BBK Season9 : ಬಿಗ್ ಬಾಸ್ ಮನೆಯಿಂದ ನವಾಜ್ ಔಟ್


Bigg Boss Nawaz out : ಬಿಗ್‌ ಬಾಸ್‌ ಕನ್ನಡ ಸೀಸನ್‌-9 ಎರಡನೇ ಎಲಿಮಿನೆಷನ್‌ ಪ್ರಕ್ರಿಯೆ ಮುಗಿದಿದೆ. ಎರಡನೇ ವಾರ ನವಾಜ್‌ ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬಂದಿದ್ದಾರೆ. ಮನೆಯಿಂದ ಹೊರಗೆ ಬರುವ ಸಮಯದಲ್ಲಿ ಅವರಿಗೆ ಕೊಟ್ಟ ವಿಶೇಷ ಅಧಿಕಾರದಲ್ಲಿ ಅಮೂಲ್ಯ ಅವರನ್ನು ನೇರವಾಗಿ ನಾಮಿನೆಟ್‌ ಮಾಡಿದ್ದಾರೆ.

(BBK Season9)ನವಾಜ್ ತಮ್ಮ ವಿಶೇಷವಾದಂತಹ ಮಾತಿನ ಶೈಲಿಯಿಂದ ಎಲ್ಲರ ಮನ ಗೆದ್ದಿದ್ದರು. ಆದರೆ ಹೊರಗಡೆ ಜನರ ಮನಸ್ಸನ್ನು ಗೆದ್ದರೂ ಕೂಡ ಮನೆಯವರ ಮನಸ್ಸನ್ನು ಗೆಲ್ಲುವಲ್ಲಿ ಕೊಂಚ ವಿಫಲವಾಗಿದ್ದಾರೆ. ಮೊದಲನೇ ವಾರ ಮನೆಯವರಿಗೆ ನವಾಜ್‌ ತಲೆನೊವು ಎನ್ನಿಸಿದ್ದರು, ಈ ಬಾರಿ ಅವರಲ್ಲಿ ಆದ ಬದಲಾವಣೆಗಳನ್ನು ಕಂಡು ಮನೆಯವರು ಇಷ್ಟ ಪಟ್ಟಿದ್ದರು. ಎಲ್ಲರ ಮನದಲ್ಲೂ ಅವರು ಮನೆಯಲ್ಲಿ ಉಳಿಯಬೇಕೆಂಬ ಆಸೆ ಇತ್ತು. ಆದರೆ ಈಗ ಆ ಆಸೆ ಹುಸಿಯಾಗಿದೆ ನವಾಜ್‌ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ:Bulls Beat Paltan : ಪುಣೇರಿ ಪಲ್ಟನ್ ವಿರುದ್ಧ ಸೋಲಿನಿಂದ ಬೆಂಗಳೂರು ಬುಲ್ಸ್ ಗ್ರೇಟ್ ಎಸ್ಕೇಪ್

ಇದನ್ನೂ ಓದಿ:Mulayam Singh Yadav dies : ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್​ ಯಾದವ್​ ವಿಧಿವಶ

ಬಿಗ್‌ ಬಾಸ್‌ ವೇದಿಕೆಯ ಮೇಲೆ ಬಂದ ನವಾಜ್‌ ಅಪ್ಪನ ಹತ್ತಿರ ಮಾತನಾಡುತ್ತಾ, ಕೊಂಚ ಬಾವುಕರಾದರು. ಬಿಗ್‌ ಬಾಸ್‌ ಮನೆಯಲ್ಲಿ ಉಳಿದು ಹೆಚ್ಚು ಸಾಧನೆಯನ್ನು ಮಾಡಲಾಗಲಿಲ್ಲ ಆದರೆ ಹೊರಗಡೆ ನಿಮ್ಮ ಹೆಸರನ್ನು ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೊಗುತ್ತೇನೆ ಎಂದರು. ಸುದೀಪ್‌ ಅವರ ಹತ್ತಿರ ಮಾತನಾಡಿದ ನವಾಜ್‌ ಹೇಳಿದ್ದು ಹೀಗೆ, ನಿಮ್ಮನ್ನು ನೋಡಲು ದೂರದಿಂದ ಬಂದರು ಅವಕಾಶ ಸಿಗುತ್ತಿರಲಿಲ್ಲ ಆದರೆ ನಿಮ್ಮ ಹತ್ತಿರ ನಿತ್ಕೊಂಡು ಮಾತಾಡೋ ದಿನ ಬರುತ್ತದೆಂದು ಅಂದು ಕೊಂಡಿರಲಿಲ್ಲ ಎಂದು ಸಂತೋಷ ಪಟ್ಟರು.

Nawaz out of Bigg Boss house

Comments are closed.