Animal Movie : ಅನಿಮಲ್‌ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ : ಕಿಲ್ಲರ್‌ ಅವತಾರದಲ್ಲಿ ರಣಬೀರ್‌ ಕಪೂರ್‌

ನಟ ರಣಬೀರ್‌ ಕಪೂರ್‌ ಬಹು ನಿರೀಕ್ಷಿತ ಅನಿಮಲ್‌ ಸಿನಿಮಾದ (Animal Movie) ಫಸ್ಟ್ ಲುಕ್ ರಿಲೀಸ್‌ ಆಗಿದೆ. ನಟ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್‌ ಸಿನಿಮಾದ ಫಸ್ಟ್‌ ಲುಕ್‌ನ್ನು ಹೊಸ ವರ್ಷದ ದಿನದಂದು 12 ಗಂಟೆಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಸಿನಿತಂಡ ಲಾಂಚ್‌ ಮಾಡಿದ್ದಾರೆ.

ಈ ಸಿನಿಮಾದಲ್ಲಿ ನಟ ರಣಬೀರ್‌ ಕಫೂರ್ ಅವರು ರಕ್ತಸಹಿತ ಲುಕ್‌ನಲ್ಲಿ ಕೊಡಲಿ ಹಿಡಿದುಕೊಂಡು ಸಿಗರೇಟ್‌ ಹಚ್ಚುವುದನ್ನು ನೋಡಬಹುದಾಗಿದೆ. ಭಾನುವಾರ ಅನಿಮಲ್‌ ಸಿನಿಮಾದ ನಿರ್ದೇಶಕರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ರಣಬೀರ್‌ ಕಪೂರ್‌ನ ‘ಕಿಲ್ಲರ್’ ಫಸ್ಟ್ ಲುಕ್‌ನ್ನು ಹಂಚಿಕೊಂಡಿದ್ದಾರೆ. ನಟ ರಣಬೀರ್‌ ಕಪೂರ್‌ ಅವರ ಅಭಿಮಾನಿಗಳು ಈ ಸಿನಿಮಾದ ಫಸ್ಟ್‌ ಲುಕ್‌ನ್ನು ನೋಡಿ ಕುತೂಹಲಗೊಂಡಿದ್ದು, ಈ ಸಿನಿಮಾ ಬಿಡುಗಡೆಗಾಗಿ ಉತ್ಸುಕದಿಂದ ಕಾದಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ನಲ್ಲಿ ರಣಬೀರ್ ಕಪೂರ್ ಕೈಯಲ್ಲಿ ಕೊಡಲಿ ಹಿಡಿದಂತೆ ಮಾರಣಾಂತಿಕವಾಗಿ ಕಾಣಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮದಲ್ಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ, ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದು, ಈ ಪೋಸ್ಟರ್‌ಗೆ ಹಲವಾರು ಅಭಿಮಾನಿಗಳು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಅಷ್ಟೇ ಅಲ್ಲದೇ ಅನಿಲ್ ಕಪೂರ್, ನಟಿ ರಶ್ಮಿಕಾ ಮಂದಣ್ಣ ಹಾಗೂ ಇತರರು ಸೇರಿದಂತೆ ಅನಿಮಲ್‌ ಸಿನಿತಂಡದ ಸದಸ್ಯರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. “ಅನಿಮಲ್‌ನ ಮೊದಲ ನೋಟವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ. ಜನರಿಗೆ ಹೊಸ ವರ್ಷದ ಶುಭಾಶಯಗಳು” ಎಂದು ನಿರ್ದೇಶಕ ಸಂದೀಪ್‌ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅನಿಲ್‌ ಕಪೂರ್‌, “ರಣಬೀರ್ ಕಪೂರ್ ಅಭಿನಯದ ಅನಿಮಲ್‌ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ! ನಿಮಗೆಲ್ಲರಿಗೂ ಕಿಲ್ಲರ್ ಪೋಸ್ಟರ್ ಇಷ್ಟವಾಗಿರುತ್ತೆ” ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಅನಿಮಲ್ ಫಸ್ಟ್ ಲುಕ್ ಇಲ್ಲಿದೆ… ಈ ಲುಕ್ ನೋಡಲು ನಿಮ್ಮೆಲ್ಲರಿಗೂ ತುಂಬಾ ಉತ್ಸುಕವಾಗಿದೆ..” ಎಂದು ರಶ್ಮಿಕಾ ಮಂದಣ್ಣ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ರಣಬೀರ್ ಹೊರತಾಗಿ, ಅನಿಲ್ ಕಪೂರ್, ರಶ್ಮಿಕಾ ಮಂದನಾ, ಬಾಬಿ ಡಿಯೋಲ್ ಮತ್ತು ತ್ರಿಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯ ಹಿಮದಿಂದ ಆವೃತವಾದ ಪರ್ವತಗಳ ನಡುವೆ ಈ ವರ್ಷದ ಏಪ್ರಿಲ್‌ನಲ್ಲಿ ‘ಅನಿಮಲ್‌ ‘ ಚಿತ್ರೀಕರಣ ಪ್ರಾರಂಭವಾಯಿತು. ‘ಅನಿಮಲ್’ ಅನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ.

ಇದನ್ನೂ ಓದಿ : Tunisha Sharma death case : ಶೀಜಾನ್ ಖಾನ್ 14 ದಿನಗಳ ನ್ಯಾಯಾಂಗ ಬಂಧನ : ಖಾನ್‌ ಷರತ್ತುಗಳು ಏನು ಗೊತ್ತಾ ?

ಇದನ್ನೂ ಓದಿ : ರಿಷಬ್‌ ಪಂತ್‌ ಭೇಟಿಯಾದ ಅನುಪಮ್ ಖೇರ್-ಅನಿಲ್ ಕಪೂರ್

ಇದನ್ನೂ ಓದಿ : Swati Muttina Male Haniye Movie : ಪ್ರಬುದ್ಧ ಪ್ರೇಮಕಥೆಯ ಭಾವನಾತ್ಮಕ ಜರ್ನಿ ‘ಸ್ವಾತಿ ಮುತ್ತಿನ ಮಳೆ ಹನಿ’

‘ಅನಿಮಲ್’‌ ಸಿನಿಮಾ ಜೊತೆಗೆ, ರಣಬೀರ್ ಲವ್ ರಂಜನ್ ಅವರ ರೋಮ್-ಕಾಮ್ ‘ತು ಜೂಟಿ ಮೈನ್ ಮಕ್ಕರ್’ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಇದು ಮಾರ್ಚ್ 8, 2023 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಮೂಲಕ ಶ್ರದ್ಧಾ ಕಪೂರ್ ರಣಬೀರ್ ಕಪೂರ್ ಜೊತೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.

Animal Movie First Look Poster Released: Ranbir Kapoor in Killer Avatar

Comments are closed.