ಬಾಲಿವುಡ್ ನಟಿಗೆ ಬಂದೂಕು ತೋರಿಸಿ ದರೋಡೆ: ನನ್ನ ಮೇಲೆ ಅತ್ಯಾಚಾರ ಮಾಡಿದ್ರೇ ಎಂದು ಭಯವಾಯ್ತು ಎಂದ ನಟಿ

ಇವೆಂಟ್ ಗಾಗಿ ಅಡ್ವಾನ್ಸ್ ಪಡೆದು ವಾಪಸ್ಸಾಗುತ್ತಿದ್ದ ಬಾಲಿವುಡ್ ನಟಿಯ ಕಾರನ್ನು ಅಡ್ಡ ಹಾಕಿದ ದರೋಡೆಕೋರರ ಗುಂಪು ಗನ್ ತೋರಿಸಿ ದೋಚಿದ ಘಟನೆ ದೆಹಲಿಯಲ್ಲಿ ನಡೆದಿದೆ. ನಟಿ ನಿಖಿತಾ ರಾವಲ್ ದರೋಡೆಗೊಳಗಾದ ನಟಿಯಾಗಿದ್ದು ತಮ್ಮ ಭಯಾನಕ ಅನುಭವ ಹಂಚಿಕೊಂಡಿದ್ದಾರೆ.

ಗರಂ ಮಸಾಲಾ ಸೇರಿದಂತೆ ಬಾಲಿವುಡ್ ನ ಹಲವು ಸಿನಿಮಾದಲ್ಲಿ ನಟಿಸಿರುವ ನಟಿ ನಿಖಿತಾ ರಾವಲ್ ದೆಹಲಿಯಲ್ಲಿರುವ ತಮ್ಮ ಚಿಕ್ಕಮ್ಮನ ಮನೆ ಗೆ ತೆರಳುವ ವೇಳೆ ಕಾರಿನಲ್ಲಿ ಬಂದ 7 ಜನ ದರೋಡೆಕೋರರು ಗನ್ ತೋರಿಸಿ ನಿಖಿತಾರನ್ನು ಬೆದರಿಸಿದ್ದಾರೆ ಎನ್ನಲಾಗಿದೆ.

ಬಳಿಕ ನಿಖಿತಾ ಬಳಿ ಇದ್ದ ವಜ್ರದ ಉಂಗುರ, ವಜ್ರದ ಪೆಂಡೆಂಟ್ ಇರುವ ಚೈನ್,ಹಣವನ್ನು ದೋಚಿ ಪರಾರಿಯಾಗಿದ್ದಾರಂತೆ. 10 ನಿಮಿಷಗಳ ಕಾಲ ನನಗೆ ತುಂಬ ಭಯವಾಗಿತ್ತು ಎಂದ ನಿಖಿತಾ, ನನ್ನನ್ನು ಕೊಂದೆ ಬಿಡುತ್ತಾರೆ. ಅಥವಾ ನನ್ನನ್ನು ಹೊತ್ತೊಯ್ದು ಅತ್ಯಾಚಾರ ಮಾಡಿದರೇ ಎಂಬ ಭಯ ಕಾಡುತಿತ್ತು ಎಂದು ಭಯಾನಕ ಸನ್ನಿವೇಶವನ್ನು ವಿವರಿಸಿದ್ದಾರೆ.

ದರೋಡೆಗೊಳಗಾಗಿ ಮನೆಗೆ ಬಂದ ಮೇಲೂ ನನ್ನನ್ನು ವಿಪರೀತ ಭಯ ಕಾಡತೊಡಗಿತ್ತು. ಹೀಗಾಗಿ ನಾನು ಮಾರನೇ ದಿನ ಬೆಳಗ್ಗೆಯೇ ಫ್ಲೈಟ್ ಹಿಡಿದು ಮುಂಬೈಗೆ ವಾಪಸ್ಸಾದೆ ಎಂದಿರುವ ನಿಖಿತಾ ವಕೀಲರ ಮೂಲಕ ದೂರು ನೀಡಿದ್ದಾರಂತೆ.

ಅಂದಾಜು 7 ಲಕ್ಷ ರೂಪಾಯಿ ಮೌಲ್ಯದ ವಸ್ತುವನ್ನು ಕಳೆದುಕೊಂಡಿರುವ ನಿಖಿತಾ, ದೆಹಲಿ ಪೊಲೀಸರು ಸಂತ್ರಸ್ಥರು ದೂರು ಕೊಡುವ ವೇಳೆ ಹಾಜರಿರಬೇಕು ಎಂದಿರುವ ಕಾರಣಕ್ಕೆ ಮತ್ತೊಮ್ಮೆ ದೆಹಲಿಗೆ ಹೋಗಿ ದೂರು ದಾಖಲಿಸಲಿದ್ದಾರಂತೆ. ಸದ್ಯ ನಿಖಿತಾ ರೋಟಿ ಕಫಡಾ ಔರ್ ರೋಮಾನ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ :‌ ಮತ್ತೇರಿಸುತ್ತಿದೆ ಬಹುಭಾಷಾ ಬೆಡಗಿ ಅಮೈರಾ ದಸ್ತರ್ ಹಾಟ್ ಪೋಟೋಸ್

ಇದನ್ನೂ ಓದಿ : ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್

ಇದನ್ನೂ ಓದಿ : ದೇಸಿ ಕಾಸ್ಟ್ಯೂಮ್ ನಲ್ಲಿ ವಿದೇಶಿ ಚೆಲುವೆ: ಪಡ್ಡೆ ಹೈಕಳ ನಿದ್ದೆ ಕದ್ದ ಜಾಕ್ವಲಿನ್ ಹಾಟ್ ಅವತಾರ!

( Nikita Rawal robbed of Rs 7 lakh at gunpoint )

Comments are closed.