Jharkhand Crime News : ಸೋದರ ಸಂಬಂಧಿಯ ಶಿರಚ್ಛೇದ ಮಾಡಿ : ಸೆಲ್ಫಿ ತೆಗೆದು ವಿಕೃತಿ ಮೆರೆದ ವ್ಯಕ್ತಿ

ಜಾರ್ಖಂಡ : ದೆಹಲಿಯ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣ ದೇಶವೇ ಬಿಚ್ಚಿ ಬಿಳಿಸುವಂತೆ ಮಾಡಿದೆ. ಆದರೆ ಇದೀಗ ಅಂತಹ ಪ್ರಕರಣವನ್ನು ಜನರು ಮರೆಯುವ ಮುನ್ನ ಮತ್ತೊಂದು ಘಟನೆ ಸಂಭವಿಸಿದೆ. (Jharkhand Crime News) ವ್ಯಕ್ತಿಯೊಬ್ಬ ಸೋದರ ಸಂಬಂಧಿಯ ತಲೆ ಕತ್ತರಿಸಿ, ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ತನ್ನ ವಿಕೃತಿ ಮೆರೆದಿದ್ದಾನೆ. ಈ ವಿಕೃತ ಕೊಲೆ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.

55 ವರ್ಷದ ಕುನು ಮುಂಡಾ ಕೊಲೆಯಾಗುವ ದಿನ ಡಿಸೆಂಬರ್‌ 1ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಎಂದು ಮೃತ ಮುಂಡಾನ ತಂದೆ ದೂರು ದಾಖಲಿಸಿ ತಿಳಿಸಿದ್ದಾರೆ. ಮುಂಡಾ ಕೊಲೆಯಾಗುವ ವೇಳೆಯಲ್ಲಿ ಕುಟುಂಬದ ಉಳಿದವರು ಗದ್ದೆ ಕೆಲಸಕ್ಕೆ ಹೋಗಿದ್ದರು. ಮನೆಗೆ ಹಿಂದಿರುವಾಗ ಆತನ ಸೋದರಳಿಯ ಸಾಗರ್‌ ಮುಂಡಾ ಮತ್ತು ಆತನ ಸ್ನೇಹಿತರು ಕುನು ಮುಂಡಾನನ್ನು ಅಪಹರಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅವರು ತಕ್ಷಣ ಕಾರ್ಯಪ್ರವೃತ್ತರಾದರು ಮತ್ತು ಪೊಲೀಸ್‌ ತಂಡವು ತನಿಖೆಯಲ್ಲಿ ತೊಡಗಿತು.

ಇದನ್ನೂ ಓದಿ : Twist in murder case: 7 ವರ್ಷದ ಹಿಂದೆ ಕೊಲೆಗೀಡಾಗಿದ್ದ ಬಾಲಕಿ ಪ್ರತ್ಯಕ್ಷ; ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದನೇ ಅಮಾಯಕ?

ಇದನ್ನೂ ಓದಿ : Polytechnic College Violence : ಎಸ್ಎಫ್ಐ ನಾಯಕಿ, ಪೊಲೀಸರ ಮೇಲೆ ಹಲ್ಲೆ ಪ್ರಕರಣ : ಡ್ರಗ್ಸ್ ಮಾಫಿಯಾದ ಐವರ ಬಂಧನ

ಇದನ್ನೂ ಓದಿ : Colombia landslide: ಕೊಲಂಬಿಯಾದಲ್ಲಿ ಭಾರೀ ದುರಂತ: ಏಕಾಏಕಿ ರಸ್ತೆ ಕುಸಿದು 8 ಮಕ್ಕಳು ಸೇರಿದಂತೆ 34ಕ್ಕೂ ಹೆಚ್ಚು ಮಂದಿ ದುರ್ಮರಣ

ಖುಂಟಿ ಜಿಲ್ಲೆಯಲ್ಲಿ 20 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ 24 ವರ್ಷದ ಸಂಬಂಧಿಯ ಶಿರಚ್ಛೇದ ಮಾಡಿದ್ದಾನೆ. ಈ ಘಟನೆಯಲ್ಲಿ ಇನ್ನೂ ಅಚ್ಚರಿಯ ವಿಷಯವೆನೆಂದರೆ, ಕತ್ತರಿಸಿದ ತಲೆಯೊಂದಿಗೆ ಆರೋಪಿ ಸ್ನೇಹಿತರು “ಸೆಲ್ಫಿ” ತೆಗೆದುಕೊಂಡಿದ್ದಾರೆ. ಹತ್ಯೆಯ ಬಳಿಕ ಸಾಗರ ಶವವನ್ನು ಗೋಪ್ಲಾ ಕಾಡಿನಲ್ಲಿ ಹೂತಿಟ್ಟು, ತಲೆಯನ್ನು 15 ಕಿ.ಮೀ. ದೂರದ ದುಲುವಾ ಟೋಂಗ್ರಿ ಬಳಿಯ ಚರಂಡಿಗೆ ಎಸೆದಿರುತ್ತಾನೆ. ಇತ್ತೀಚೆಗೆ ಮುರ್ಹು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರ ತಂದೆ ದಾಸಾಯಿ ಮುಂಡಾ ಡಿಸೆಂಬರ್‌ 2ರಂದು ದಾಖಲಿಸಿದ ದೂರಿನ ಆಧಾರದ ಮೇಲೆ ಪ್ರಮುಳ ಆರೋಪಿ ಮತ್ತು ಅವರ ಪತ್ನಿ ಸೇರಿದಂತೆಆರು ಜನರನ್ನು ಭಾನುವಾರ ಬಂಧಿಸಲಾಗಿದೆ.

Jharkhand Crime News : Cousin’s beheading: A man who took a selfie and became disfigured

Comments are closed.