Gandhadagudi : ಅಪ್ಪು ಅಭಿನಯದ “ಗಂಧದಗುಡಿ” ಟ್ರೇಲರ್‌ ರೀಲಿಸ್‌ : ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ಇದೇ ಅಕ್ಟೋಬರ್‌ 29ಕ್ಕೆ ಒಂದು ವರ್ಷ ಕಳೆಯುತ್ತದೆ. ಇಂದಿಗೂ ಅವರ ನೆನಪಿನಲ್ಲಿ ಇರುವ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ದೊಡ್ಮನೆ ಹುಡುಗ ಅಪ್ಪು ಅಭಿನಯದ ಕೊನೆಯ ಸಿನಿಮಾ “ಗಂಧದಗುಡಿ” (Gandhadagudi)ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಈ ಸಿನಿಮಾ ಪುನೀತ್‌ ರಾಜ್‌ ಕುಮಾರ್ ಅವರ ಕನಸಿನ ಪ್ರಾಜೆಕ್ಟ್‌ ಕೂಡ ಆಗಿತ್ತು. ಇದನ್ನು ಅಭಿಮಾನಿಗಳ ಮುಂದಿಡುವ ಮೊದಲೇ ಅಪ್ಪು ಬಾರದಲೋಕಕ್ಕೆ ತೆರೆಳಿದ್ದರು. ಈಗ ಇವರ ಅಭಿನಯದ “ಗಂಧದಗುಡಿ” ಸಿನಿಮಾದ ಸಾಕ್ಷ್ಯಚಿತ್ರವನ್ನು ಆಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಮುಂದೆ ತರಲಿದ್ದಾರೆ. ಇನ್ನೂ ಈ ಚಿತ್ರದ ಡಾಕ್ಯಮೆಂಟರಿ ಡೇಟ್‌ನ್ನು ಕೂಡ ಅನೌನ್ಸ್‌ ಮಾಡಿದ್ದಾರೆ. ಇದೇ ಬರುವ ಅಕ್ಟೋಬರ್‌ 9ರಂದು ಬೆಳಿಗ್ಗೆ 10:19ಕ್ಕೆ ಸರಿಯಾಗಿ ಪಿಆರ್‌ಕೆ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ “ಗಂಧದಗುಡಿ” ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದೆ.

ಇನ್ನೂ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕನಸುಗಳನ್ನು ಕಂಡಿರುವ ಪುನೀತ್‌ ರಾಜ್‌ಕುಮಾರ್‌ ಹೊಸ ಹೊಸ ಆಲೋಚನೆಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ಉದ್ದೇಶ ಇಟ್ಟುಕೊಂಡಿದ್ದರು. ತಮ್ಮದೇ ಹೊಸ ಪ್ರೋಡಕ್ಷನ್ಸ್‌ ಆದ “ಪಿಆರ್‌ಕೆ ಪ್ರೋಡಕ್ಷನ್ಸ್‌”ನ್ನು ಸ್ಥಾಪಿಸಿ ಅದರಲ್ಲಿ ಹೊಸಬರಿಗೆ ಅವಕಾಶವನ್ನು ನೀಡುವ ಕೆಲಸವನ್ನು ಕೂಡ ಮಾಡುತ್ತಿದ್ದರು. ಈಗ ಅದೇ ನಿರ್ಮಾಣ ಸಂಸ್ಥೆ ಅಡಿಯಲ್ಲಿ “ಗಂಧದಗುಡಿ” ಚಿತ್ರದ ಸಾಕ್ಷ್ಯಚಿತ್ರ ನಿರ್ಮಾಣವಾಗುತ್ತಿದೆ. ಇದರ ಪೂರ್ಣ ಕೆಲಸ ಮುಗಿಯುದರ ಒಳಗೆ ಇವರು ಬಾರದ ಲೋಕಕ್ಕೆ ತೆರಳಿದರು. ಇದು ಎಲ್ಲರಿಗೂ ನೋವನ್ನುಂಟು ಮಾಡಿದೆ. ಹಾಗೆ ಈ ಸಿನಿಮಾ ಡಾಕ್ಯುಮೆಂಟರಿ ರಿಲೀಸ್‌ಗೆ ಕೂಡ ತಯಾರಾಗಿದೆ. ಅಕ್ಟೋಬರ್‌ 28ರಂದು ಡಾಕ್ಯುಮೆಂಟರಿ ಥಿಯೇಟರ್‌ನಲ್ಲಿ ರಿಲೀಸ್‌ ಆಗಲಿದೆ.

ಇದನ್ನೂ ಓದಿ : Good Bye Arun Bali : ಗುಡ್‌ ಬೈ ರಿಲೀಸ್ ದಿನವೇ ಬಾಲಿವುಡ್ ಖ್ಯಾತ ನಟ ಆಕ್ಟರ್ ಅರುಣ್‌ ಬಾಲಿ ವಿಧಿವಶ

ಇದನ್ನೂ ಓದಿ : Pavan Wadeyar : ಸೆಟ್ಟೇರಿತು ಪವನ್ ಒಡೆಯರ್ ಹಿಂದಿ ಸಿನಿಮಾ- ಚಿತ್ರಕ್ಕೆ ‘ನೋಟರಿ’ ಟೈಟಲ್

ಇದನ್ನೂ ಓದಿ : Ondanke Kadu:’ಒಂದಂಕೆ ಕಾಡು’ ಅಂಗಳದಿಂದ ‘ಓ ಒಲವೇ’ ರೋಮ್ಯಾಂಟಿಕ್ ಸಾಂಗ್ ರಿಲೀಸ್

“ಗಂಧದಗುಡಿ” (Gandhadagudi)ಸಿನಿಮಾದ ಹೊಸ ಪೋಸ್ಟರ್‌ನ್ನು ಗಣೇಶ ಚತುರ್ಥಿಯಂದು ಬಿಡುಗಡೆ ಮಾಡಲಾಗಿತ್ತು. ಪುನೀತ್‌ ರಾಜ್‌ಕುಮಾರ್‌ ಆನೆ ಜೊತೆ ನಿಂತಿರುವ ಪೋಟೋದಲ್ಲಿ “ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ ಭಗವಂತನು ನಿಮಗೆಲ್ಲರಿಗೂ ಸುಖ ಸಮೃದ್ಧಿ, ಆರೋಗ್ಯ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ” ಎಂಬ ಪೋಸ್ಟರ್‌ಗೆ ಶೀರ್ಷಿಕೆಯನ್ನು ಕೊಡಲಾಗಿತ್ತು. ಈಗ ಟ್ರೇಲರ್‌ ರಿಲೀಸ್‌ ಮಾಡಲು “ಒಂದು ಅದ್ಭುತ ಪಯಣಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದೆ…” ಎನ್ನುವ ಶೀರ್ಷಿಕೆ ಮೂಲಕ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Appu Starrer “Gandhadagudi” Trailer Release: Ashwini Puneeth Rajkumar Announces Date

Comments are closed.