ಗಿಲ್ಲಿಗೆ ಅಪ್ಪನಿಂದ ಕೋಲಿನ ಒದೆ, ಪ್ರೀತಿಯಿಂದ ಸ್ನಾನ ಮಾಡಿಸಿದ ಅಮ್ಮ; ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಕ್ಷಣ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇಂದು ಎಮೋಷನಲ್ ತುಂಬಿದೆ. ಹೌದು ಸ್ಪರ್ಧಿಗಳು ಇಷ್ಟು ದಿನ ಕಾಯ್ತಾ ಇದ್ದ ಫ್ಯಾಮಿಲಿ ರೌಂಡ್ ಬಂದಿದೆ. ಇಂದಿನ ಸಂಚಿಕೆಯಲ್ಲಿ ಗಿಲ್ಲಿ ನಟನ ಅಪ್ಪ-ಅಮ್ಮ ಬಂದಿದ್ದಾರೆ. ಅಪ್ಪ ಕೋಲು ಹಿಡಿದು ನಮ್ಮ ಕುರಿ ಮಿಸ್ ಆಗಿದೆ ಎಂದು ಬಂದಿದ್ದಾರೆ. ಅಮ್ಮ ಏನಂದ್ರು ನೋಡಿ.
ಕೋಲು ಹಿಡಿದು ಬಂದ ಅಪ್ಪ
ಬಿಗ್ ಬಾಸ್ ಮನೆಗೆ ಬಂದ ಗಿಲ್ಲಿ ನಟ ಅವರ ಅಪ್ಪ ಕೋಲು ಹಿಡಿದು ಬಂದಿದ್ದಾರೆ. ನಮ್ಮ ಕುರಿ ಮಿಸ್ ಆಗಿದೆ ಎಂದು ಗಿಲ್ಲಿಯನ್ನು ಹೊಡೆದು ತಮಾಷೆ ಮಾಡಿದ್ದಾರೆ. ಗಿಲ್ಲಿ ಸಖತ್ ಖುಷಿಯಾಗಿದ್ದಾರೆ.
ಬದಲಾಗಿಲ್ಲ ನೀನು
ಇನ್ನು ಮನೆಗೆ ಬಂದ ಗಿಲ್ಲಿ ತಾಯಿ, ನೀನು ಮನೆಯಲ್ಲಿ ಹೇಗೆ ಇದ್ದೋ, ಹಾಗೇ ಇದ್ದೀಯಾ. ಸ್ವಲ್ಪವೂ ಬದಲಾಗಿಲ್ಲ ಎಂದಿದ್ದಾರೆ. ಇನ್ನು ತಲೆಗೆ ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿ ಖುಷಿಯಾಗಿದ್ದಾರೆ. ಬಿಗ್ ಬಾಸ್ ಮನೆ ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯ್ತು.
ಜನಪ್ರಿಯ ಹಾಸ್ಯ ನಟ
ಗಿಲ್ಲಿ ನಟ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದು, ಅವರ ಕಾಮಿಡಿ ಮತ್ತು ನಟನೆಗೆ ಹೆಸರಾಗಿದ್ದಾರೆ. ಗಿಲ್ಲಿ ನಟ ಅವರು ‘ಕ್ವಾಟ್ಲೆ ಕಿಚನ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.
ಇದನ್ನೂ ಓದಿ:https://kannada.newsnext.live/cinema/rakshita-shetty-mother-in-bigg-boss-house/
ಪ್ರೇಕ್ಷಕರ ಮನ ಗೆದ್ದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಅವರೊಂದಿಗೆ ತಮಾಷೆಯ ಲವ್ ಸ್ಟೋರಿ ನಡೆಸ್ತಾ ಇದ್ದಾರೆ.ಗಿಲ್ಲಿ ನಟ ಅವರ ಹಾಸ್ಯ ಮತ್ತು ನಟನೆಯಿಂದ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಇನ್ನು ಮೊನ್ನೆ ಸಂಚಿಕೆಯಲ್ಲಿ ಸೂರಜ್, ರಾಶಿಕಾ, ಧನುಷ್ ಅವರು ಕುಟುಂಬದವರು ಬಂದಿದ್ದರು. ನಿನ್ನೆ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಅವರ ಅಮ್ಮ ಬಿಗ್ ಬಾಸ್ ಮನೆಗೆ ಬಂದಿದ್ದರು. ಇಂದು ಗಿಲ್ಲಿ ನಟ ಕುಟುಂಬ ಬಂದಿದೆ.



