Gandhadagudi : ಅಪ್ಪು “ಗಂಧದಗುಡಿ” ನೋಡಿ ಸಂಭ್ರಮಿಸಿದ ಅಭಿಮಾನಿಗಳು

ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಕನಸು, ಕೊನೆಯ ಸಿನಿಮಾ “ಗಂಧದಗುಡಿ”(Gandhadagudi) ರಾಜ್ಯದಾದ್ಯಂತ ಇಂದು ಬಿಡುಗಡೆಗೊಂಡಿದೆ. ಸಿನಿಮಾಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಕಳೆದ ಒಂದು ವರ್ಷದಿಂದ ಕಾತುರದಿಂದ ಕಾದಿದ್ದಾರೆ ಅಪ್ಪು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಿನಿಮಾ ಮಂದಿರಗಳಲ್ಲಿ ಮುಗಿ ಬಿದಿದ್ದಾರೆ. ಅಕ್ಟೋಬರ್‌ 28 ಕರುನಾಡಿನಾದ್ಯಂತ ಅಪ್ಪು ಸಿನಿಮಾ “ಗಂಧದಗುಡಿ”ಯನ್ನು ಅಭಿಮಾನಿಗಳು ಬಹಳ ವಿಶೇಷವಾಗಿ ಸ್ವಾಗತಿಸಿದ್ದಾರೆ.

“ಗಂಧದಗುಡಿ” ಸಿನಿಮಾದ ಬಗ್ಗೆ ಅಪ್ಪು ಬಹಳಷ್ಟು ಕನಸು ಕಟ್ಟಿಕೊಂಡಿದ್ದು, ತಾನು ಕಂಡಿರುವ ಕನಸನ್ನು ಈಡಿ ವಿಶ್ವಕ್ಕೆ ತೋರಿಸಬೇಕೆಂದು ಆಸೆ ಇಟ್ಟುಕೊಂಡಿದ್ದರು. ಅಪ್ಪು ಆಸೆಯನ್ನು ಈಡೇರಿಸಲು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ದೊಡ್ಮನೆ ಕುಟುಂಬದವರು ಹಗಲಿರುಳು ಶ್ರಮವಹಿಸಿದ್ದಾರೆ. ಅದರಂತೆ ಇಂದು ಕರ್ನಾಟಕದಾದ್ಯಂತ ಸುಮಾರು 225ಕ್ಕೂ ಹೆಚ್ಚಿನ ಸಿನಿಮಾ ಮಂದಿರದಲ್ಲಿ “ಗಂಧದಗುಡಿ” ಸಿನಿಮಾ ರಿಲೀಸ್‌ ಆಗಿದ್ದು, ಹೆಚ್ಚಿನ ಸಿನಿಮಾ ಮಂದಿರದ ಎದರುಗಡೆ ಅಪ್ಪು ಅಭಿನಯದ ಸಿನಿಮಾದ ಕಟೌಟ್‌ಗಳನ್ನು ಹಾಕಲಾಗಿದೆ. ಅಪ್ಪುವಿನ ಕೊನೆಯ ಸಿನಿಮಾ ಗಂದಧ ಗುಡಿ ನಡುರಾತ್ರಿ ಪ್ರೀಮಿಯರ್ ಶೋ ಸೇರಿದಂತೆ ಎಲ್ಲಾ ಶೋಗಳು ಹೌಸ್ ಪುಲ್ ಪ್ರದರ್ಶನವನ್ನು ಕಂಡಿವೆ.ಗಂಧದಗುಡಿ ಸಿನಿಮಾವನ್ನು ನೋಡಲು ಮುಂಜಾನೆಯಿಂದಲೇ ಟಿಕೆಟ್‌ಗಾಗಿ ಮುಗಿಬಿದಿದ್ದಾರೆ.


ನಿನ್ನೆ ರಾಜ್ಯದ ಸುಮಾರು ಐವತ್ತು ಚಿತ್ರಮಂದಿರಗಳಲ್ಲಿ ಸಂಜೆ 7 ಗಂಟೆಗೆ ಪ್ರೀಮಿಯರ್‌ ಶೋವನ್ನು ಆಯೋಜಿಸಿದ್ದು, ಈ ಶೋನಲ್ಲಿ ರಮ್ಯಾ, ಸುಧಾಮೂರ್ತಿ, ಅನುಶ್ರೀ, ಅಜಯ್‌ ರಾವ್‌, ದೇವರಾಜ್‌, ನೆನಪಿರಲಿ ಪ್ರೇಮ್‌, ಗುರುಕಿರಣ್‌, ಸಂಗೀತಾ ಶೃಂಗೇರಿ, ಅಮೃತಾ ಅಯ್ಯಂಗರ್‌, ರೋಹಿತ್‌ ಪದಕಿ, ಅಭಿಷೇಕ್‌ ಅಂಬರೀಷ್‌, ಸಂತೋಷ್‌ ಆನಂದ್‌ ರಾಮ್‌ ಸೇರಿದಂತೆ ಅನೇಕರು 1 ಗಂಟೆ 37 ನಿಮಿಷದ ಗಂಧದಗುಡಿ ಡ್ಯಾಕುಂಮೆಟರಿ ಸಿನಿಮಾವನ್ನು ವಿಕ್ಷೀಸಿ ಭಾವುಕರಾಗಿದ್ದಾರೆ. ಹಾಗೆ ಈ ಸಿನಿಮಾವನ್ನು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಸೇರಿದಂತೆ ಎಲ್ಲಾ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ತಪ್ಪದೇ ನೋಡಿ ಎಂದಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಅರಣ್ಯ ಸಂಪತ್ತು, ವನ್ಯಜೀವಿ, ಕಾಡಿನ ಜನರ ಬದುಕು ಸೇರಿದಂತೆ ಹಲವಾರು ವಿಷಯಗಳನ್ನು ಸಿನಿಮಾದ ಮೂಲಕ ಹೇಳಿದ್ದಾರೆ. ಅಪ್ಪುವರ ಅಪರೂಪದ ಪ್ರಯತ್ನ ಎಲ್ಲರಿಗೂ ಇಷ್ಟವಾಗಿದೆ.

ಇದನ್ನೂ ಓದಿ : Head Bush issue solved: ‘ಹೆಡ್ ಬುಶ್’ ವಿವಾದ ಅಂತ್ಯ; ಕ್ಷಮೆ ಕೋರಿ ಆಕ್ಷೇಪಾರ್ಹ ಪದ ತೆಗೆಯಲು ಒಪ್ಪಿದ ಚಿತ್ರತಂಡ

ಇದನ್ನೂ ಓದಿ : puneeth rajkumar :‘ಗಂಧದಗುಡಿ’ ಮೂಲಕ ಮತ್ತೊಮ್ಮೆ ಕರುನಾಡಿನಲ್ಲಿ ಜೀವಿಸಿದ ಅಪ್ಪು: ನಿರೀಕ್ಷೆಯಂತೆ ಕನ್ನಡಿಗರ ಮನಗೆದ್ದ ಅಪ್ಪು ಕನಸು

ಇದನ್ನೂ ಓದಿ : Surrogacy controversy: ಬಾಡಿಗೆ ತಾಯ್ತನ ವಿವಾದ: ಶಿವನ್ -ನಯನತಾರಾ ದಂಪತಿಗೆ ಕ್ಲೀನ್ ಚಿಟ್

ಅಮೋಘವರ್ಷ “ಗಂಧದಗುಡಿ” ಡ್ಯಾಕುಮೆಂಟರಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಸಿನಿಮಾ ನಿರ್ಮಾಣಗೊಂಡಿರುತ್ತದೆ. ಈ ಸಿನಿಮಾವು ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಎಲ್ಲೆಡೆ ಪ್ರದರ್ಶನಗೊಳ್ಳುತ್ತಿದೆ.

Appu’s fans celebrated after seeing “Gandhadagudi”.

Comments are closed.