Job Recruitment : ONGC 2022 ನೇಮಕಾತಿ ಆರಂಭ ; 871 ಹುದ್ದೆಗಳಿಗೆ ಅರ್ಜಿ ಆಹ್ವಾನ

Job Recruitment :ಆಯಿಲ್‌ ಆಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೋರೇಶನ್‌ ಲಿಮಿಟೆಡ್‌ ( ONGC ) ಇದೀಗ ಪ್ರಸ್ತುತ 871 ಹುದ್ದೆಗಳಿಗೆ ಅರ್ಜಿ ಆಹ್ವಾನ( Job Recruitment ) ನೀಡಿದೆ . 2022 ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭ ಗೊಂಡಿದ್ದು, ಪದವೀದರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದ ವಿವರಗಳು ಈ ಕೆಳಗಿನಂತಿವೆ.

ಹುದ್ದೆ ಹೆಸರು : ಎಇಇ

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 22/09 / 2022 ರಿಂದ ಆರಂಭಗೊಂಡಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12/10/2022

ಹುದ್ದೆಯ ಹೆಸರು ಮತ್ತು ವಿವರ :
ಎಇಇ : 641 ( ಪದವಿ / ಸಂಬಂಧಪಟ್ಟ ಇಂಜಿನಿಯರಿಂಗ್‌ )
ಕೆಮಿಸ್ಟ್‌ : 39 ( ಪಿಜಿ -ಕೆಮಿಸ್ಟ್ರಿ )
ಜಿಯೋಲಜಿಸ್ಟ್‌ : 55 ( ಪಿಜಿ )
ಜಿಯೋಫಿಸಿಸಿಸ್ಟ್‌ : 78 (ಪಿಜಿ)
ಪ್ರೋಗ್ರಾಮಿಂಗ್‌ ಆಫಿಸರ್‌ : 13 ( ಡಿಪ್ಲೋಮಾ/ ಪದವಿ/ ಎಂಸಿಎ )
ಮೆಟೆರಿಯಲ್ಸ್‌ ಆಂಡ್‌ ಮ್ಯಾನೇಜ್ ಮೆಂಟ್‌ : 32 ( ಪದವಿ / ಸಂಬಂಧಪಟ್ಟ ಇಂಜಿನಿಯರಿಂಗ್‌ )
ಟ್ರಾನ್ಸ್ಫರ್‌ ಆಫಿಸರ್‌ : 13 ( ಪದವಿ /ಸಂಬಂಧಪಟ್ಟ ಇಂಜಿನಿಯರಿಂಗ್‌ )

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಯಾವುದೇ ಪದವಿ , ಸ್ನಾತಕೋತ್ತರ ಪದವಿ , ಮೆಕ್ಯಾನಿಕಲ್‌ ಇಂಜಿನಿಯರಿಂಗ್‌, ಪೆಟ್ರೋಲಿಯಂ ಇಂಜಿನಿಯರಿಂಗ್‌, ಸಿವಿಎಲ್‌ ಇಂಜಿನಿಯರಿಂಗ್‌ , ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಆಂಡ್‌ ಕಮ್ಯೂನಿಕೇಷನ್‌ ಇಂಜಿನಿಯರಿಂಗ್‌ , ಇನ್ಸ್ಟ್ರುಮೆಂಟೆಷನ್‌ ಇಂಜಿನಿಯರಿಂಗ್‌, ಕೆಮಿಕಲ್‌ ಇಂಜಿನಿಯರಿಂಗ್‌, ಜಿಯೋಲಜಿಸ್ಟ್‌, ಜಿಯೋ ಫಿಸಿಕ್ಸ್‌ ವಿದ್ಯಾರ್ಹತೆ ಹೊಂದಿರುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಯೋಮಿತಿ : ಕನಿಷ್ಠ 28 ರಿಂದ 40 ವರ್ಷ ವಯಸ್ಸಾಗಿರಬೇಕು.
ಮೀಸಲಾತಿ ರಹಿತ/ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 30 ವರ್ಷ
ಹಿಂದುಳಿದ ವರ್ಗ : 33 ವರ್ಷ
ಎಸ್‌ ಸಿ / ಎಸ್‌ ಟಿ : 35 ವರ್ಷ
ಎಇಇ ಡ್ರಿಲ್ಲಿಂಗ್/‌ ಸಿಮೆಂಟಿಂಗ್‌ ಹುದ್ದೆಗೆ ;
ಮೀಸಲಾತಿ ರಹಿತ/ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 28 ವರ್ಷ
ಹಿಂದುಳಿದ ವರ್ಗ : 31 ವರ್ಷ
ಎಸ್‌ ಸಿ / ಎಸ್‌ ಟಿ : 33 ವರ್ಷ

ನಿಯಮಾವಳಿಯ ಪ್ರಕಾರ ವಯೋಮಿತಿ ಮೇಲೆ ವಿನಾಯಿತಿ ಸಿಗುವುದು.

ಇದನ್ನೂ ಓದಿ : Good Bye Arun Bali : ಗುಡ್‌ ಬೈ ರಿಲೀಸ್ ದಿನವೇ ಬಾಲಿವುಡ್ ಖ್ಯಾತ ನಟ ಆಕ್ಟರ್ ಅರುಣ್‌ ಬಾಲಿ ವಿಧಿವಶ

ಇದನ್ನೂ ಓದಿ : Pavan Wadeyar : ಸೆಟ್ಟೇರಿತು ಪವನ್ ಒಡೆಯರ್ ಹಿಂದಿ ಸಿನಿಮಾ- ಚಿತ್ರಕ್ಕೆ ‘ನೋಟರಿ’ ಟೈಟಲ್

ಅರ್ಜಿ ಶುಲ್ಕ :
ಸಾಮಾನ್ಯ / ಒಬಿಸಿ/ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 300 ರೂ
ಎಸ್‌ ಸಿ / ಎಸ್‌ ಟಿ : ಯಾವುದೇ ಶುಲ್ಕವಿರುವುದಿಲ್ಲ .

ನೇಮಕಾತಿ ಪ್ರಕ್ರಿಯೆ :
ಕಂಪ್ಯೂಟರ್‌ ಆಧಾರದ ಪರೀಕ್ಷೆಯಲ್ಲಿ ಪಾಸಾಗಬೇಕು.

ಇದನ್ನೂ ಓದಿ : Ondanke Kadu:’ಒಂದಂಕೆ ಕಾಡು’ ಅಂಗಳದಿಂದ ‘ಓ ಒಲವೇ’ ರೋಮ್ಯಾಂಟಿಕ್ ಸಾಂಗ್ ರಿಲೀಸ್

ಅರ್ಜಿ ಸಲ್ಲಿಸುವ ವಿಧಾನ :
ONGC ನೇಮಕಾತಿ 2022 ರ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂಬಂಧಪಟ್ಟ ನೇಮಕಾತಿ ಲಿಂಕ್‌ ಕ್ಲಿಕ್‌ ಮಾಡಿ. ಆನ್‌ ಲೈನ್‌ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್‌ ಐಡಿ ಮತ್ತು ಮೊಬೈಲ್‌ ನಂಬರನ್ನು ನೀಡಿ. ವಿದ್ಯರ್ಹತೆಗೆ ಸಂಬಂಧಿಸಿದ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ, ಗೇಟ್‌ ಪರೀಕ್ಷೆಯ ವಿಷಯ ಹಾಗೂ ಅಂಕಪಟ್ಟಿಯನ್ನು ನೀಡಬೇಕು. ಅರ್ಜಿಯ ಜೊತೆಗೆ ಎಸ್‌ ಎಸ್‌ ಎಲ್‌ ಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಅಧಾರ ಪತ್ರ, ಗುರುತಿನ ದೃಡೀಕರಣ ಪತ್ರ , ಹಾಗೂ ಸಂಬಂಧಿಸಿದ ಇನ್ನೀತರ ದಾಖಲೆಗಲನ್ನು ನೀಡತಕ್ಕದ್ದು. ಅಗತ್ಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇತ್ತೀಚಿನ ಭಾವಚಿತ್ರವನ್ನು ಅರ್ಜಿಯ ಜೊತೆ ಒದಗಿಸಿ . ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಲ್ಲಿಕೆ ನಂಬರ್‌ ಮತ್ತು ಸ್ವೀಕೃತಿ ಸಂಖ್ಯೆಯನ್ನು ಗುರುತಿಸಿಟ್ಟುಕೊಳ್ಳಿ. ಅರ್ಜಿ ಸಲ್ಲಿಸಿದ ನಂತರ ಪರೀಕ್ಷೆ ನಡೆಯುವ ದಿನಾಂಕದ ಬಗ್ಗೆ ನಿಮ್ಮ ಮೊಬೈಲ್‌ ಸಂಖ್ಯೆಗೆ ಅಥವಾ ನಿಮ್ಮ ಇಮೇಲ್‌ ಗೆ ಮಾಹಿತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಕೂಡಲೆ ಅರ್ಜಿಯನ್ನು ಸಲ್ಲಿಸಬಹುದು

Oil and Natural Gas Corporation Limited (ONGC) has now invited applications for the current 871 posts (Job Recruitment). The recruitment process for the year 2022 has started and the interested candidates who want to apply for the graduate posts can apply. Details regarding this are as follows.

Comments are closed.