Fire accident in Hampi : ಹಂಪಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ; ಅಂಗಡಿಗಳು, ಛತ್ರ, ಹೋಟೆಲ್ ಭಸ್ಮ

ಹಂಪಿ : (Fire accident in Hampi) ವಿಶ್ವ ವಿಖ್ಯಾತ ಹಂಪಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿಗಳು, ಛತ್ರ, ಹೋಟೆಲ್‌ಗಳು ಸುಟ್ಟು ಭಸ್ಮವಾಗಿದ್ದು, ಕೋಟ್ಯಾಂತರ ಮೌಲ್ಯದ ನಷ್ಟ ಸಂಭವಿಸಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಯುನೆಸ್ಕೋ ವಿಶ್ವ ಪರಂಪರಾ ತಾಣ ಎಂದು ಕರೆಯಲ್ಪಡುವ ಐತಿಹಾಸಿಕ ಸ್ಥಳವಾಗಿರುವ ಹಂಪಿಯಲ್ಲಿ ಬೆಂಕಿ ಅವಘಡ(Fire accident in Hampi) ಸಂಭವಿಸಿದೆ. ಮೊದಲು ಹಂಪಿಯ ಜನತಾ ಪ್ಲಾಟ್‌ ನ ಬಟ್ಟೆ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ಪಕ್ಕದಲ್ಲಿದ್ದ ಅಂಗಡಿ, ಹೋಟೆಲ್‌ ಮತ್ತು ಛತ್ರಕ್ಕೆ ಬೆಂಕಿ ಆವರಿಸಿಕೊಂಡಿದೆ.ಈ ಸಂದರ್ಭದಲ್ಲಿ ಜನತಾ ಪ್ಲಾಟ್‌ ನಲ್ಲಿನ ಹೋಟೆಲ್‌ ನಲ್ಲಿದ್ದ ಸಿಲಿಂಡರ್‌ ಗಳು ಬ್ಲಾಸ್ಟ್‌ ಆಗಿದ್ದು,ಅದರ ಪ್ರಭಾವದಿಂದ ಇಡೀ ಮ್ಯಾಂಗೋ ಟ್ರೀ ಹೋಟೆಲ್‌ ಪೂರ್ತಿಯಾಗಿ ಭಸ್ಮವಾಗಿದೆ.

ಇದನ್ನೂ ಓದಿ : Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಇದನ್ನೂ ಓದಿ : puneeth rajkumar :‘ಗಂಧದಗುಡಿ’ ಮೂಲಕ ಮತ್ತೊಮ್ಮೆ ಕರುನಾಡಿನಲ್ಲಿ ಜೀವಿಸಿದ ಅಪ್ಪು: ನಿರೀಕ್ಷೆಯಂತೆ ಕನ್ನಡಿಗರ ಮನಗೆದ್ದ ಅಪ್ಪು ಕನಸು

ಅಗ್ನಿ ಅನಾಹುತದಲ್ಲಿ ಹಂಪಿಯ ಪ್ರಸಿದ್ದ ಅನ್ನಪೂರ್ಣೇಶ್ವರಿ ಛತ್ರ, ಬಟ್ಟೆ ಅಂಗಡಿಗಳು ಮತ್ತು ಹಂಪಿಯ ಪ್ರಸಿದ್ದ ಮ್ಯಾಂಗೋ ಟ್ರೀ ಹೋಟೆಲ್‌ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿ ಅವಘಡ ಸಂಭವಿಸಿದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೆ ಪೋಲೀಸರು ಮತ್ತು ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಪೋಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಇದನ್ನೂ ಓದಿ : Road Accident , 3 died : ಅಮೇರಿಕಾದಲ್ಲಿ ಭೀಕರ ರಸ್ತೆ ಅಪಘಾತ ; ಮೂವರು ಭಾರತೀಯ ವಿದ್ಯಾರ್ಥಿಗಳು ಸಾವು

ಈ ಘಟನೆಯ ಕುರಿತಂತೆ ಹಂಪಿ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ.

(Fire accident in Hampi) There was an accidental fire accident in the world famous Hampi, shops, huts, hotels were burnt down and a loss worth crores was caused. But luckily there was no loss of life.

Comments are closed.