Salman khan : ಸಲ್ಮಾನ್ ಖಾನ್ ಮನೆ ಮಾರಾಟ : ನಷ್ಟದ ಸುಳಿಗೆ ಸಿಲುಕಿದ್ರಾ ಬಾಲಿವುಡ್‌ ನಟ

ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ಕಳೆದ ಎರಡು ವರ್ಷಗಳಲ್ಲಿ ಎರಡು ಮನೆಗಳನ್ನು ಮಾರಾಟ ಮಾಡಿದ್ದಾರೆ. ಇದೀಗ ಅವರು ಬಾಂದ್ರಾದಲ್ಲಿ ಇರುವ ಮತ್ತೊಂದು ಫ್ಲಾಟ್‌ ಮಾರಾಟಕ್ಕೆ ಸಜ್ಜಾಗಿದ್ದಾರೆ,

Salman khan : ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಇದೀಗ ಸಿನಿಮಾದಿಂದಲ್ಲ., ಆಸ್ತಿ ಮಾರಾಟದ ವಿಚಾರವಾಗಿ ಬಾರೀ ಸುದ್ದಿಯಲ್ಲಿದ್ದಾರೆ. ಮುಂಬೈನ ಬಾಂದ್ರಾದ ಐಷಾರಾಮಿ ಪ್ರದೇಶದಲ್ಲಿ ಇರುವ ಫ್ಲಾಟ್‌ಗಳನ್ನು ಮಾರಾಟ ಮಾಡಿದ್ದಾರೆ. ಕಡಿಮೆ ಬೆಲೆಗೆ ಖರೀದಿ ಮಾಡಿದ್ಸುದ ಫ್ಲಾಟ್‌ ಅನ್ನು ಬರೋಬ್ಬರಿ 3.50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಅಲ್ಲದೇ ಪ್ರಸ್ತುತ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಅವರು ವಾಸಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅವರು ಎರಡು ಮನೆಗಳನ್ನು ಮಾರಾಟ ಮಾಡಿದ್ದಾರೆ.

Salman khan : ನಟ ಸನ್ಮಾನ್‌ ಖಾನ್‌ ಫ್ಲಾಟ್‌ ಖರೀದಿಸಿದ್ದು ಯಾರು ?

ನಟ ಸನ್ಮಾನ್‌ ಖಾನ್‌ ಅವರ ಫ್ಲಾಟ್‌ಗಳಿಗೆ ಬಾರೀ ಬೇಡಿಕೆ ಇದೆ. 2015ರಲ್ಲಿ ಸುಮಾರು 2.88 ಕೋಟಿ ರೂಪಾಯಿಗೆ ಸಲ್ಮಾನ್‌ ಖಾನ್‌ ಈ ಫ್ಲಾಟ್‌ ಖರೀದಿಸಿದ್ದರು. ಸುಮಾರು 11 ವರ್ಷಗಳ ಕಾಲ ಇದೇ ಫ್ಲಾಟ್‌ನಲ್ಲಿ ವಾಸವಿದ್ದ ಅವರು, ನಂತರ ಈ ಫ್ಲಾಟ್‌ ಅನ್ನು ಮಾರಾಟ ಮಾಡಿದ್ದರು. ಆಸ್ತಿ ನೋಂದಣಿಯಲ್ಲಿರುವ ದಾಖಲೆಗಳ ಪ್ರಕಾರ, ಈ ಪ್ಲಾಟ್‌ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿರುವ ಪ್ರಸಿದ್ದ ಶಿವ – ಅಸ್ಥಾನ್‌ ಹೈಟ್ಸ್‌ ನಲ್ಲಿದ್ದು, ಮುನಿರಾ ಅಕ್ಬರಾಲಿ ದಂಡವಾಲಾ, ಮಹದಯಾಲಿ ಅಕ್ಬರಾಲಿ ದಂಡವಾಲಾ ಮತ್ತು ಜೆಹ್ರಾ ಮಹದಯಾಲಿ ದಂಡವಾಲಾ ಅವರು ಖರೀದಿ ಮಾಡಿದ್ದರು.

ಐಷಾರಾಮಿ ಫ್ಲಾಟ್‌ ಜೊತೆಗೆ ಎರಡು ಕಾರ್‌ ಪಾರ್ಕಿಂಗ್‌ ಸ್ಥಳಗಳು ಇದ್ದು, ಜುಲೈ 9 2026ರಂದು ನೋಂದಣಿಯಾಗಿದೆ. ಸಲ್ಮಾನ್‌ ಖಾನ್‌ ತಮ್ಮ ಮನೆ ಮಾರಾಟದ ಬಳಿಕ ಅವರು ಎಲ್ಲಿ ವಾಸವಾಗಿದ್ದಾರೆ ಅನ್ನೋ ಕುರಿತು ಚರ್ಚೆ ಶುರುವಾಗಿದೆ.

ಕಳೆದ ಬಾರಿಯ ಶಿವ – ಅಸ್ತಾನ್‌ ಹೈಟ್ಸ್‌ನಲ್ಲಿರುವ ಒಂದು ಫ್ಲಾಟ್‌ ಅನ್ನು ಬರೋಬ್ಬರಿ 5.35 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಸಿನಿಮಾದ ಜೊತೆಗೆ ಜೊತೆಗೆ ಇದೀಗ ಫ್ಲಾಟ್‌ಗಳ ಮೇಲೆ ಹೂಡಿಕೆ ಮಾಡಿ ಸ್ವಲ್ಪ ಸಮಯದವರೆಗೆ ವಾಸವಿದ್ದು, ನಂತರ ಮಾರಾಟ ಮಾಡುವ ಮೂಲಕ ಸಾಕಷ್ಟು ಲಾಭವನ್ನು ನಟ ಸಲ್ಮಾನ್‌ ಖಾನ್‌ ಗಳಿಸುತ್ತಿದ್ದಾರೆ.

Salman khan : ಹೊಸ ಮನೆಗೆ ಶಿಫ್ಟ್‌ ಆಗ್ತಾರಾ ನಟ ಸಲ್ಮಾನ್‌ ಖಾನ್‌

ಮುಂಬೈನ ಮಾಧ್ಯಮಗಳ ವರದಿಯ ಪ್ರಕಾರ, ನಟ ಸಲ್ಮಾನ್‌ ಖಾನ್‌ ಅವರು ಸದ್ಯದಲ್ಲಿಯೇ ತಮ್ಮ ಹೊಸ ಮನೆಗೆ ಶಿಫ್ಟ್‌ ಆಗಲಿದ್ದಾರೆ. ತಮ್ಮ ತಾಯಿ ಸಲ್ಮಾ ಖಾನ್‌ ಒಡೆತನ ನಿವೇಶನದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಸಲ್ಮಾ ಖಾನ್‌ ಅವರ ಕುಟುಂಬ 2011ರಲ್ಲಿ ಈ ಭೂಮಿಯನ್ನು ಖರೀದಿ ಮಾಡಿತ್ತು. ಮುಂಬೈನ ಬಾಂದ್ರಾದ ಚಿಂಬೈ ಪ್ರದೇಶದ ಹೊರವಲಯದಲ್ಲಿ ಇದೀಗ ನಟನ ಮನೆ ನಿರ್ಮಾಣವಾಗುತ್ತಿದ್ದು, ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (MCZMA) ಮನೆ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಿದೆ. ಹೊಸ ಮನೆಯಲ್ಲಿ ಸಲ್ಮಾನ್‌ ಖಾನ್‌ ಅವರ ಸಂಪೂರ್ಣ ಕುಟುಂಬ ಒಟ್ಟಿಗೆ ವಾಸ ಮಾಡಲಿದೆ.

bollywood famous actor salman khan sale flat in galaxy apartment in mumbai bandra west Kananda news

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »