bhagyavantharu : ಡಾ.ರಾಜ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ : ಮರು ಬಿಡುಗಡೆಯಾಗ್ತಿದೆ ಭಾಗ್ಯವಂತರು ಸಿನಿಮಾ

bhagyavantharu : ಸ್ಯಾಂಡಲ್​ವುಡ್​​ನಲ್ಲಿ ಸದ್ಯ ಸಾಲು ಸಾಲು ಹಿಟ್​ ಸಿನಿಮಾಗಳು ತೆರೆಗೆ ಬರುತ್ತಿವೆ. ಗರುಡ ಗಮನ ವೃಷಭ ವಾಹನ,ಕೆಜಿಎಫ್​ 2, ಚಾರ್ಲಿ ಹೀಗೆ ಸಾಲು ಸಾಲು ಹಿಟ್​ ಸಿನಿಮಾಗಳ ಬಳಿಕ ಸ್ಯಾಂಡಲ್​ವುಡ್​​ನ ಗತ್ತಿನ ಬಗ್ಗೆ ದೇಶಾದ್ಯಂತ ಸುದ್ದಿಯಾಗುತ್ತಿದೆ. ಉತ್ತರ ಭಾರತದ ಸಿನಿಮಾ ಇಂಡಸ್ಟ್ರಿ ಕೂಡ ಸಾಲು ಸಾಲು ಹಿಟ್​ ಸಿನಿಮಾಗಳ ಬಳಿಕ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯತ್ತ ತಿರುಗಿ ನೋಡುತ್ತಿದೆ. ಆದರೆ ಅದೆಷ್ಟೇ ಹಿಟ್​ ಸಿನಿಮಾಗಳು ಬೆಳ್ಳಿ ತೆರೆಗೆ ಏರಿರಲಿ. ಈಗಲೂ ಕೂಡ ಅಣ್ಣಾವ್ರ ಸಿನಿಮಾ ಅಂದರೆ ಇಷ್ಟ ಪಡುವ ಜನರು ಸಾಕಷ್ಟು ಮಂದಿಯಿದ್ದಾರೆ. ವರನಟ ಡಾ.ರಾಜ್​ಕುಮಾರ್​ ಸಿನಿಮಾ ಬೆಳ್ಳಿ ತೆರೆ ಮೇಲೆ ಮತ್ತೆ ಪ್ರದರ್ಶನ ಕಾಣುತ್ತೆ ಅಂದರೆ ಇದಕ್ಕಿಂತ ದೊಡ್ಡ ಸಿಹಿ ಸುದ್ದಿ ಕನ್ನಡ ಸಿನಿಮಾ ಪ್ರಿಯರಿಗೆ ಇನ್ನೊಂದು ಸಿಗಲು ಸಾಧ್ಯವೇ ಇಲ್ಲ.


ವರನಟ ಡಾ. ರಾಜ್​ಕುಮಾರ್​ ಹಾಗೂ ಹಿರಿಯ ನಟಿ ಬಿ.ಸರೋಜಾದೇವಿ ನಟಿಸಿದ್ದ ಭಾಗ್ಯವಂತರು ಸಿನಿಮಾ ನಿಮಗೆ ನೆನಪಿದ್ದರಬಹುದು. 45 ವರ್ಷಗಳ ಹಿಂದೆ ತೆರೆ ಕಂಡಿದ್ದ ಈ ಸಿನಿಮಾಗೆ ಭಾರ್ಗವ ಆ್ಯಕ್ಷನ್​ ಕಟ್​ ಹೇಳಿದ್ದರೆ ದ್ವಾರಕೀಶ್​ ಬ್ಯಾನರ್​ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ ಅಂದು ಸೂಪರ್​ ಹಿಟ್​ ಪ್ರದರ್ಶನ ಕೂಡ ಕಂಡಿತ್ತು.


ಇದೀಗ ಈ ಸಿನಿಮಾ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ಪ್ರದರ್ಶನ ಕಾಣಲು ಸಜ್ಜಾಗುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಎಂ. ಮುನಿರಾಜು ಈ ಸಿನಿಮಾವನ್ನು ರಿ ರಿಲೀಸ್​ ಮಾಡುತ್ತಿದ್ದಾರೆ. ಜುಲೈ 8ರಂದು ಭಾಗ್ಯವಂತರು ಸಿನಿಮಾ ರಾಜ್ಯದ 50ಕ್ಕೂ ಅಧಿಕ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.


ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಭಾಗ್ಯವಂತರು ಸಿನಿಮಾಗೆ 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಮುನಿರಾಜು ಈ ರೀತಿ ರಾಜ್​ಕುಮಾರ್​​ರ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಪರೇಷನ್​ ಡೈಮಂಡ್​ ರಾಕೆಟ್​, ನಾನೊಬ್ಬ ಕಳ್ಳ, ದಾರಿ ತಪ್ಪಿದ ಸಿನಿಮಾಗಳನ್ನೂ ಸಹ ಮುನಿರಾಜು ಇದೇ ರೀತಿ ಆಧುನಿಕ ತಂತ್ರಜ್ಞಾನ ಬಳಸಿ ರಿಲೀಸ್​ ಮಾಡಿದ್ದರು. ಅಣ್ಣಾವ್ರ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜು ರಾಜ್​ಕುಮಾರ್​ರ ಇನ್ನೂ ಹಲವು ಸಿನಿಮಾಗಳನ್ನು ರಿ ರಿಲೀಸ್​ ಮಾಡುವ ಗುರಿಯನ್ನು ಹೊಂದಿದ್ದಾರೆ.

ಇದನ್ನು ಓದಿ : Kapil Dev Gift Sudeep : ಕಿಚ್ಚನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್.. ಗಿಫ್ಟ್ ನೋಡಿ ಸುದೀಪ್ ಕ್ಲೀನ್ ಬೌಲ್ಡ್

ಇದನ್ನೂ ಓದಿ : Alia Bhatt : ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಆಲಿಯಾ ಭಟ್​,ರಣಬೀರ್​ ಕಪೂರ್​ ದಂಪತಿ

bhagyavantharu dr rajkumar kannada film rerelease new technology

Comments are closed.