Masala Papad: ಟೀ ಟೈಮ್‌ಗೆ ಬೆಸ್ಟ್‌ ಗರಿಗರಿಯಾದ ಮಸಾಲಾ ಪಾಪಡ್‌

ರುಚಿಕಟ್ಟಾದ ಖಾದ್ಯಗಳ ಮಧ್ಯೆಯೂ ಪಾಪಡ್‌ (Papad) ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿದೆ. ಮನೆ ಭಾಷೆಯಲ್ಲಿ ಇದರ ಹೆಸರು ಹಪ್ಪಳ. ಎಲ್ಲಾ ಸಮಾರಂಭಗಳಲ್ಲಿ ಹಪ್ಪಳವಿಲ್ಲದೇ ಊಟ ಮುಗಿಯುವುದೇ ಇಲ್ಲ. ಅಷ್ಟರ ಮಟ್ಟಿಗೆ ಇದು ಜನಪ್ರಿಯ. ಹಪ್ಪಳ ತಿಳಿ ಸಾರು, ಮೊಸರನ್ನ ಮುಂತಾದವುಗಳ ರುಚಿ ಹೆಚ್ಚಿಸುತ್ತದೆ. ಇದು ಊಟದ ಮೊದಲು ತಿನ್ನುವ ಸ್ಟಾರ್ಟರ್‌ ಆಗಿಯೂ ಹೊಟೇಲ್‌ಗಳಲ್ಲಿ ಜನಪ್ರಿಯವಾಗಿದೆ. ಹೊಟೇಲ್‌ಗಳಲ್ಲಿ ವಿವಿಧ ರೀತಿಯ ಮಸಾಲಾ ಪಾಪಡ್‌ಗಳು (Masala Papad) ಸಿಗುತ್ತವೆ. ಇವುಗಳನ್ನು ಸಂಜೆಯ ಟೀ ಟೈಮ್‌ಗೂ ತಿನ್ನಬಹುದು. ಹಾಗಾದರೆ ಮಸಾಲಾ ಪಾಪಡ್‌ ಮನೆಯಲ್ಲಿಯೇ ಮಾಡುವುದು ಹೇಗೆ?

ಮನೆಯಲ್ಲಿಯೇ ರುಚಿಯಾದ ಮತ್ತು ಗರಿಗರಿಯಾದ ಮಸಾಲಾ ಪಾಪಡ್‌ಗಳನ್ನು ತಯಾರಿಸಬಹುದು. ಇಲ್ಲಿ 3 ರೀತಿಯ ಮಸಾಲಾ ಪಾಪಡ್‌ಗಳನ್ನು ತಯಾರಿಸುವುದು ಹೇಗೆ ಎಂದು ಹೇಳಿದ್ದೇವೆ.

ಹೆಲ್ದೀ ಮಸಾಲಾ ಪಾಪಡ್‌ :
ಹೆಲ್ದೀ ಮಸಾಲಾ ಪಾಪಡ್‌ ತಯಾರಿಸಲು ಮೊದಲಿಗೆ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನಿಮ್ಮಿಷ್ಟದ ಪಾಪಡ್‌ (ಹಪ್ಪಳ) ತೆಗೆದುಕೊಳ್ಳಿ. ಅದನ್ನು ಡ್ರೈ ರೋಸ್ಟ್‌ ಮಾಡಿ. ನಂತರ ಅದರ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಹರಡಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಚಾಟ್‌ ಮಸಾಲಾ ಸೇರಿಸಿ. ಈಗ ಹೆಲ್ದೀ ಮಸಾಲಾ ಪಾಪಡ್‌ ಸವಿಯಲು ಸಿದ್ದ.

ಇದನ್ನೂ ಓದಿ : Millets : ಚಳಿಗಾಲಕ್ಕೆ ಸಿರಿಧಾನ್ಯಗಳೇ ಬೆಸ್ಟ್‌ : ಹೇಗೆ ಅಂತೀರಾ…

ಚೀಸ್‌ ಮಸಾಲಾ ಪಾಪಡ್‌ :
ಚೀಸ್‌ ಮಸಾಲಾ ಪಾಪಡ್‌ ತಯಾರಿಸಲು ಈರುಳ್ಳಿ, ಟೊಮೆಟೊ ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿಗಳನ್ನು ಸಣ್ಣೆಗೆ ಹೆಚ್ಚಿಕೊಳ್ಳಿ. ನಿಮ್ಮಿಷ್ಟದ ಪಾಪಡ್‌ ತೆಗದುಕೊಳ್ಳಿ. ಉದ್ದಿನ ಹಪ್ಪಳವಾದರೆ ರುಚಿ ಹೆಚ್ಚು. ಅದನ್ನು ಎಣ್ಣೆಯಲ್ಲಿ ಕರಿಯಿರಿ ಅಥವಾ ಡ್ರೈ ರೋಸ್ಟ್‌ ಮಾಡಿ. ಅದರ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಹರಡಿ. ಅದರ ಮೇಲೆ ಚಾಟ್‌ ಮಸಾಲಾ, ಚಿಲ್ಲಿ ಫ್ಲೇಕ್ಸ್‌ ಹಾಕಿ. ಚೀಸ್‌ ತುರಿಯನ್ನು ಅದರ ಮೇಲೆ ಹಾಕಿ. ರುಚಿಯಾದ ಚೀಸ್‌ ಮಸಾಲಾ ಪಾಪಡ್‌ ಸವಿಯಿರಿ.

ಉದ್ದಿನ ಬೇಳೆಯ ಮಸಾಲಾ ಪಾಪಡ್‌:
ಇದನ್ನು ತಯಾರಿಸಲು ಮೊದಲು ಉದ್ದಿನ ಬೇಳೆಯ ಹಪ್ಪಳ (ಪಾಪಡ್‌)ವನ್ನು ಎಣ್ಣೆಯಲ್ಲಿ ಕರಿಯಿರಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಹಾಕಿ. ಅದಕ್ಕೆ ಚಾಟ್‌ ಮಸಾಲಾ, ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ. ಈಗ ಉದ್ದಿನ ಬೇಳೆಯ ಮಸಾಲಾ ಪಾಪಡ್‌ ರೆಡಿ.

ಮಸಾಲಾ ಪಾಪಡ್‌ಗಳು ಸಂಜೆಯ ಟೀ ಟೈಮ್‌ನ ಸಣ್ಣ ಹಸಿವನ್ನು ನೀಗಿಸಬಲ್ಲದು ಮತ್ತು ಮನೆಯಲ್ಲಿಯೇ ತಯಾರಿಸಿರುವುದರಿಂದ ಆರೋಗ್ಯಕ್ಕೂ ಉತ್ತಮ.

ಇದನ್ನೂ ಓದಿ : Chicken Pepper Dry Recipe : ಮನೆಯಲ್ಲೇ ಮಾಡಿ ಚಿಕನ್‌ ಪೆಪ್ಪರ್‌ ಡ್ರೈ ರೆಸಿಪಿ

(Masala Papad is the best tea-time snack. Try these 3 types of delicious papad)

Comments are closed.