Sanju Samson: ಸಂಜು ಸ್ಯಾಮ್ಸನ್ ಬಾಯಿಗೆ ತುಪ್ಪ ಸವರಿದ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಕೇರಳದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ (Sanju Samson ICC T20 World Cup) ಬಾಯಿಗೆ ಬಿಸಿಸಿಐ ತುಪ್ಪ ಸವರಿದೆ.

(Sanju Samson)ಸಂಜು ಸ್ಯಾಮ್ಸನ್ ಅವರಿಗೆ ಟಿ20 ವಿಶ್ವಕಪ್ (Asia Cup T20)ತಂಡದಲ್ಲಿ ಸ್ಥಾನ ನೀಡದಿರುವುದಕ್ಕೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಸ್ಯಾಮ್ಸನ್ ಅವರನ್ನು ನ್ಯೂಜಿಲೆಂಡ್ ‘ಎ’ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ‘ಎ’ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ.

ಟಿ20 ವಿಶ್ವಕಪ್ (Asia Cup T20)ತಂಡದಿಂದ ಕೈಬಿಟ್ಟು, ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಿರುವು ಸಂಜು ಸ್ಯಾಮ್ಸನ್ ( Sanju Samson ICC T20 World Cup) ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಕ್ರಿಕೆಟ್ ಪ್ರಿಯರು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ.

https://twitter.com/saurav_king18/status/1570708002499612680?s=20&t=vhE-P2PDAs0Yzeo2uBlPyA

ಕಳೆದ ಐಪಿಎಲ್’ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದರು. ಅಷ್ಟೇ ಅಲ್ಲ, 17 ಪಂದ್ಯಗಳಿಂದ 146.79ರ ಸ್ಟ್ರೈಕ್’ರೇಟ್’ನಲ್ಲಿ 458 ರನ್ ಕಲೆ ಹಾಕಿದ್ದರು. ಈ ವರ್ಷ ಭಾರತ ಪರ 5 ಟಿ20 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸ್ಯಾಮ್ಸನ್, ಒಟ್ಟು 179 ರನ್ ಗಳಿಸಿದ್ದಾರೆ. ಸ್ಯಾಮ್ಸನ್ ಉತ್ತಮ ಫಾರ್ಮ್’ನಲ್ಲಿದ್ದರೂ ದೆಹಲಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಹಿತ ಕಾಯುವ ಸಲುವಾಗಿ ಕೇರಳದ ಆಟಗಾರನನ್ನು ಕಡೆಗಣಿಸಲಾಗುತ್ತಿದೆ ಎಂದು ಕ್ರಿಕೆಟ್ ಪ್ರಿಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ನ್ಯೂಜಿಲೆಂಡ್ ‘ಎ’ ವಿರುದ್ಧದ ಏಕದಿನ ಸರಣಿಗೆ ಭಾರತ ‘ಎ’ ತಂಡ:
ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಶಹಬಾಜ್ ಅಹ್ಮದ್, ರಾಹುಲ್ ಚಹರ್, ತಿಲಕ್ ವರ್ಮಾ, ಕುಲ್ದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವ್’ದೀಪ್ ಸೈನಿ, ರಾಜ್ ಅಂಗದ್ ಬಾವಾ.

ಇದನ್ನೂ ಓದಿ : ವೆಂಕಟೇಶ್ ಅಯ್ಯರ್ ತಲೆಗೆ ಗಾಯ; ಆಸ್ಪತ್ರೆಗೆ ಹೊತ್ತೊಯ್ಯಲು ಮೈದಾನಕ್ಕೇ ನುಗ್ಗಿದ ಆ್ಯಂಬುಲೆನ್ಸ್

ಇದನ್ನೂ ಓದಿ : ಸೈಯದ್ ಮುಷ್ತಾಕ್ ಅಲಿ ಟಿ20ಗೆ ಸೂಪರ್ ಸಬ್ ವಾಪಸ್: ಐಪಿಎಲ್‌ಗೂ ಬರಲಿದೆ ಬಿಸಿಸಿಐನ ಹೊಸ ರೂಲ್ಸ್?

ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಭಾರತ ‘ಎ’ Vs ನ್ಯೂಜಿಲೆಂಡ್ ‘ಎ’ ಏಕದಿನ ಸರಣಿಯ ವೇಳಾಪಟ್ಟಿ:

  • ಮೊದಲ ಏಕದಿನ: ಸೆಪ್ಟೆಂಬರ್ 22, ಎಂ.ಎ ಚಿದಂಬರಂ ಮೈದಾನ, ಚೆನ್ನೈ
  • 2ನೇ ಏಕದಿನ: ಸೆಪ್ಟೆಂಬರ್ 25, ಎಂ.ಎ ಚಿದಂಬರಂ ಮೈದಾನ, ಚೆನ್ನೈ
  • 3ನೇ ಏಕದಿನ: ಸೆಪ್ಟೆಂಬರ್ 27, ಎಂ.ಎ ಚಿದಂಬರಂ ಮೈದಾನ, ಚೆನ್ನೈ

Sanju Samson’s mouth smeared with ghee, fans are furious against BCCI

Comments are closed.