ashwini puneeth rajkumar:ಅಪ್ಪು ಮನೆಯಲ್ಲಿ ಒಪ್ಪಿದ್ರೂ, ಅಶ್ವಿನಿ ಮನೆಯಲ್ಲಿ ಒಪ್ಪಿರಲಿಲ್ಲ : ಹೀಗಿತ್ತು ಪುನೀತ್​​ ಮದುವೆ ಕಹಾನಿ

ashwini puneeth rajkumar : ಪುನೀತ್​ ರಾಜ್​ಕುಮಾರ್​ ನಮ್ಮನೆಲ್ಲ ಅಗಲಿ ಒಂದು ವರ್ಷ ಪೂರೈಸಿದೆ. ಅಭಿಮಾನಿಗಳ ಎದೆಯಲ್ಲಿ ದೇವರಂತಿದ್ದ ಪರಮಾತ್ಮ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಮೊನ್ನೆ ಮೊನ್ನೆ ಈ ಎಲ್ಲ ಘಟನೆ ನಡೀತು ಅಂತಾ ಅಂದುಕೊಳ್ಳುವಷ್ಟರಲ್ಲಿ ಅಪ್ಪು ಪ್ರಥಮ ವರ್ಷದ ಪುಣ್ಯಸ್ಮರಣೆಯೇ ಬಂದಿದೆ. ಪತಿಯ ಮರಣದ ನೋವಿನ ನಡುವೆಯೂ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಪುನೀತ್​ರ ಕನಸಿನ ಕೂಸು ಪಿಆರ್​ಕೆ ಪ್ರಾಡಕ್ಷನ್​ನ್ನು ಮುಂದುವರಿಸಿಕೊಂಡು ಹೋಗ್ತಿದ್ದಾರೆ.


ಎಲ್ಲರಿಗೂ ತಿಳಿದಿರುವಂತೆ ಪುನೀತ್​ ರಾಜ್​ಕುಮಾರ್​ ಹಾಗೂ ಅಶ್ವಿನಿ ರೇವಂತ್ ಪರಸ್ಪರ ಪ್ರೀತಿಸಿ ವಿವಾಹವಾದವರು. ಇಬ್ಬರಿಗೆ ದೃತಿ ಹಾಗೂ ವಂದಿತಾ ಎಂಬ ಇಬ್ಬರು ಪ್ರೀತಿಯ ಮಕ್ಕಳಿದ್ದಾರೆ. ದೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರೆ ವಂದಿತಾ ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಪ್ರೀತಿಯ ತಂದೆಯನ್ನು ಕಳೆದುಕೊಂಡ ದೃತಿ ಹಾಗೂ ವಂದಿತಾಗಾಗಿ ಇಡೀ ಕರುನಾಡೇ ಅಂದು ಕಂಬನಿ ಮಿಡಿದಿತ್ತು.


ಬಾಲ್ಯದಿಂದಲೇ ನಟನಾಗಿ ಗುರುತಿಸಿಕೊಂಡು ರಾಷ್ಟ್ರೀಯ ಪ್ರಶಸ್ತಿಗಳನ್ನೆಲ್ಲ ಪಡೆದಿದ್ದ ಪುನೀತ್​ ತಾನು ಬೆಳೆದು ದೊಡ್ಡವನಾದ ಮೇಲೆ ಸಿನಿಮಾ ಇಂಡಸ್ಟ್ರಿಗೆ ಬರಬಾರದು ಅಂತಾ ಯೋಚಿಸಿದ್ದರಂತೆ. ಅಂತೆಯೇ ಅವರು ಉದ್ಯಮಕ್ಕೆ ಇಳಿದಿದ್ದರು. ಆದರೆ ಉದ್ಯಮದಲ್ಲಿ ಸ್ವಲ್ಪ ತೊಡಕು ಉಂಟಾದ ಬಳಿಕ ಅಪ್ಪುವನ್ನು ಕೈ ಬೀಸಿ ಕರೆದಿದ್ದು ಸಿನಿಮಾ ಇಂಡಸ್ಟ್ರಿ. ಅಪ್ಪು ತಮ್ಮ ಮೊದಲ ಸಿನಿಮಾದಲ್ಲಿ ನಟಿಸುವ ವೇಳೆಗೆ ಅವರಿಗೆ ವಿವಾಹವಾಗಿತ್ತು. ಪುನೀತ್​ ಹಾಗೂ ಅಶ್ವಿನಿ ಇಬ್ಬರಿಗೂ ಇದ್ದ ಕಾಮನ್​ ಫ್ರೆಂಡ್​ನ ಮೂಲಕ ಇವರಿಬ್ಬರೂ ಒಬ್ಬರಿಗೊಬ್ಬರು ಪರಿಚಯವಾಗಿದ್ದರಂತೆ, ಮೊದಲು ಸ್ನೇಹದ ರೂಪದಲ್ಲಿದ್ದ ಇಬ್ಬರ ನಡುವಿನ ಸಂಬಂಧಕ್ಕೆ ಎಂಟು ತಿಂಗಳು ಕಳೆಯುವಷ್ಟರಲ್ಲಿ ಪ್ರೀತಿಗೆ ತಿರುಗಿತ್ತು.


ಪುನೀತ್​ ರಾಜ್​ಕುಮಾರ್​ ಅಶ್ವಿನಿ ಪುನೀತ್​ರಾಜ್​ಕುಮಾರ್​ ಬಳಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅಶ್ವಿನಿಗೂ ಆಗಲೇ ಪುನೀತ್​ ಮೇಲೆ ಪ್ರೇಮಾಂಕುರವಾಗಿತ್ತು. ಹೀಗಾಗಿ ಪುನೀತ್​ ಪ್ರಪೋಸಲ್​ನ್ನು ಅಶ್ವಿನಿ ಕೂಡ ಒಪ್ಪಿಕೊಂಡಿದ್ದರು. ಪುನೀತ್​ ಮನೆಯಲ್ಲಿ ತನ್ನ ಪ್ರೇಮ ವಿಚಾರವನ್ನು ಹೇಳೋಕೆ ಸಹಾಯ ಮಾಡಿದ್ದು ಶಿವಣ್ಣ. ಹೌದು..! ಶಿವಣ್ಣನ ಮೂಲಕ ಪುನೀತ್​ ಮನೆಯಲ್ಲಿ ತಮ್ಮ ಪ್ರೇಮ ವಿಚಾರವನ್ನು ತಿಳಿಸಿದ್ದರಂತೆ. ದೊಡ್ಮನೆಯಲ್ಲಿ ಪ್ರೀತಿಗೆ ಗ್ರೀನ್​ ಸಿಗ್ನಲ್​ ಸಿಕ್ಕ ಬಳಿಕ ಅಶ್ವಿನಿ ಮನೆಯವರನ್ನು ಈ ಮದುವೆಗೆ ಒಪ್ಪಿಸುವ ಸವಾಲು ಪುನೀತ್​ರ ಮುಂದಿತ್ತು.


ದೊಡ್ಮನೆ ಕುಟುಂಬ, ಡಾ.ರಾಜ್​ ಪುತ್ರ ಅಂದ್ರೆ ಯಾರು ತಾನೇ ಅಳಿಯ ಮಾಡಿಕೊಳ್ಳೋಕೆ ಬೇಡ ಅಂತಾರೆ..? ಅಂತಾ ನೀವು ಭಾವಿಸಿರಬಹುದು. ಆದರೆ ಇದು ಹಾಗಾಗಲಿಲ್ಲ. ಅಶ್ವಿನಿ ಕುಟುಂಬ ಈ ಮದುವೆಗೆ ಸುತಾರಾಂ ಒಪ್ಪಿಗೆ ನೀಡಿರಲಿಲ್ಲ. ಸರಿ ಸುಮಾರು ಆರು ತಿಂಗಳುಗಳ ಕಾಯುವಿಕೆ ಬಳಿಕ ಅಶ್ವಿನಿ ಕುಟುಂಬದವರು ಪುನೀತ್​ರಿಗೆ ತಮ್ಮ ಮಗಳನ್ನು ಕೊಡಲು ಒಪ್ಪಿಗೆ ನೀಡಿದ್ರು.


ಎರಡೂ ಮನೆಯ ಒಪ್ಪಿಗೆಯನ್ನು ಪಡೆದ ಈ ಜೋಡಿ 1999ರ ಡಿಸೆಂಬರ್​ ಒಂದರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಅತ್ಯಂತ ಅದ್ಧೂರಿಯಾಗಿ ಪುನೀತ್​ ರಾಜ್​ಕುಮಾರ್​ ಹಾಗೂ ಅಶ್ವಿನಿ ರಾಜ್​ಕುಮಾರ್​ ವಿವಾಹ ಕಾರ್ಯಕ್ರಮ ನಡೆದಿತ್ತು . ಗಣ್ಯಾತಿಗಣ್ಯರು ಅಪ್ಪು ವಿವಾಹಕ್ಕೆ ಆಗಮಿಸಿ ಶುಭ ಹಾರೈಸಿದ್ದರು.

ಇದನ್ನು ಓದಿ : IPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್ ಸಿಬಿ

ಇದನ್ನೂ ಓದಿ : T20 World Cup 2022: ನಾಳೆ ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ಕನ್ನಡಿಗ ರಾಹುಲ್‌ಗೆ ಮತ್ತೊಂದು ಅಗ್ನಿಪರೀಕ್ಷೆ

ashwini puneeth rajkumar family did not agreed for marriage with puneeth rajkumar in the beginng

Comments are closed.