BiggBOss ಕನ್ನಡ ಶೋ ಬಂದ್ : ಪ್ರೇಕ್ಷಕರಿಗೆ ಶಾಕ್ ಕೊಟ್ಟ ಪರಮೇಶ್ವರ ಗುಂಡ್ಕಲ್

ಕನ್ನಡ ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಬಂದ್ ಆಗುವುದು ಖಚಿತವಾಗಿದೆ. ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ನಡೆಯುತ್ತಿದ್ದ ಬಿಗ್ ಬಾಸ್ ಬಂದ್ ಮಾಡುವಂತೆ ಸಾಕಷ್ಟು ಒತ್ತಡಗಳು ಕೇಳಿಬಂದಿತ್ತು. ಇದೀಗ ಕಲರ್ಸ್ ವಾಹಿನಿ ಅಧಿಕೃತ ವಾಗಿಯೇ ಬಿಗ್ ಬಾಸ್ ಬಂದ್ ಮಾಡಲು ಮುಂದಾಗಿದೆ.

ಕಲರ್ಸ್ ವಾಹಿನಿಯ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಅವರೇ ಖದ್ದು ಈ ಕುರಿತು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಇಂದು ವೀಕೆಂಡ್ ಶೋ ಪ್ರಸಾರವಾಗಲಿದೆ. ಈಗಾಗಲೇ ಸ್ಪರ್ಧಿಗಳನ್ನು ಕರೆದು ಮಾತನಾಡುವ ಕಾರ್ಯವನ್ನು ಮಾಡುವುದಾಗಿ ಹೇಳಿದ್ದಾರೆ. ಎಲ್ಲಾ ಸ್ಪರ್ಧಿಗಳು ಐಸೋಲೇಶನ್ ನಲ್ಲಿ ಇದ್ದು, ಅವರನ್ನು ನಾಳೆ ಕರೆದು ಮಾತನಾಡಿ, ಸುರಕ್ಷಿತವಾಗಿ ಮನೆಗೆ ಕಳುಹಿಸುವ ಕಾರ್ಯವನ್ನು ಮಾಡುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಬಿಗ್‍ಬಾಸ್ ಮನೆಯಲ್ಲಿ ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ಅರವಿಂದ್ ಕೆ.ಪಿ., ಮಂಜು ಪಾವಗಡ, ಶಮಂತ್ ಬ್ರೋ ಗೌಡ ಉಳಿದುಕೊಂಡಿದ್ದಾರೆ. ಆದರೆ ಬಿಗ್ ಬಾಸ್  ಕನ್ನಡ ಶೋ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅರ್ಧದಲ್ಲಿಯೇ ಮೊಟಕು ಗೊಳ್ಳುತ್ತಿದೆ. ಇದರಿಂದಾಗಿ ಬಿಗ್ ಬಾಸ್ ಸ್ಪರ್ಧಿಗಳಿಗೆ ನಿರಾಸೆ ಉಂಟಾಗಿದೆ. ಲಾಕ್ ಡೌನ್ ಕಾರಣ ಹಿನ್ನೆಲೆಯಲ್ಲಿ ಶೋ ಬಂದ್ ಅಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಬಾರಿ ಮಲಯಾಲಂ ಶೋವನ್ನು ರದ್ದು ಪಡಿಸಲಾಗಿತ್ತು.

Comments are closed.