Alovera Juice : ಅಲೋವೆರಾ ಜ್ಯೂಸ್‌ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ?

( Alovera Juice ) ಅಲೋವೆರಾ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ . ಹಲವರಿಗೆ ಇದರ ಪ್ರಯೋಜನ ತಿಳಿದಿದ್ದರೆ , ಇನ್ನೂ ಹಲವರಿಗೆ ಇದರ ಪ್ರಯೋಜನಗಳು ತಿಳಿದಿಲ್ಲ . ಅಲೋವೆರಾ(Alovera Juice) ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಾಂಪ್ರದಾಯಿಕವಾದ ಮನೆಮದ್ದು ಅಂತಾನೆ ಹೇಳಬಹುದು.

ಚರ್ಮ ಸಮಸ್ಯೆಗಳನ್ನು ಹೊರತುಪಡಿಸಿ ಇನ್ನೂ ಕೆಲವು ಆರೋಗ್ಯ ಸಮಸ್ಯೆಗಳಿಗೂ ಅಲೋವೆರಾ ಒಂದೊಳ್ಳೆ ಔಷದವಾಗಿದೆ . ಹೀಗಾಗಿ ಆರೋಗ್ಯ ತಜ್ಞರು ಹಲವು ಸಮಸ್ಯೆಗಳಿಗೆ ಅಲೋವೆರಾ(Alovera Juice) ಜ್ಯೂಸ್‌ ಕುಡಿಯುವಂತೆ ಸಲಹೆಯನ್ನು ನೀಡುತ್ತಾರೆ .

ಅಲೋವೆರಾ ಜ್ಯೂಸ್‌ (Alovera Juice ) ವಿಟಮಿನ್‌ , ಆಂಟಿಆಕ್ಸಿಡೆಂಟ್‌ ಹಾಗೂ ಮಿನೆರಲ್‌ ಗಳನ್ನು ಹೊಂದಿದೆ . ಇವು ದೇಹದಲ್ಲಿನ ಟಾಕ್ಸಿನ್‌ ಗಳನ್ನು ಹೊರಹಾಕಿ ದೇಹವನ್ನು ಶುದ್ಧಿಕರಿಸುತ್ತದೆ . ಶೀತ , ಕೆಮ್ಮು ಕಾಣಿಸಿಕೊಂಡಲ್ಲಿ ಅಲೋವೆರಾ ಜ್ಯೂಸ್‌ ಮಾಡಿ ಕುಡಿದರೆ ಶೀತ , ಕೆಮ್ಮು ಕ್ರಮೇಣ ಕಡಿಮೆಯಾಗುತ್ತದೆ .

ಇದನ್ನೂ ಓದಿ : Ice Apple Or Palm Fruit : ಮಲಬದ್ದತೆ ತಡೆಯುತ್ತೆ ಚಳಿಗಾಲದ ತಾಳೆಹಣ್ಣು

ಹಾಗಿದ್ದರೆ ಉತ್ತಮ ಆರೋಗ್ಯವನ್ನು ಹೊಂದಲು ಉಪಯುಕ್ತವಾದ ಅಲೋವೆರಾ ಜ್ಯೂಸ್‌ ಮಾಡುವುದು ಹೇಗೆ ತಿಳಿಯೋಣ ಬನ್ನಿ

ಬೇಕಾಗಿರುವ ಸಾಮಾಗ್ರಿಗಳು ;
ಅಲೋವೆರಾ
ಒಂದು ಕಪ್‌ ನೀರು

ಇದನ್ನೂ ಓದಿ : Chickpea : ದೇಹದ ತೂಕ ಇಳಿಸಬೇಕಾ ? ಹಾಗಾದ್ರೆ ಹುರಿಗಡಲೆ ತಿನ್ನಿ

ಮಾಡುವ ವಿಧಾನ ;
ಅಲೋವೆರಾದ ಮೇಲಿನ ಪದರವನ್ನು ತೆಗದು ಅದರಲ್ಲಿನ ಬಿಳಿಯ ಜೆಲ್‌ ಭಾಗವನ್ನು ಮಾತ್ರ ತೆಗೆದುಕೊಳ್ಳಿ . ನಂತರ ಜೆಲ್‌ ಅನ್ನು ಮಿಕ್ಸಿ ಗೆ ಹಾಕಿ ಒಂದು ಕಪ್‌ ನೀರನ್ನು ಸೇರಿಸಿ ರುಬ್ಬಿಕೊಳ್ಳಿ . ನಂತರ ಅದನ್ನು ಒಂದು ಗ್ಲಾಸ್‌ ಗೆ ಸೋಸಿಕೊಳ್ಳಿ .

ಇದೀಗ ಅಲೋವೆರಾ ಜ್ಯೂಸ್‌ ಸಿದ್ಧ

ಇದನ್ನೂ ಓದಿ : World Stroke Day : ಹೃದಯದ ಆರೋಗ್ಯಕ್ಕೆ 4 ಆಯುರ್ವೇದ ಸಲಹೆಗಳು

ಇದನ್ನೂ ಓದಿ : Lotus Root Benefits : ಲೋಟಸ್‌ ರೂಟ್‌ನ 7 ಆರೋಗ್ಯದ ಪ್ರಯೋಜನಗಳು ನಿಮಗೆ ಗೊತ್ತಾ…

ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ . ಇದರಿಂದ ಆರೋಗ್ಯ ಸಮಸ್ಯೆಗಳಿಗೆ ವೇಗವಾಗಿ ಪರಿಹಾರ ಕಂಡುಕೊಳ್ಳಬಹುದು.

ಅಲೋವೆರಾ ಜ್ಯೂಸ್‌ ಜೀರ್ಣಕ್ರಿಯೆಗೆ ಹೆಚ್ಚು ಪ್ರಯೋಜನಕಾರಿ . ಅಸಿಡಿಟಿ ಸಮಸ್ಯೆಯನ್ನು ಕೂಡ ಅತೀ ವೇಗವಾಗಿ ನಿವಾರಿಸುತ್ತದೆ . ತೂಕ ಇಳಿಸಲು ಕೂಡ ಇದು ಅತ್ಯಂತ ಪರಿಣಾಮಕಾರಿ.
ಅಲೋವೆರಾ ಜ್ಯೂಸ್‌ ಕುಡಿಯೋದರಿಂದ ಮದುಮೇಹಿಗಳಿಗೆ ಹೆಚ್ಚು ಉಪಯೋಗವಾಗಿದೆ ಎಂದು ಸಂಶೋಧನಾ ಮೂಲಗಳು ತಿಳಿಸಿವೆ . ಹೈಪರ್ಲಿಪಡೆಮಿಯಾ ಹಾಗೂ ಮಧುಮೇಹ ರೋಗಿಗಳಲ್ಲಿ ಲಿಪಿಡ್‌ ಗಳನ್ನು ಕಡಿಮೆ ಮಾಡಲು ಸಹಾಯಕಾತರಿಯಾಗಿದೆ . ಆದ್ದರಿಂದ ಇದನ್ನು ಗರ್ಭಿಣಿಯರಿಗೆ ಶಿಫಾರಸ್ಸು ಮಾಡುವುದಿಲ್ಲ.

(Alovera Juice) Aloe vera plant is present in everyone’s home. While many people know its benefits, many others do not know its benefits. Aloe Vera (Alovera Juice) can be said to be a traditional home remedy for skin related problems.

Comments are closed.