Kodagu elephant catch: ಕೊಡಗಿನಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ: ನಿಟ್ಟುಸಿರು ಬಿಟ್ಟ ರೈತರು

ಮಡಿಕೇರಿ: (Kodagu elephant catch) ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕರಡಿಗೋಡುವಿನ ಕಾಫಿತೋಟದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆಯವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದರು. ಆದರೂ ಕೂಡ ಕೆಲ ರೈತರು ಬೆಳೆ ಬೆಳೆಸಿದ್ದು, ರೈತರು ಹಾಕಿದ ಬಂಡವಾಳವಾದರೂ ಕೊನೆಗೆ ಕೈಗೆ ಸಿಗುತ್ತದಲ್ಲ ಎಂದುಕೊಂಡಿದ್ದರು. ಆದರೆ ಕಾಡಾನೆ (Kodagu elephant catch) ಹಾವಳಿಯಿಂದ ಎಲ್ಲವೂ ಹಾಳಾಗಿದೆ. ಕೆಲವು ಸಮಯಗಳಿಂದ ಹಗಲು ರಾತ್ರಿ ಎನ್ನದೇ ರಾಜಾರೋಷವಾಗಿ ಕಾಡಾನೆ ಊರಿನಲ್ಲಿ ತಿರುಗಾಡಿಕೊಂಡಿತ್ತು. ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ಬೆಳೆಗಳನ್ನು ತುಳಿದು, ಪೂರ್ತಿಯಾಗಿ ನಾಶ ಮಾಡಿ ಭಾರೀ ನಷ್ಟವನ್ನುಂಟುಮಾಡಿತ್ತು. ರಾತ್ರಿ ವೇಳೆಯಲ್ಲಿ ಕಾಡಾನೆ ಭೀತಿಯಿಂದ ಜನರು ಮನೆಯಿಂದ ಹೊರಬರಲು ಹಿಂಜರಿಯುವಂತಾಗಿತ್ತು.

ಈ ಹಿನ್ನಲೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಯವರಲ್ಲಿ ಮನವಿ ಇಟ್ಟಿದ್ದರು. ಕಳೆದ ಕೆಲವು ದಿನಗಳಿಂದ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿದ್ದರು. ಸಾಕಷ್ಟು ಬಾರಿ ರೈತರು ಹಾಗೂ ಅವರ ಜಮೀನಿನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮಂಗಳವಾರ ಕಾರ್ಯಾಚರಣೆ ನಡೆಸುವ ವೇಳಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಆನೆ ಅಟ್ಟಾಡಿಸಿಕೊಂಡು ಹೋಗಿತ್ತು. ದುಬಾರೆ ಸಾಕಾನೆ ಸಿಬಿರದ ಸಾಕಾನೆಗಳಾದ ಧನಂಜಯ, ಪ್ರಶಾಂತ, ಸುಗ್ರೀವ, ಮತ್ತಿಗೋಡು, ಅಭಿಮನ್ಯು ಹಾಗೂ ಭೀಮ ಆನೆಗಳನ್ನು ಬಳಸಿಕೊಂಡು ಕಾಡಾನೆಯನ್ನು ಇಂದು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ : Scooter collision: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿಗೆ ಬೈಕ್‌ ಢಿಕ್ಕಿ: ಸ್ಥಳದಲ್ಲೇ ಮಗು ಸಾವು

ಇದನ್ನೂ ಓದಿ : Tourist bus collision: ಪ್ರವಾಸಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ ಗೆ ಮಿನಿ‌ ಬಸ್ ಮುಖಾಮುಖಿ ಢಿಕ್ಕಿ : 12 ವಿದ್ಯಾರ್ಥಿಗಳಿಗೆ ಗಾಯ

ಇದನ್ನೂ ಓದಿ : Bus caught fire in depot: ಡಿಪ್ಪೋದಲ್ಲಿ ನಿಲ್ಲಿಸಿದ್ದ ಮೂರು ಬಸ್‌ ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

The forest department has succeeded in capturing a wildebeest with the help of livestock which was feeding in the coffee plantation of Karadigode near Siddapur of Virajpet taluk.

Comments are closed.