SSLC ಪರೀಕ್ಷಾ ಮೇಲ್ವಿಚಾರಕನಿಗೆ ಕೊರೊನಾ ಪಾಸಿಟಿವ್: ಶಿಕ್ಷಕನ ಎಡವಟ್ಟಿನಿಂದ ಆತಂಕದಲ್ಲಿದ್ದಾರೆ 130 ವಿದ್ಯಾರ್ಥಿಗಳು

0

ತುಮಕೂರು : ಶಂಕಿತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಲ್ಲೂ ವಿಚಾರವನ್ನು ಮೇಲ್ವಿಚಾರಕರಿಗೆ ತಿಳಿಸದೆ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದ ಶಿಕ್ಷಕನಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಶಿಕ್ಷಕನ ಎಡವಟ್ಟಿನಿಂದಾಗಿ ಪರೀಕ್ಷೆ ಬರೆದಿದ್ದ 130 ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಅರಸೀಕೆರೆಯಲ್ಲಿ ಈ ಘಟನೆ ನಡೆದಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ಶಿಕ್ಷಕ ಜೂನ್ 22ರಂದು ಕೊರೊನಾ ಸೋಂಕಿನ ತಪಾಸಣೆಗಾಗಿ ಜೂನ್ 22ರಂದು ಗಂಟಲು ದ್ರವದ ಪರೀಕ್ಷೆಗೆ ಒಳಗಾಗಿದ್ದಾನೆ. ಈ ವಿಚಾರವನ್ನು ಶಿಕ್ಷಕ ಮೇಲಾಧಿಕಾರಿಗಳಿಗೆ ತಿಳಿಸದೇ ನಿನ್ನೆ ಎಸ್ಎಸ್ಎಲ್ ಸಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿದ್ದಾನೆ ಎನ್ನಲಾಗಿದೆ.

ಆದ್ರೀಂದು ಶಿಕ್ಷಕನ ಕೊರೊನಾ ತಪಾಸಣಾ ವರದಿ ಬಂದಿದ್ದು ಶಿಕ್ಷಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪರೀಕ್ಷೆ ಬರೆದಿದ್ದ 130 ವಿದ್ಯಾರ್ಥಿಗಳು ಹಾಗೂ 12 ಮಂದಿ ಶಿಕ್ಷಕರಿಗೆ ಇದೀಗ ಕೊರೊನಾ ಭೀತಿ ಎದುರಾಗಿದೆ. ಅಲ್ಲದೇ ಬಿಇಓ ಕೂಡ ಶಿಕ್ಷಕನ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಇದೀಗ ಶಿಕ್ಷಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಆರೋಗ್ಯಾಧಿಕಾರಿಗಳು ಅರಸಿಕರೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಸೋಂಕಿತನ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಾತ್ರವಲ್ಲ ಶಾಲೆಯನ್ನೇ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.

Leave A Reply

Your email address will not be published.