Rohit richer than Dhoni in IPL: ಐಪಿಎಲ್‌ನಲ್ಲಿ ರೋಹಿತ್ ಶರ್ಮಾನೇ ಕುಬೇರ, ಧೋನಿ, ಕೊಹ್ಲಿಯನ್ನು ಹಿಂದಿಕ್ಕಿದ ಮುಂಬೈ ಕ್ಯಾಪ್ಟನ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ IPL) ಚಿನ್ನದ ಮೊಟ್ಟೆ ಇಡುವ ಕೋಳಿ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಖ್ಯಾತಿಯ ಐಪಿಎಲ್ ಎಷ್ಟೋ ಕ್ರಿಕೆಟಿಗರಿಗೆ ಬದುಕು ಕಟ್ಟಿ ಕೊಟ್ಟಿದೆ. ಐಪಿಎಲ್’ನಲ್ಲಿ ಅತೀ ಹೆಚ್ಚು ದುಡ್ಡು ಸಂಪಾದಿಸಿರುವ ಆಟಗಾರ ಯಾರು ಎಂಬ ಕುತೂಹಲ ಕ್ರಿಕೆಟ್ ಪ್ರಿಯರಿಗೆ ಇರುವುದು ಸಹಜ. ಇಷ್ಟು ದಿನ ಈ ಪಟ್ಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ (Chennai Super Kings captain MS Dhoni) ವಿರಾಜಮಾನರಾಗಿದ್ದರು. ಇದೀಗ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma richer IPL) ಆ ಪಟ್ಟಕ್ಕೇರಿದ್ದಾರೆ .

ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ಬಾರಿ ಫೈನಲ್ ತಲುಪಿದ್ದು, 4 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ದಾಖಲೆಯ 5 ಬಾರಿ ಪ್ರಶಸ್ತಿ ಗೆದ್ದಿದೆ.

ಐಪಿಎಲ್’ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರ ಸಾಲಿನಲ್ಲಿ ಧೋನಿ ಮತ್ತು ರೋಹಿತ್ ಶರ್ಮಾ ಮಧ್ಯೆ ಪೈಪೋಟಿ ಇತ್ತು. ಇದೀಗ ಧೋನಿ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ. 2008ರಿಂದ 2022ರವರೆಗೆ ರೋಹಿತ್ ಶರ್ಮಾ ಐಪಿಎಲ್’ನಿಂದ ಪಡೆದಿರುವ ಒಟ್ಟು ಸಂಭಾವನೆ 178.6 ಕೋಟಿ. ಧೋನಿ ಇದುವರೆಗೆ ಪಡೆದಿರುವ ಸಂಭಾವನೆ 176.84 ಕೋಟಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2008ರಿಂದ 2022ರವರೆಗೆ ಐಪಿಎಲ್’ನಲ್ಲಿ ಒಟ್ಟು 173.20 ಕೋಟಿ ಸಂಭಾವನೆ ಪಡೆದಿದ್ದಾರೆ.

2021ರ ಐಪಿಎಲ್ ಟೂರ್ನಿಯವರೆಗೆ ಎಂ.ಎಸ್ ಧೋನಿ ಅತೀ ಹೆಚ್ಚು ಸಂಭಾವನೆ ಪಡೆದವರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತ್ಯಜಿಸಿ 12 ಕೋಟಿ ರೂ. ಸಂಭಾವನೆ ಪಡೆದ ಕಾರಣ ಧೋನಿ, 2ನೇ ಸ್ಥಾನಕ್ಕಿಳಿದಿದ್ದಾರೆ.

ರೋಹಿತ್ ಶರ್ಮಾ ಐಪಿಎಲ್’ನ ಮೊದಲು ಆವೃತ್ತಿಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ರೆ, 2011ರಿಂದ ಇಲ್ಲಿಯವರೆಗೆ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಇನ್ನು ಎಂ.ಎಸ್ ಧೋನಿ 2016 ಮತ್ತು 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ರೆ, ಉಳಿದೆಲ್ಲಾ ಟೂರ್ನಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ರನ್ ಮಷಿನ್ ವಿರಾಟ್ ಕೊಹ್ಲಿ 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.

ಇದನ್ನೂ ಓದಿ : ಉರಿಯುತ್ತಿದ್ದ ಕಾರಿನಿಂದ ರಿಷಭ್ ಪಂತ್‌ನನ್ನು ಹೊರಗೆಳೆದು ಪ್ರಾಣ ಉಳಿಸಿದ್ದು ಬಸ್ ಡ್ರೈವರ್

ಇದನ್ನೂ ಓದಿ : Rishabh Pant out IPL 2023 : ಆಸ್ಟ್ರೇಲಿಯಾ ಸರಣಿಗೂ ಇಲ್ಲ, ಐಪಿಎಲ್‌ಗೂ ಇಲ್ಲ; ರಿಷಭ್ ಪಂತ್ ಕಂಬ್ಯಾಕ್ ಸದ್ಯಕ್ಕಿಲ್ಲ

ಐಪಿಎಲ್’ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರರು (ಟಾಪ್-3)
ರೋಹಿತ್ ಶರ್ಮಾ: 178.60 ಕೋಟಿ
ಎಂ.ಎಸ್ ಧೋನಿ: 176.84 ಕೋಟಿ
ವಿರಾಟ್ ಕೊಹ್ಲಿ: 173.20 ಕೋಟಿ

Rohit Sharma richer than Virat Kohli and MS Dhoni in IPL

Comments are closed.