ಬಿಗ್ ಬಾಸ್ ಗೆ ಎಂಟ್ರಿಕೊಡ್ತಾರಾ ಬ್ಯೂಟಿ ಕ್ವೀನ್ ಸಮಂತಾ

0

ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದ ಬಿಗ್ ಬಾಸ್ ಶೋ ನ ತೆಲುಗಿನಲ್ಲಿ 3 ಆವೃತ್ತಿ ಪೂರ್ಣಗೊಂಡಿದ್ದು, ನಾಲ್ಕನೇ ಆವೃತ್ತಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ.

ನಾಲ್ಕನೇ ಆವೃತ್ತಿಯನ್ನು ಯಾರು ನಡೆಸಿಕೊಡುತ್ತಾರೆ ಅನ್ನುವ ಕುತೂಹಲ ಮೂಡಿಸುತ್ತಿದ್ದು, ಸಾಕಷ್ಟು ಸ್ಟಾರ್ ನಟ, ನಟಿಯರ ಹೆಸರುಗಳು ಕೇಳಿಬರುತ್ತಿದೆ.

ತೆಲುಗಿನ ಬಿಗ್ ಬಾಸ್ ಮೂರು ಆವೃತ್ತಿಯಲ್ಲಿಯೂ ಬೇರೆ ಬೇರೆ ಸ್ಟಾರ್ಸ್ ನಡೆಸಿಕೊಟ್ಟಿದ್ದು, ಬಿಗ್ ಬಾಸ್-4 ನಿರೂಪಣೆಯ ಜವಾಬ್ದಾರಿಯನ್ನು ನಟಿ ಸಮಂತಾ ವಹಿಸಿಕೊಳ್ತಾರಾ ಎನ್ನುವ ಚರ್ಚೆ ಪ್ರಾರಂಭವಾಗಿದೆ.

ಸಮಂತಾ ಬಿಗ್ ಬಾಸ್ ಶೋ ನಡೆಸಿಕೊಡುವ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಿದಿಲ್ಲ. ಆದರೆ ಸಮಂತಾ ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಅಭಿಮಾನಿಗಳಿಗೆ ಸಖತ್ ಖುಷಿಯಾಗಿದ್ದಾರೆ.

Leave A Reply

Your email address will not be published.