Rain has increased again :ರಾಜ್ಯದ ವಿವಿಧೆಡೆ ಮತ್ತೆ ವರುಣನ ಆರ್ಭಟ : ಸತತ ಮಳೆಗೆ ಕಂಗಾಲಾದ ಜನತೆ

Rain has increased again:ರಾಜ್ಯದಲ್ಲಿ ಮತ್ತೆ ಮಳೆರಾಯ ಅಬ್ಬರಿಸಿ ಬೊಬ್ಬಿರಿಯಲು ಶುರು ಮಾಡಿದ್ದಾನೆ‌. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು ಅಕಾಲಿಕ ಮಳೆಯಿಂದಾಗಿ ಜನ‌ಜೀವನ ಅಸ್ತವ್ಯಸ್ತವಾಗಿದೆ. ದಾವಣಗೆರೆಯಲ್ಲಿ ಬೆಳ್ಳಂಬೆಳ್ಳಗೆ ಧಾರಾಕಾರ ಸುರಿಯುತ್ತಿರುವ ಮಳೆ. ದಾವಣಗೆರೆ ನಗರದ ಸುತ್ತಮುತ್ತ ಬೆಳಗ್ಗೆಯಿಂದಲೂ ಸತತವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ.

ಬೆಳ್ಳಂಬೆಳಗ್ಗೆ ಸುರಿದ ಮಳೆಯ ಆರ್ಭಟಕ್ಕೆ ಜನ ಜೀವನ ತತ್ತರವಾಗಿದೆ. ಭತ್ತದ ಗದ್ದೆಗಳು ನೀರಿನಿಂದ ಜಲಾವೃತವಾಗಿದ್ದರಿಂದ ರೈತರು ಬಹಳ ತೊಂದರೆ ಅನುಭವಿಸುವಂತಾಗಿದೆ. ಕೆಲ ರಸ್ತೆಗಳು ಮಳೆ ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗಿದೆ. ಹೀಗಾಗಿ ಮಕ್ಕಳು ಶಾಲೆಗಳಿಗೆ ತೆರಳಲು ಸಾಕಷ್ಟು ತೊಂದರೆಯಾಗಿದೆ.‌ ಇನ್ನು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ರಾತ್ರಿ ಭಾರೀ ಮಳೆಯಾಗಿದ್ದು ಕೃಷಿ ಪ್ರದೇಶಗಳು ನೆರೆ ನೀರಿನಿಂದ ಮುಳುಗಡೆಯಾಗಿದೆ. ನೂರಾರು ತೆಂಗಿನ ಗಿಡ, ಸಾವಿರಕ್ಕೂ ಹೆಚ್ಚು ಅಡಿಕೆ ಗಿಡಗಳು ಜಲಾವೃತವಾಗಿದೆ‌. ಮಳೆಯಿಂದ ಸಾಕಷ್ಟು ಜಮೀನು ನೀರಿನಿಂದ ಜಲಾವೃತವಾಗಿದ್ದು ರೈತರು ಹೈರಾಣಾಗಿದ್ದಾರೆ. ಮುದ್ದನಹಳ್ಳಿ ಗ್ರಾಮದಲ್ಲಿ ಹಿಂದೆಂದೂ ಕಾಣದಂತ ಮಳೆಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ಇಡಿ ಸುರಿದ ಮಳೆಗೆ ಜನರು ತತ್ತರಿಸಿದ್ದಾರೆ. ಮುದ್ದನಹಳ್ಳಿ- ಇಬ್ಬಡಿ ಗ್ರಾಮದ ಸಂಪರ್ಕ ಕಡಿತವಾಗಿದೆ. ನಾಲ್ಕು ಕೆರೆ ಏರಿಯಲ್ಲಿ ನೀರು ತುಂಬಿದ ಪರಿಣಾಮ ಸಂಪೂರ್ಣ ಜಲಾವೃತವಾಗಿದೆ. ಮೆಕ್ಕೆ ಜೋಳ, ಅಡಿಕೆ, ತೆಂಗು,ಜಲಾವೃತವಾಗಿದೆ. ಕೊರಟಿಕೆರೆ ಮುದ್ದನಹಳ್ಳಿಯ 500 ಕ್ಕೂ ಹೆಚ್ಚು ಏಕರೆ ಪ್ರದೇಶದಲ್ಲಿ ನೀರು ನಿಂತಿದ್ದು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಮುದ್ದನಹಳ್ಳಿ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ಮಂಡ್ಯದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಆರ್ ಪೇಟೆ KSRTC ಬಸ್ ನಿಲ್ದಾಣ ಕೆರೆಯಂತಾಗಿದೆ‌. ಇಲ್ಲಿ ಜೋರು ಮಳೆಗೆ ಪದೇ ಪದೇ ಬಸ್ ನಿಲ್ದಾಣ ಮುಳುಗಡೆಯಾಗುತ್ತಿದ್ದು ಕೆರೆ ಮುಚ್ಚಿ ಬಸ್ ನಿಲ್ದಾಣ ನಿರ್ಮಿಸಿರುವುದೆ ಈ ಅದ್ವಾನಕ್ಕೆ ಕಾರಣವಾಗಿದೆ ಎಂದು ಜನ ಆರೋಪಿಸಿದ್ದಾರೆ. ಈ ಬಗ್ಗೆ ಸಚಿವ ನಾರಾಯಣಗೌಡ ಸೂಚನೆ‌ ಕೊಟ್ಟರು ಅಧಿಕಾರಿಗಳು ರಾಜಕಾಲುವೆ ದುರಸ್ಥಿ ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ಇದೀಗ ಮತ್ತೆ ಅದೇ ಅವಾಂತರಗಳು ಸೃಷ್ಟಿಯಾಗಿದೆ.‌ ರಾತ್ರಿ‌ ಸುರಿದ ಮಳೆಗೆ ಬಸ್ ನಿಲ್ದಾಣ ಸೇರಿ ಪಾರ್ಕಿಂಗ್ ಸ್ಥಳ ಜಲಾವೃತವಾಗಿದೆ. ಬಸ್ ನಿಲ್ದಾಣದಲ್ಲಿದ್ದ ಅಂಗಡಿಮುಂಗಟ್ಟುಗಳಿಗೆ ನೀರು‌ ನುಗ್ಗಿ ಸಾಕಷ್ಟು ಹಾನಿಯಾಗಿದೆ.

ಹಾವೇರಿ ಜಿಲ್ಲೆಯಲ್ಲಿಯೂ ಮಳೆ ಆರಂಭವಾಗಿದ್ದು ಹಾವೇರಿ ನಗರ, ಯಲಗಚ್ಚ, ಅಗಡಿ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಮೋಡಕವಿದ ವಾತಾವರಣದೊಂದಿಗೆ ಮಳೆ ಬೀಳುತ್ತಿದ್ದು ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ‌. ನಿನ್ನೆ ರಾತ್ರಿಯೂ ಮಳೆರಾಯ ಅಬ್ಬರಿಸಿದ್ದು ಆಗಾಗ ಸುರಿತಿರೋ ಮಳೆರಾಯನ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ.

ಇದನ್ನು ಓದಿ : ananta padmanabha temple: ಇಹಲೋಕ ತ್ಯಜಿಸಿದ ಅನಂತ ಪದ್ಮನಾಭ ದೇಗುಲದ ಪ್ರಸಿದ್ಧ ‘ಬಬಿಯಾ’ ಮೊಸಳೆ

ಇದನ್ನೂ ಓದಿ : Prithvi Shaw: “ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡ್ಬೇಕು ಹೇಳಿ..” ಬಿಸಿಸಿಐ ವಿರುದ್ಧ ಪೃಥ್ವಿ ಶಾ ಆಕ್ರೋಶ ಸ್ಫೋಟ

Rain has increased again in the state and people’s lives have become chaotic

Comments are closed.