ಬಿಗ್ ಬಾಸ್ ಗೆ ಗೆಸ್ಟ್ ಆದ್ರೂ ಕಿಚ್ಚ ….! ಈ ಬಗ್ಗೆ ಪೈಲ್ವಾನ್ ಹೇಳಿದ್ದೇನು ಗೊತ್ತಾ…!!

ಕನ್ನಡಕ್ಕೆ ಬಿಗ್ ಬಾಸ್ ಅನ್ನೋ ದೊಡ್ಡ ಮನೆ ಆಟವನ್ನು ಪರಿಚಯಿಸಿದ್ದೇ ಪೈಲ್ವಾನ್ ಕಿಚ್ಚ ಸುದೀಪ್. ಅದಾಗಲೇ ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಖ್ಯಾತನಾಮರು ನಡೆಸಿಕೊಡ್ತಿದ್ದ ಶೋವನ್ನು‌ ಕನ್ನಡದಲ್ಲಿ ಜನ ಮೆಚ್ಚುವಂತೆ ನಡೆಸಿಕೊಟ್ಟು 5-6  ಸೀಸನ್ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡ ಕೀರ್ತಿ ಕಿಚ್ಚ ಸುದೀಪ್ ಗೆ ಸಲ್ಲಬೇಕು.

ಇಂತಿಪ್ಪ ಅಭಿನಯ ಚಕ್ರವರ್ತಿ ಸುದೀಪ್ ಈ ಭಾರಿ ಬಿಗ್ ಬಾಸ್ ಗೆ ಗೆಸ್ಟ್ ಆಗಿದ್ದಾರೆ. ಅಯ್ಯೋ ಹಾಗಿದ್ದರೇ ಸುದೀಪ್ ಈ ಸಲ ಶೋ ಹೋಸ್ಟ್ ಮಾಡಲ್ವಾ? ಸುದೀಪ್ ನಡೆಸಿಕೊಡಲಿಲ್ಲ ಅಂದ್ರೇ ಶೋ ನೋಡೋಕೆ ಮಜಾ ಇರಲ್ಲ ಬಿಡಿ ಅಂದ್ಕೋತಾ ಇದ್ದಿರಾ.

ಸುದೀಪ್ ಗೆಸ್ಟ್ ಆಗ್ತಿರೋದು ನೂರಕ್ಕೆ ನೂರು ನಿಜ. ಆದರೇ ಅದು ಕನ್ನಡ ಬಿಗ್ ಬಾಸ್ ನಲ್ಲಿ ಅಲ್ಲ. ಬದಲಾಗಿ ತೆಲುಗು ಬಿಗ್ ಬಾಸ್ ಶೋಗೆ. ಹೌದು ತೆಲುಗಿನಲ್ಲಿ ನಡಿತೀರೋ ಬಿಗ್ ಬಾಸ್ ಶೋಗೆ ಕಿಚ್ಚ ಸುದೀಪ್ ಅತಿಥಿಯಾಗಿ ಎಂಟ್ರಿ‌ಕೊಡ್ತಿದ್ದಾರೆ‌. ಈ ವಿಚಾರವನ್ನು ಸ್ವತಃ ಸುದೀಪ್ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಶೋ ನಡೆಸೋದರ ಜೊತೆಗೆ ಇವತ್ತು ಬಿಗ್ ಬಾಸ್ ತೆಲುಗು ಆವೃತ್ತಿಯಲ್ಲಿ ಅತಿಥಿಯಾಗಿ ಎವರ್ ಚಾರ್ಮಿಂಗ್ ಹೀರೋ ನಾಗಾರ್ಜುನ್ ಸರ್ ಜೊತೆ ಸ್ಟೇಜ್ ಹಂಚಿಕೊಂಡಿದ್ದೇನೆ ಎಂದಿದ್ದಾರೆ.

ಅಲ್ಲದೇ ಶೋದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿರೋದಾಗಿಯೂ ಕಿಚ್ಚ ಸುದೀಪ್ ಹೇಳಿದ್ದಾರೆ. ಇದು ರನ್ನನ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದು, ಬಿಗ್ ಬಾಸ್ ತೆಲುಗುನ ಸುದೀಪ್ ಭಾಗವಹಿಸಿದ ಎಪಿಸೋಡ್ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ದಾರೆ.

ಇನ್ನೇನು ಕೆಲದಿನದಲ್ಲೇ ಕನ್ನಡದಲ್ಲೂ ಬಿಗ್ ಬಾಸ್ ಶೋ ಆರಂಭವಾಗಲಿದ್ದು, ಗಾಯಕ  ಹಾಗೂ ನಟ ಸುನೀಲ್  ಸೇರಿದಂತೆ ಹಲವರು ಒಂಟಿಮನೆಯ ಜಾದೂ ಆಟದಲ್ಲಿ ಇರಲಿದ್ದಾರೆ ಎನ್ನಲಾಗ್ತಿದೆ.

Comments are closed.