76 ಕೋಟಿ ಆಸ್ತಿಯನ್ನು ಕೆಜಿಎಫ್ ನಟನ ಹೆಸರಿಗೆ ಬರೆದು ಸಾವನ್ನಪ್ಪಿದ ಮಹಿಳೆ..!

ಸಿನಿಮಾ ನಟ, ನಟಿಯರ ಕುರಿತು ಅಭಿಮಾನಿಗಳು ಅಭಿಮಾನವನ್ನು ತೋರ್ಪಡಿಸುವುದು ಸಾಮಾನ್ಯ. ಹಲವರು ಮೈಮೇಲೆ ಹಚ್ಚೆ ಹಾಕಿಸಿಕೊಂಡ್ರೆ, ಇನ್ನೂ ಕೆಲವರು ರಕ್ತದಾನ, ನೇತ್ರದಾನ ಮಾಡುತ್ತಾರೆ. ಆದ್ರಲ್ಲೂ ಕೆಲ ಅಭಿಮಾನಿಗಳು ಪ್ರಾಣವನ್ನೇ ಬಿಟ್ಟಿದ್ದಾರೆ. ಆದ್ರೆ ಇಲ್ಲೊಬ್ಬರು ಅಭಿಮಾನಿ ತನ್ನ ಹೆಸರಲ್ಲಿ 76 ಕೋಟಿ ರೂಪಾಯಿ ಆಸ್ತಿಯನ್ನು ನೆಚ್ಚಿನ ನಟನ ಹೆಸರಿಗೆ ಬರೆದು ಪ್ರಾಣಬಿಟ್ಟಿದ್ದಾಳೆ.

ಈ ಮಹಿಳೆಯ ಅಭಿಮಾನ ನಿಜಕ್ಕೂ ಅಚ್ಚರಿಯನ್ನು ಹುಟ್ಟಿಸುತ್ತೆ. ಮಾತ್ರವಲ್ಲ ಆಶ್ಚರ್ಯವನ್ನೂ ಮೂಡಿಸುತ್ತೆ. ಮುಂಬೈನ ಮಲಬಾರ್ ಪ್ರಾಂತ್ಯದ ನಿವಾಸಿಯಾಗಿರುವ ನಿಶಾ ಹರಿಶ್ಚಂದ್ರ ಪಾರ್ಟಿ ಎಂಬಾಕೆ ಸಾಯುವ ಮುನ್ನ ತನ್ನ 76 ಕೋಟಿ ಆಸ್ತಿಯನ್ನು ಇದೀಗ ನೆಚ್ಚಿನ ನಟ ಸಂಜಯ್ ದತ್ತ ಹೆಸರಿಗೆ ವಿಲ್ ಬರೆದು ಸಾವನ್ನಪ್ಪಿದ್ದಾಳೆ.

ನಿಶಾ ಹರಿಶ್ಚಂದ್ರ ತನ್ನೆಲ್ಲಾ ಆಸ್ತಿಯನ್ನು ಬರೆದಿರೋದು ಬಾಲಿವುಡ್ ಖ್ಯಾತ ನಟ, ಕೆಜಿಎಫ್ -2 ಸಿನಿಮಾದಲ್ಲಿ ನಟಿಸುತ್ತಿರುವ ಸಂಜಯ್ ದತ್ ಹೆಸರಿಗೆ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯನ್ನು ವಿಲ್ ಮಾಡಿಸಿದ್ದರು ಅನ್ನೋದು ಕುಟುಂಬಸ್ಥರಿಗೆ ಗೊತ್ತೆ ಇರಲಿಲ್ಲ. ಆದರೆ ಮಹಿಳೆ ಸಾವನ್ನಪ್ಪಿದ ಬಳಿಕ ವಿಲ್ ನೋಡಿದ ಕುಟುಂಬಸ್ಥರಿಗೆ ಶಾಕ್ ಆಗಿತ್ತು. ಅಲ್ಲದೇ ವಿಚಾರವನ್ನು ನಟ ಸಂಜಯ್ ದತ್ ಅವರ ಗಮನಕ್ಕೆ ತಂದಿದ್ದಾರೆ. ವಿಷಯ ಕೇಳುತ್ತಿದ್ದಂತೆಯೇ ಸಂಜಯ್ ದತ್ ಒಮ್ಮೆ ಅಚ್ಚರಿಗೊಳಗಾಗಿದ್ದಾರೆ.

ಸಂಜಯ್ ದತ್ ಅವರು ಮಹಿಳೆ ತನ್ನ ಮೇಲೆ ಇಟ್ಟಿದ್ದ ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಆದರೆ ನಿಶಾ ಹರಿಶ್ಚಂದ್ರ ಅವರ ಆಸ್ತಿ ನನಗೆ ಬೇಡ. ಕಾನೂನು ರೀತಿಯಲ್ಲಿಯೇ ತನ್ನ ಹೆಸರಿಗೆ ಬರೆಯಿಸಿದ್ದ ಸಂಪೂರ್ಣ ಆಸ್ತಿಯನ್ನು ಮಹಿಳೆಯ ಕುಟುಂಬಸ್ಥರಿಗೆ ವರ್ಗಾವಣೆ ಮಾಡುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದ್ದಾರೆ. ಸಂಜಯ್ ದತ್ ಅವರ ಮಾನವೀಯ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸಂಜಯ್ ದತ್ ಅವರು ಆಸ್ತಿಯನ್ನು ವಾಪಾಸ್ ನೀಡುತ್ತಿರುವ ವಿಚಾರವನ್ನು ತಿಳಿದ ನಿಶಾ ಹರಿಶ್ಚಂದ್ರ ಅವರ ಕುಟುಂಬಸ್ಥರು ಸಂಜಯ್ ದತ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಸಿನಿಮಾ ನಟ, ನಟಿಯರ ಮೇಲಿನ ಅಭಿಮಾನ ಎಂತಹ ಕೆಲಸವನ್ನು ಮಾಡಿಸುತ್ತದೆ ಅನ್ನೋದನ್ನು ಈ ಸ್ಟೋರಿನೇ ಬೆಸ್ಟ್ ಎಕ್ಸಾಂಪಲ್.

Comments are closed.