ಬಿಗ್ ಬಾಸ್ – 08 : ಮೊದಲ ವಾರವೇ ಹೊರಬಿದ್ದ ಟಿಕ್ ಟಾಕ್ ಸ್ಟಾರ್ ಧನುಶ್ರೀ

ಬೆಂಗಳೂರು : ಬಿಗ್‍ಬಾಸ್ ಸೀಸನ್- 8 ಆವೃತ್ತಿಯ ಮೊದಲ ವಾರದಲ್ಲಿಯೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆ. ಮೊದಲ ವಾರವೇ ಮನೆಯಿಂದ ಹೋದ್ರೆ ಹೇಗೆ ಅಂತ ಶುಕ್ರವಾರ ಎಪಿಸೋಡ್ ನಲ್ಲಿ ಧನುಶ್ರೀ ಸಪ್ಪೆ ಮೋರೆ ಹಾಕಿಕೊಂಡಿದ್ರು. ಇದೀಗ ಬಿಗ್‍ಬಾಸ್ ಮನೆಯಿಂದ ಧನುಶ್ರೀ ಹೊರ ನಡೆದಿದ್ದಾರೆ.

ಕನ್ನಡದ ಬಿಗ್ ಬಾಸ್ ಈ ಬಾರಿಯೂ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈಗಾಗಲೇ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ಮೊದಲ ವಾರದ ವಿಶ್ವನಾಥ್, ನಿರ್ಮಲಾ, ಶುಭಾಪೂಂಜಾ, ರಘುಗೌಡ ಹಾಗೂ ಧನುಶ್ರೀ ನಾಮಿನೇಟ್ ಆಗಿದ್ದರು. ಈ ಪೈಕಿ ಇದೀಗ ಧನುಶ್ರೀ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಶೋ ನ ಮೊದಲ ವಾರದಲ್ಲಿಯೇ ಪ್ರೇಮಕಥೆಗಳು ಶುರುವಾಗಿದೆ. ಶಮಂತ್ ಗೌಡ, ಲ್ಯಾಗ್ ಮಂಜ ಮತ್ತು ದಿವ್ಯಾ ಸುರೇಶ್ ನಡುವೆ ತ್ರಿಕೋನ ಪ್ರೇಮಕಥೆ ಹುಟ್ಟಿಕೊಂಡಿದೆ. ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿಯೂ ತಮ್ಮ ಖದರ್ ಮುಂದುವರಿಸಿದ್ದಾರೆ. ಈ ಬಾರಿಯೂ ಪ್ರಬಲ ಪೈಪೋಟಿ ಎದುರಾಗುವ ಎಲ್ಲಾ ನಿರೀಕ್ಷೆಗಳನ್ನು ಆರಂಭದಲ್ಲಿಯೇ ಸ್ಪರ್ಧಿಗಳು ಹುಟ್ಟುಹಾಕಿದ್ದಾರೆ.

Comments are closed.