Actor Yash: ನಟ ಯಶ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್

ಬೆಂಗಳೂರು: ಕನ್ನಡದ ಖ್ಯಾತ ನಟ ಯಶ್ ಅವರಿಗೆ (Actor Yash) ಮಹತ್ವದ ಕಾನೂನಾತ್ಮಕ ಗೆಲುವು ದೊರೆತಿದ್ದು, ಆದಾಯ ತೆರಿಗೆ (Income Tax) ಇಲಾಖೆಯು ನೀಡಿದ್ದ ನೋಟಿಸ್‌ ಅನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದೆ.

ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠವು, 2013-14 ರಿಂದ 2018-19ರ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಐಟಿ ಇಲಾಖೆ ನಟ ಯಶ್ ಅವರಿಗೆ ಜಾರಿ ಮಾಡಿದ್ದ ನೋಟಿಸ್‌ ಅನ್ನು ರದ್ದುಗೊಳಿಸಿ, ತೀರ್ಪು ನೀಡಿದೆ. ಈ ತೀರ್ಪಿನಿಂದ ನಟ ಯಶ್ ಅವರಿಗೆ ದೊಡ್ಡ ಪರಿಹಾರ ದೊರೆತಂತಾಗಿದೆ.

ಪ್ರಕರಣದ ಹಿನ್ನೆಲೆ ಮತ್ತು ತೀರ್ಪಿನ ಸಾರಾಂಶ
ಐಟಿ ಇಲಾಖೆಯು 2021ರಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 153C ಅಡಿಯಲ್ಲಿ ಯಶ್ ಅವರಿಗೆ ನೋಟಿಸ್ ನೀಡಿತ್ತು. ಇದು 2019ರಲ್ಲಿ ‘ಹೊಂಬಾಳೆ ಕನ್ಸ್ಟ್ರಕ್ಷನ್ಸ್’ ಸಂಬಂಧಿಸಿದಂತೆ ನಡೆಸಿದ್ದ ಶೋಧ ಕಾರ್ಯಾಚರಣೆಯ ನಂತರದ ಬೆಳವಣಿಗೆಯಾಗಿತ್ತು.

ಯಶ್ ಅವರ ವಾದ: ಐಟಿ ಇಲಾಖೆಯು ತಮ್ಮ ನಿವಾಸದ ಮೇಲೂ ಶೋಧನೆ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಹಾಗಾಗಿ, ಕಾಯ್ದೆಯ ಪ್ರಕಾರ ತಾನು ‘ಶೋಧನೆಗೆ ಒಳಗಾದ ವ್ಯಕ್ತಿ’ (Searched Person) ಆಗುತ್ತೇನೆ. ಆದರೆ, ಐಟಿ ಇಲಾಖೆಯು ತಮ್ಮನ್ನು ‘ಶೋಧನೆಗೆ ಒಳಗಾಗದ ವ್ಯಕ್ತಿ’ ಎಂದು ಪರಿಗಣಿಸಿ ಸೆಕ್ಷನ್ 153C ಅಡಿಯಲ್ಲಿ ನೋಟಿಸ್ ನೀಡಿರುವುದು ಕಾನೂನುಬಾಹಿರ ಎಂದು ಯಶ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಎಲ್‌ಐಸಿಯಿಂದ ಎರಡು ಹೊಸ ಪಾಲಿಸಿಗಳು ಬಿಡುಗಡೆ

ಹೈಕೋರ್ಟ್ ತೀರ್ಪು
ನಟ ಯಶ್ ಅವರ ಪರ ವಾದವನ್ನು ಎತ್ತಿಹಿಡಿದ ನ್ಯಾಯಾಲಯವು, ಐಟಿ ಇಲಾಖೆ ನೀಡಿದ್ದ ನೋಟಿಸ್‌ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮುಂದಿನ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ. ಈ ನಿರ್ಧಾರವು ನಟ ಯಶ್ ಅವರ ಕಾನೂನು ಹೋರಾಟಕ್ಕೆ ಯಶಸ್ಸು ತಂದುಕೊಟ್ಟಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories