Bigg Boss Kannada Ott 1: ಬಿಗ್​ಬಾಸ್​ ಒಟಿಟಿ ಸೀಸನ್​​ 1ರ ಟಾಪರ್​ ಆಗಿ ಹೊರಹೊಮ್ಮಿದ ಕರಾವಳಿ ಕುವರ ರೂಪೇಶ್​ ಶೆಟ್ಟಿ

Bigg Boss Kannada Ott 1 : ಕನ್ನಡ ಕಿರುತೆರೆಯಲ್ಲಿ ಹೊಸದೊಂದು ಪ್ರಯತ್ನ ಎನಿಸಿಕೊಂಡಿದ್ದ ಬಿಗ್​ಬಾಸ್​ ಕನ್ನಡ ಓಟಿಟಿ ಸೀಸನ್​ 1 ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ.ವೂಟ್​ ಆ್ಯಪ್​ನಲ್ಲಿ ಪ್ರಸಾರವಾಗುತ್ತಿದ್ದ ಈ ಸೀಸನ್​​ ಶುಕ್ರವಾರದಂದು ತನ್ನ ಗ್ರ್ಯಾಂಡ್​ ಫಿನಾಲೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದೆ. ಫಿನಾಲೆ ಕಾರ್ಯಕ್ರಮದಲ್ಲಿ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದು ಇವರಲ್ಲಿ ನಾಲ್ಕು ಮಂದಿಯನ್ನು ಕಿಚ್ಚ ಸುದೀಪ್​ ಬಿಗ್​ಬಾಸ್​ ಸೀಸನ್​ 9ಗೆ ಕಳುಹಿಸಿಕೊಟ್ಟಿದ್ದಾರೆ. ವೀಕ್ಷಕರು ನೀಡಿದ ಮತಗಳನ್ನು ಆಧರಿಸಿ ನಡೆದ ಆಯ್ಕ ಪ್ರಕ್ರಿಯೆಯಲ್ಲಿ ಟಾಪರ್​ ಆಗಿ ರೂಪೇಶ್​ ಶೆಟ್ಟಿ ಹೊರ ಹೊಮ್ಮಿದ್ದಾರೆ.


ಬಿಗ್​ಬಾಸ್​ ಸೀಸನ್​ 9ಗೆ ಒಟಿಟಿ ಸೀಸನ್​ನಿಂದ ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ, ಆರ್ಯವರ್ಧನ ಗುರೂಜಿ ಹಾಗೂ ಸಾನ್ಯಾ ಅಯ್ಯರ್​ ಆಯ್ಕೆಯಾಗಿದ್ದಾರೆ. ಟಾಪ್​ 4 ಸ್ಥಾನಕ್ಕಾಗಿ ಸಾನ್ಯಾ ಅಯ್ಯರ್​ ಹಾಗೂ ಸೋನು ಗೌಡ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಯಲ್ಲಿ ಕಿಚ್ಚ ಸುದೀಪ್ ಬಿಗ್​ ಬಾಸ್​ ಕನ್ನಡ ಒಟಿಟಿ ಸೀಸನ್​ ಒಂದರ ಟಾಪ್​ 4 ಸ್ಪರ್ಧಿ ಸಾನ್ಯಾ ಅಯ್ಯರ್ ಎಂದು ಘೋಷಣೆ ಮಾಡಿದ್ದಾರೆ.


ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಫಿನಾಲೆ ಸ್ಪರ್ಧಿಗಳಾಗಿದ್ದ ಸೋಮಣ್ಣ ಮಾಚಿಮಾಡ, ಜಶ್ವಂತ್​, ಜಯಶ್ರೀ ಹಾಗೂ ಸೋನು ಗೌಡ ಬಿಗ್​ಬಾಸ್​ ಸೀಸನ್​ 9ಗೆ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಬಿಗ್​ಬಾಸ್​ ಒಟಿಟಿ ಸೀಸನ್​ ಒಂದಕ್ಕೆ ವಿನ್ನರ್​ ಎಂದು ಯಾರೂ ಇರುವುದಿಲ್ಲ. ವೂಟ್​ ಆ್ಯಪ್​ನಲ್ಲಿ ವೀಕ್ಷಕರು ನೀಡಿದ ಮತಗಳನ್ನು ಆಧರಿಸಿ ಅತ್ಯಧಿಕ ಮತಗಳನ್ನು ಪಡೆದಿರುವ ರೂಪೇಶ್​ ಶೆಟ್ಟಿಯನ್ನು ಟಾಪರ್​ ಎಂದು ಘೋಷಣೆ ಮಾಡಲಾಗಿದೆ. ಜನಪ್ರಿಯ ಸ್ಪರ್ಧಿ ಎಂಬ ಶೀರ್ಷಿಕೆ ಪಡೆದ ರೂಪೇಶ್​ ಶೆಟ್ಟಿಗೆ ಬಹುಮಾನದ ರೂಪದಲ್ಲಿ ಐದು ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.


ಬಿಗ್​ಬಾಸ್​​ ಒಟಿಟಿ ಸೀಸನ್​​ನ ಐದನೇ ವಾರದಲ್ಲಿ ಹಣ ಗಳಿಕೆ ಮಾಡಲು ಬಿಗ್​ಬಾಸ್​ ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸ್ಪರ್ಧಿಗಳು 2,86,000 ರೂಪಾಯಿಗಳನ್ನು ಗೆದ್ದಿದ್ದರು. ಈ ಹಣ ಹಾಗೂ 2,14,000 ರೂಪಾಯಿಗಳನ್ನು ಸೇರಿಸಿ ರೂಪೇಶ್​ ಶೆಟ್ಟಿ ಒಟ್ಟು ಐದು ಲಕ್ಷ ರೂಪಾಯಿಗಳ ಚೆಕ್​ನ್ನು ಸ್ವೀಕರಿಸಿದ್ದಾರೆ. ಬಿಗ್​ ಬಾಸ್​ ಒಟಿಟಿ ಸೀಸನ್​ನಲ್ಲಿ ಟಾಪರ್​ ಎನಿಸಿರುವ ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಸೀಸನ್​ 9ನಲ್ಲಿ ಯಾವ ರೀತಿ ಕಮಾಲ್​ ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.

ಇದನ್ನು ಓದಿ : Super Sub Rules in Domestic Cricket: ಸೈಯದ್ ಮುಷ್ತಾಕ್ ಅಲಿ ಟಿ20ಗೆ ಸೂಪರ್ ಸಬ್ ವಾಪಸ್: ಐಪಿಎಲ್‌ಗೂ ಬರಲಿದೆ ಬಿಸಿಸಿಐನ ಹೊಸ ರೂಲ್ಸ್?

ಇದನ್ನೂ ಓದಿ : 56inch Modi Ji Thali : ಮೋದಿ ಬರ್ತಡೇಗೆ ಬನ್ನಿ: ಊಟ ಮಾಡಿ 8.5 ಲಕ್ಷ ಬಹುಮಾನ ಗೆಲ್ಲಿ….!

Bigg Boss Kannada Ott 1 Roopesh Shetty Emerges As Topper Of Bigg Boss Kannada Ott 1

Comments are closed.