ಅನಿವಾಸಿಗರನ್ನು ಹೊರಹಾಕಲು ಮುಂದಾದ ಕುವೈತ್ : ಭಾರತೀಯರಿಗೂ ಎದುರಾಗುತ್ತಾ ಸಂಕಷ್ಟ ..?

ಕುವೈತ್ : ವಿಶ್ವದ ಹಲವು ರಾಷ್ಟ್ರಗಳು ತಮ್ಮ ದೇಶವಾಸಿಗಳನ್ನು ವಾಪಾಸ್ ಕರೆತರುವ ನಿಟ್ಟಿನಲ್ಲಿ ಸಿದ್ದತೆ ನಡೆಸಿವೆ. ಈ ಹಿನ್ನೆಲೆಯಲ್ಲಿಯೇ ಹಲವು ಅರಬ್ ರಾಷ್ಟ್ರಗಳು ಈಗಾಗಲೇ ಅನಿವಾಸಿಗಳನ್ನು ದೇಶದಿಂದ ಹೊರ ಹಾಕಿವೆ. ಇಂತಹ ದೇಶಗಳ ಸಾಲಿಗೆ ಇದೀಗ ಕುವೈತ್ ಸೇರ್ಪಡೆಯಾಗಿದೆ.

ಕುವೈತ್ ಮುಂದಿನ ವರ್ಷ 70 ಸಾವಿರ ಅನಿವಾಸಿಗಳನ್ನು ದೇಶ ಬಿಡಿಸಲು ಸೂಚನೆ ನೀಡಿದೆ.‌ ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿದ್ದು ಮುಂದಿನ ವರ್ಷದ ಸುಮಾರಿಗೆ ಎಲ್ಲರೂ ಅವರವರ ದೇಶಕ್ಕೆ ಮರಳಬೇಕಿದೆ.

60 ವರ್ಷ ದಾಟಿದವರ ಅನಿವಾಸಿ ಪ್ರಮಾಣಪತ್ರವನ್ನು ನವೀಕರಣ ಮಾಡದೇ ಇರಲು ಕುವೈತ್ ನಿರ್ಧರಿಸಿದೆ.‌ ಒಂದು ಮೂಲಗಳ ಪ್ರಕಾರ ಕುವೈತ್ ನ ಮಾನವ ಸಂಪನ್ಮೂಲ ಇಲಾಖೆ ಈಗಾಗಲೇ ದೇಶದಿಂದ ಹೊರ ಹಾಕುವ ಅನಿವಾಸಿಗಳ ಪಟ್ಟಿ ತಯಾರಿಸಿದೆ.

ಒಂದೊಮ್ಮೆ ಕುವೈತ್ ಇಂತಹ ನಿರ್ಧಾರಕ್ಕೆ ಮುಂದಾದ್ರೆ ಭಾರತೀಯರಿಗೂ ಕೂಡ ಸಂಕಷ್ಟ ಎದುರಾಗಲಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಭಾರತೀಯರು ದೇಶಕ್ಕೆ ಮರಳಿದ್ದಾರೆ.

ಅದ್ರಲ್ಲೂ ಕುವೈತ್ ನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ಉದ್ಯೋಗದಲ್ಲಿದ್ದಾರೆ. ಅನಿವಾಸಿ ಕಾನೂನು ಜಾರಿಯಾದ್ರೆ ಬಹುತೇಕ ಭಾರತೀಯರು ದೇಶಕ್ಕೆ ವಾಪಾಸಾಗಬೇಕಾಗುವುದು ಖಚಿತ.

Comments are closed.