿಡೇಲ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ನಟ ಚಿರಂಜೀವಿ ಸೊಸೆ ಉಪಾಸನಾ ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದೀಗ ಉಪಾಸನಾಗೆ ಹೆರಿಗೆ ಮಾಡಿಸುವ ವೈದ್ಯರು (American Gynecologist) ಯಾರು ಎನ್ನುವುದನ್ನು ರಿವೀಲ್‌ ನಟ ರಾಮ್‌ ಚರಣ್‌ ರಿವೀಲ್‌ ಮಾಡಿದ್ದಾರೆ.

ಕೂಸು ಹುಟ್ಟೋಕೆ ಮುಂಚೆ ಕುಲಾವಿ ಎನ್ನಿಸಬಹುದು. ಆದರೆ ಪೋಷಕರಿಗೆ ತಮ್ಮ ಮುದ್ದಿನ ಕಂದಮ್ಮನನ್ನು ಭೂಮಿಗೆ ತರುವುದು ವಿಶಿಷ್ಟ ಅನುಭವ, ಯಾವುದೇ ಸಮಸ್ಯೆ ಇಲ್ಲದೇ ಸುಗಮವಾಗಿ ಹೆರಿಗೆ ಆಗಬೇಕು ಎಂದು ಬಯಸುತ್ತಾರೆ. ಅದೇ ರೀತಿ ನಟ ರಾಮ್‌ ಚರಣ್‌ ತೇಜಾ ಅಮೇರಿಕಾದಲ್ಲಿ ಪತ್ನಿಯ ಹೆರಿಗೆ ಮಾಡಿಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಆ ವೈದ್ಯರು ಯಾರು ಎನ್ನುವುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಮಾರ್ಚ್‌ 12ರಂದು ನಟನೆಯ ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭಕ್ಕಾಗಿ ಈಗಾಗಲೇ ರಾಮ್‌ಚರಣ್‌ ಅಮೆರಿಕಾ ತಲುಪಿದ್ದಾರೆ. ಬುಧವಾರ ಅಮೇರಿಕಾದ ಜನಪ್ರಯಿ ಟಾಕ್‌ ಶೋ “ಗುಡ್‌ ಮಾರ್ನಿಂಗ್‌ ಅಮೇರಿಕಾ”ದಲ್ಲಿ ಭಾಗವಿಹಿಸಿದ್ದರು.

“ಆರ್‌ಆರ್‌ಆರ್”‌ ಸಿನಿಮಾದ “ನಾಟು ನಾಟು” ಹಾಡಿಗೆ ಗೋಲ್ಡನ್‌ ಗ್ಲೋಬ್‌ ಬಂದಿದ್ದು, ಆಸ್ಲರರವ ನಾಮಿನೇಟ್‌ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಶೋನಲ್ಲಿ ಚರಣ್‌ ಸಿನಿಮಾಗಳ ಬಗ್ಗೆ ಮಾತನಾಡುವ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾತನಾಡಿದ್ದಾರೆ. ಶೋನಲ್ಲಿ ರಾಮ್‌ಚರಣ್‌ ಶೀಘ್ರದಲ್ಲೇ ತಂದೆಯಾಗುತ್ತಿರುವ ವಿಚಾರವೂ ಪ್ರಸ್ತಾಪ ಆಯಿತು. ಅಮೇರಿಕಾದ ಪ್ರಸಿದ್ಧ ಗೈನಕಾಲಜಿಸ್ಟ್‌ ಜೆನ್ನಿಫರ್‌ ಆಸ್ಟನ್‌ “ಗುಡ್‌ ಮಾರ್ನಿಂಗ್‌ ಅಮೇರಿಕಾ” ಶೋನ ಸಹ ನಿರೂಪಕಿ ಆಗಿದ್ದಾರೆ. ಆಕೆಯನ್ನು ಭೇಟಿ ಆಗುತ್ತಿರುವುದು ಸಂತಸ ತಂದಿದೆ ಎಂದಿರುವ ಚರಣ್‌ ಫೋನ್‌ ನಂಬರ್‌ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ. ತನ್ನ ಪತ್ನಿ ಅಮೇರಿಕಾಗೆ ಬರುತ್ತಾಳೆ. ಡೆಲಿವರಿಗೆ ನೀವು ಸಿದ್ಧರಿದ್ದರೆ ಚೆನ್ನಾಗಿರುತ್ತದೆ ಎಂದು ಜೆನಿಫರ್‌ ಆಸ್ಟನ್‌ ಬಳಿ ಕೇಳಿದ್ದಾರೆ. ಅದಕ್ಕೆ ಜೆನ್ನಿಫರ್‌ ಓಕೆ ಎಂದಿದ್ದಾರೆ.

‘ನಿಮ್ಮ ಜೊತೆ ಟ್ರಾವೆಲ್ ಮಾಡಲು ಸಿದ್ಧ. ನಿಮ್ಮ ಮೊದಲ ಮಗುವನ್ನು ಹೆರಿಗೆ ಮಾಡಿಸುವುದು ನನಗೂ ಹೆಮ್ಮೆ. ಈ ಬಗ್ಗೆ ಖಂಡಿತ ಚರ್ಚಿಸೋಣ” ಎಂದು ಜೆನ್ನಿಫರ್ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ರಾಮ್ ಚರಣ್, ಉಪಾಸನಾ ವಿವಾಹ ಜೂನ್ 14, 2012 ರಂದು ನಡೆಯಿತು. ಸಿನಿಮಾ, ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ವಿವಾಹ ಸಮಾರಂಭ ವೈಭವವಾಗಿ ನೆರವೇರಿತ್ತು. ಮದುವೆಯಾದ 10 ವರ್ಷಗಳ ನಂತರ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮಗು ಹುಟ್ಟುವ ಸಮಯಕ್ಕೆ ಹೆರಿಗೆಗಾಗಿ ರಾಮ್‌ಚರಣ್- ಉಪಾಸನಾ ದಂಪತಿ ಅಮೆರಿಕಾಗೆ ಹೋದರೂ ಅಚ್ಚರಿ ಪಡಬೇಕಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಗೋಲ್ಡನ್ ಗ್ಲೋಬ್ 2023 ಅವಾರ್ಡ್ ಸೆರೆಮನಿಯಲ್ಲಿ ‘ಆರ್‌ಆರ್‌ಆರ್‌ ‘ ಸಿನಿಮಾದ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಕೀರವಾಣಿ, ರಾಮ್‌ಚರಣ್, ಜ್ಯೂ. ಎನ್‌ಟಿಆರ್ ದಂಪತಿ ಸಮೇತರಾಗಿ ಭಾಗಿ ಆಗಿ ಸಂಭ್ರಮಿಸಿದ್ದಾರೆ. ಆ ನಂತರ ತಮಗೆ ಹುಟ್ಟುವ ಮಗು ಬಗ್ಗೆ ಮೊದಲ ಬಾರಿಗೆ ಉಪಾಸನಾ ಸ್ಪಂದಿಸಿದ್ದರು.

ಇದನ್ನೂ ಓದಿ : Kiccha Sudeep-Venkat Prabhu: ತಮಿಳಿನ ಸೋಲೇ ಇಲ್ಲದ ನಿರ್ದೇಶಕನ ಜತೆ ಕಿಚ್ಚ ಸುದೀಪ್ ಮುಂದಿನ ಚಿತ್ರ

ಇದನ್ನೂ ಓದಿ : Subi Suresh passed away: ಮಲಯಾಳಂ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್‌ ನಿಧನ

ಇದನ್ನೂ ಓದಿ : Actor Anantnag: ಹಿರಿಯ‌ ನಟ ಅನಂತನಾಗ್ ಇಂದು ಬಿಜೆಪಿ ಸೇರ್ಪಡೆ

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೊಗಳನ್ನು ಶೇರ್ ಮಾಡಿ ಆರ್‌ಆರ್‌ಆರ್‌ ತಂಡದ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ದೇಶವೇ ಹೆಮ್ಮೆಪಡುವಂತಹ ಗೆಲುವು ಇದು. ಈ ಪ್ರಯಾಣದಲ್ಲಿ ನಾನು ಭಾಗಿ ಆಗುವಂತೆ ಮಾಡಿದ ರಾಮ್‌ಚರಣ್ ಹಾಗೂ ರಾಜಮೌಳಿಗೆ ತುಂಬು ಹೃದಯದ ಧನ್ಯವಾದ” ಎಂದು ಉಪಾಸನಾ ಬರೆದುಕೊಂಡಿದ್ದರು. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ನಟ ರಾಮ್‌ಚರಣ್ ಇನ್ನು ಹೆಸರಿಡದ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಬುಚ್ಚಿಬಾಬು ನಿರ್ದೇಶನದ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

American Gynecologist : Do you know who is the doctor who delivered actor Ram Charan’s wife Upasana?

Comments are closed.