ananta padmanabha temple: ಇಹಲೋಕ ತ್ಯಜಿಸಿದ ಅನಂತ ಪದ್ಮನಾಭ ದೇಗುಲದ ಪ್ರಸಿದ್ಧ ‘ಬಬಿಯಾ’ ಮೊಸಳೆ

ಕಾಸರಗೋಡು: crocodile babiya death : ಕರ್ನಾಟಕದ ಗಡಿ ಭಾಗವಾದ ಕಾಸರಗೋಡಿನಲ್ಲಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಬರೋಬ್ಬರಿ 70 ವರ್ಷಗಳಿಂದ ವಾಸವಿದ್ದ ಪ್ರಸಿದ್ಧ ಮೊಸಳೆಯು ಭಾನುವಾರ ರಾತ್ರಿ ವಿಧಿವಶವಾಗಿದೆ. ಸಸ್ಯಾಹಾರಿ ಮೊಸಳೆ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದ ಬಬಿಯಾ ಅನಂತ ಪದ್ಮನಾಭ ದೇವಸ್ಥಾನದ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಮಂಗಳೂರು ಗಡಿ ಭಾಗದಲ್ಲಿಯೇ ಇರುವ ಕಾಸರಗೋಡಿನ ಕುಂಬಳೆ ಎಂಬ ಊರಿನಲ್ಲಿರುವ ಈ ಪ್ರಸಿದ್ಧ ದೇವಾಲಯದಲ್ಲಿ ಬಬಿಯಾ ನಿಧನದಿಂದಾಗಿ ಸೂತಕದ ಛಾಯೆ ಆವರಿಸಿದೆ.

ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ದೇವಸ್ಥಾನದ ಮೂಲ ಕ್ಷೇತ್ರ ಇದು ಎಂಬ ನಂಬಿಕೆ ಇದೆ. ಮೊಸಳೆಗಳು ಮಾಂಸಾಹಾರಿಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಬಬಿಯಾ ಮೊಸಳೆ ಮಾತ್ರ ಸಸ್ಯಹಾರಿಯಾಗಿತ್ತು. ಪ್ರತಿದಿನ ಎರಡು ಬಾರಿ ಮೊಸಳೆಗೆ ಪೂಜೆಯನ್ನು ಮಾಡುತ್ತಿದ್ದ ಪೂಜಾರಿಗಳು ಇದಕ್ಕೆ ನೇವೈದ್ಯವನ್ನೂ ನೀಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಬಬಿಯಾ ದೇವಸ್ಥಾನದ ಆವರಣದಲ್ಲಿ ಪ್ರತ್ಯಕ್ಷನಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ತುಳುನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಅನಂತ ಪದ್ಮನಾಭ ದೇವಸ್ಥಾನದ ಎರಡು ವಿಶೇಷತೆಯೆಂದರೆ, ಕೆರೆಯ ಮಧ್ಯದಲ್ಲಿ ಇರುವ ಸುಂದರ ದೇವಸ್ಥಾನ ಹಾಗೂ ಬಬಿಯಾ ಮೊಸಳೆ. ಪೂಜಾರಿ ಬಬಿಯಾ ಎಂದು ಕರೆದ ಕೂಡಲೇ ಸುರಂಗ ಮಾರ್ಗದ ಮೂಲಕ ಬರುವ ಬಬಿಯಾ ಮೊಸಳೆ ಕೊಟ್ಟ ಶಾಖಾಹಾರಿ ಆಹಾರವನ್ನೇ ನೇವೈದ್ಯದ ರೂಪದಲ್ಲಿ ಸೇವಿಸುತ್ತಿತ್ತು. ಸಾಕಷ್ಟು ಭಕ್ತರು ಬಬಿಯಾನಿಗೆ ನೇವೈದ್ಯವನ್ನು ಕೊಡುವ ಹರಕೆಯನ್ನೂ ಕಟ್ಟಿಕೊಳ್ಳುತ್ತಿದ್ದರು.

ಬ್ರಿಟೀಷರ ಕಾಲದಲ್ಲಿ ಈ ದೇವಸ್ಥಾನದ ಕರೆಯಲ್ಲಿ ಬಬಿಯಾ ಎಂಬ ಹೆಸರಿನ ಮೊಸಳೆಯೊಂದಿತ್ತು. ಆದರೆ ಬ್ರಿಟೀಷ್​ ಅಧಿಕಾರಿ ಬಬಿಯಾ ಎಂದು ಕರೆದ ಕೂಡಲೇ ಬಂದಿದ್ದ ಮೊಸಳೆಯನ್ನು ಆತ ಗುಂಡು ಹಾರಿಸಿ ಕೊಲೆ ಮಾಡಿದ್ದನಂತೆ. ಹೀಗೆ ಮಾಡಿದ್ದ ಬ್ರಿಟೀಷ್​ ಅಧಿಕಾರಿ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದ ಎನ್ನಲಾಗಿದೆ. ಆದರೆ ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅನಂತಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿತ್ತು. ಇದಕ್ಕೆ ಅಲ್ಲಿನ ಪೂಜಾರಿಗಳು ಬಬಿಯಾ ಎಂದೇ ಕರೆದಿದ್ದರು. ಅಂದಿನಿಂದ ಇದೇ ಕೆರೆಯಲ್ಲಿ ವಾಸವಿದ್ದ ಬಬಿಯಾ ಪೂಜಾರಿಗಳು ನೀಡುತ್ತಿದ್ದ ಶಾಖಾಹಾರವನ್ನೇ ಸೇವಿಸಿ ಕೆರೆಯಲ್ಲಿದ್ದ ಒಂದೇ ಒಂದು ಮೀನನ್ನೂ ತಿನ್ನದೇ ಇತ್ತ ಭಕ್ತರಿಗೂ ಯಾವುದೇ ತೊಂದರೆಯನ್ನು ಕೊಡದೇ ದೇವರ ಮೊಸಳೆ ಎಂದು ಕರೆಸಿಕೊಂಡಿತ್ತು.

ಇದನ್ನು ಓದಿ : Mulayam Singh Yadav dies : ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್​ ಯಾದವ್​ ವಿಧಿವಶ

ಇದನ್ನೂ ಓದಿ : Dinesh Karthik retirement : ಕ್ರಿಕೆಟ್‌ ವೃತ್ತಿ ಬದುಕಿಗೆ ದಿನೇಶ್‌ ಕಾರ್ತಿಕ್‌ ನಿವೃತ್ತಿ ?

miraculous crocodile babiya death at Ananta Padmanabha temple Kasaragod

Comments are closed.