ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಅಶ್ವಿನಿ ಗೌಡ, ಒಂದು ಕ್ಷಣವೂ ಇರಲ್ಲ; ಗಿಲ್ಲಿ ನಟನ ಮಾತಿನಿಂದ ಬೇಸರ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಅಶ್ವಿನಿ ಗೌಡ ಎಷ್ಟು ಸ್ಟ್ರಾಂಗ್ ಅಂತ ಎಲ್ಲರಿಗೂ ಗೊತ್ತು. ಖಡಕ್ ಮಾತು, ಸ್ಪರ್ಧಿಗಳಿಗೆ ಟಾರ್ಗೆಟ್, ಮಾತಿನಲ್ಲೇ ಎಲ್ಲರನ್ನೂ ಸೋಲಿಸುವ ಹಠ. ಕೆಲವೊಂದು ರೂಲ್ಸ್ ಬ್ರೇಕ್, ಪಿಸು ಮಾತಿನಿಂದ ಈ ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ. ಆದ್ರೆ ಸ್ಟ್ರಾಂಗ್ ಇದ್ದ ಅಶ್ವಿನಿ ಗೌಡ ಇಂದು ಕಣ್ಣೀರು ಹಾಕಿದ್ದಾರೆ. ಮರ್ಯಾದೆ ಇಲ್ಲದ ಕಡೆ ಒಂದು ಕ್ಷಣವೂ ಇರಬಾರದು ಎಂದಿದ್ದಾರೆ. ಹಾಗಾದ್ರೆ ಏನಾಯ್ತು. ಗಟ್ಟಿಗಿತ್ತಿಯಂತಿದ್ದ ಅಶ್ವಿನಿ ಕುಗ್ಗಿದ್ಯಾಕೆ ನೋಡಿ.

ಉಸ್ತುವಾರಿಗಳಾಗಿರುವ ಅಶ್ವಿನಿ-ಗಿಲ್ಲಿ
ಇನ್ನು ಈ ವಾರದ ಟಾಸ್ಕ್ ಒಂದರಲ್ಲಿ 2 ಗುಂಪುಗಳಿಗೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಉಸ್ತುವಾರಿಗಳಾಗಿದ್ದಾರೆ. ಇಬ್ಬರು ಆಟದ ಕಡೆ ಗಮನ ಕೊಡದೇ ಇಬ್ಬರು ಕಿತ್ತಾಡಿಕೊಳ್ತಾ ಇದ್ದಾರೆ. ಗಿಲ್ಲಿ ನಿಮಗೆ ಯೋಗ್ಯತೆ ಇಲ್ಲ. ಅಂತ ಇನ್ನು ಕೆಲ ಪದಗಳನ್ನು ಬಳಕೆ ಮಾಡಿದ್ದಾರೆ. ಅದರಿಂದ ಅಶ್ವಿನಿ ಅವರಿಗೆ ನೋವಾಗಿದೆ.

ಕಣ್ಣೀರಿಟ್ಟ ಅಶ್ವಿನ ಗೌಡ
ಇವನು ಯಾರು ನನಗೆ ಮಾತನಾಡೋಕೆ? ಒಬ್ಬ ಕಾಮಿಡಿಯನ್ ಏನ್ ಮಾಡಿದ್ರೂ ಓಕೆನಾ? ಒಬ್ಬರನ್ನು ತೇಜೋವಧೆ ಮಾಡುವುದು ಎಷ್ಟು ಸರಿ? ಎಂದು ಕಣ್ಣೀರಿಟ್ಟಿದ್ದಾರೆ. ನಮ್ಮನ್ನು ಒಬ್ರು ಅಷ್ಟು ಅಗೌರವ ತೋರ್ತಾರೆ ಅಂದ್ರೆ ಆ ಜಾಗದಲ್ಲಿ ಒಂದು ಸೆಕೆಂಡ್ ಸಹ ಇರಬೇಕು ಎನ್ನಿಸಲ್ಲ. ಬದುಕುತ್ತಿರುವುದೇ ಮರ್ಯಾದೆಗೊಸ್ಕರ ಎಂದು ಅಶ್ವಿನಿ ಗೌಡ ಅತ್ತಿದ್ದಾರೆ.

ನಿನ್ನೆಯೂ ಗಿಲ್ಲಿಯಿಂದ ಅವಮಾನ
ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ಮನೆಯಲ್ಲಿ ಯಾರು ಹೆಚ್ಚು ನಿಯಮಗಳನ್ನು ಮುರಿಯೋದು ಎಂದು ಕೇಳಿದ್ದರು. ಅದಕ್ಕೆ ಮನೆಯವರೆಲ್ಲಾ ಅಶ್ವಿನಿ ಗೌಡ ಹೆಸರು ಹೇಳಿದ್ದರು. ಅದಕ್ಕೆ ಅವರು ಮನೆಯವರ ಬಳಿ ಹೋಗಿ ಕ್ಷಮಿಸಿ ಎಂದು ಕೇಳಬೇಕಿತ್ತು. ಆಗ ಸಹ ಗಿಲ್ಲಿ ಕಾಲು ಮೇಲೆ ಕಾಲು ಹಾಕಿ ಕ್ಷಮೆ ಕೇಳು ಎನ್ನುತ್ತಿದ್ದ.

ಇನ್ನು ಬಿಗ್ ಬಾಸ್ ಶೋ ಶುರುವಾದಗಿನಿಂದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ. ಇಬ್ಬರು ಯಾವಾಗಲೂ ಜಗಳ ಆಡ್ತಾ ಇರ್ತಾರೆ. ಇಬ್ಬರ ಜಗಳ ಈ ಕಾಲಕ್ಕೆ ಮುಗಿಯಲ್ಲ ಎಂದು ಪ್ರೇಕ್ಷಕರು ಹೇಳ್ತಾ ಇದ್ದಾರೆ. ಕೆಲವರು ಗಿಲ್ಲಿ ನಟನಿಗೆ ಬೆಂಬಲ ನೀಡಿದ್ರೆ, ಇನ್ನೂ ಕೆಲವರು ಅಶ್ವಿನಿ ಗೌಡಗೆ ಬೆಂಬಲ ನೀಡ್ತಾ ಇದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories