ಉಡುಪಿ : ಮಗು ಮಾರಾಟ ಜಾಲ, ಮಹಿಳೆಯ ಬಂಧನ

ಕಾರ್ಕಳ : ಕರಾವಳಿಯಲ್ಲಿ ಮಗು ಮಾರಾಟ ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಹೆಚ್ಚಿದ ಬೆನ್ನಲ್ಲೇ ಮತ್ತೋರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದ ಕುಕ್ಕುಂದೂರು ನಿವಾಸಿಯಾಗಿರುವ ಕವಿತಾ ಎಂಬಾಕೆಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಹಾಸನದ ಮಗುವೊಂದನ್ನು ಪಡೆದು ಮರಿಯಾ ಎಂಬಾಕೆಗೆ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕವಿತಾಳನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.

ಮರಿಯಮ್ಮ ಎಂಬವರಿಗೆ ಮದುವೆಯಾಗಿ 8 ವರ್ಷ ಕಳೆದಿದ್ದರೂ ಕೂಡ ಮಕ್ಕಳಾಗಿರಲಿಲ್ಲ. ಹೀಗಾಗಿ ಮರಿಯಮ್ಮ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಹಾಸನ ಮೂಲದ ಮಗುವನ್ನು ಮೂಲ್ಕಿ ಮೂಲದ ರೆಯಾನ್ 3 ಲಕ್ಷ ರೂಪಾಯಿ ನೀಡಿ ಮಗುವೊಂದನ್ನು ಖರೀದಿಸಿ ನಂತರ 5 ಲಕ್ಷ ರೂಪಾಯಿಗೆ ಮಗುವನ್ನು ಕವಿತಾಳಿಗೆ ಮಾರಾಟ ಮಾಡಿದ್ದಾನೆ. ಆದರೆ ಕವಿತಾ ಮಗುವನ್ನು ಮರಿಯಮ್ಮ ಎಂಬವರಿಗೆ ಎಷ್ಟು ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಅನ್ನೋದು ತನಿಖೆಯಿಂದ ತಿಳಿದುಬರಬೇಕಾಗಿದೆ.

ಕಾರ್ಕಳದ ಜೋಡು ರಸ್ತೆಯಲ್ಲಿ ಫ್ಯಾನ್ಸಿ ಅಂಗಡಿ ಹೊಂದಿರುವ ಕವಿತಾ ಇದೀಗ ಅಕ್ರಮವಾಗಿ ಮಗು ಮಾರಾಟ ಜಾಲದಲ್ಲಿ ಇರೋದು ಬಯಲಾಗಿದೆ. ರೆಯಾನ್ ಹಾಗೂ ಕವಿತಾ ಕೇವಲ ಇದೊಂದೇ ಮಗುವನ್ನು ಮಾರಾಟ ಮಾಡಿದ್ದಾರೆಯೇ ಇಲ್ಲಾ, ಬೇರೆ ಮಗುವನ್ನೂ ಮಾರಾಟ ಮಾಡಿದ್ರಾ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಾಗಿದೆ. ಒಟ್ಟಿನಲ್ಲಿ ಮಗು ಮಾರಾಟ ಜಾಲ ಸಕ್ರೀಯವಾಗಿರೋ ಮಾಹಿತಿ ಬಯಲಾಗುತ್ತಲೇ ಕರಾವಳಿಗರು ಮಾತ್ರ ಬೆಚ್ಚಿಬಿದ್ದಿದ್ದಾರೆ.

Comments are closed.