Rakhi sawant: ನವಜೋತ ಸಿಂಗ್ ಸಿಧು ರಾಜಕಾರಣದ ರಾಖಿಸಾವಂತ್: ಕಮೆಂಟ್ ವಿರುದ್ಧ ನಿಂತ ಪತಿಗೆ ರಾಖಿ ಧನ್ಯವಾದ

ರಾಜಕಾರಣದ ವಿಚಾರಕ್ಕೆ ತಮ್ಮ ಹೆಸರನ್ನು ಬಳಕೆ ಮಾಡಿಕೊಂಡ ಶಾಸಕರಿಗೆ ರಾಖಿ ಸಾವಂತ್ ಪತಿ ತಿರುಗೇಟು ನೀಡಿದ್ದು, ತನ್ನ ಪರ ನಿಂತ ಪತಿಗೆ ರಾಖಿ ಸಾವಂತ್ ಧನ್ಯವಾದ ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು, ಪಂಜಾಬ ರಾಜಕಾರಣದ ರಾಖಿ ಸಾವಂತ್ ಎಂದು ಎಎಪಿ ಶಾಸಕ ರಾಘವ್ ಚಡ್ಡಾ ಶುಕ್ರವಾರ ಟೀಕಿಸಿದ್ದರು. ಈ ಹೇಳಿಕೆಯನ್ನು ಖಂಡಿಸಿದ ರಾಖಿ ಸಾವಂತ್, ರಿತೇಶ್ ಚಡ್ಡಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪತಿ ರಿತೇಶ್ ರಾಘವ್ ಚಡ್ಡಾಗೆ ಕಮೆಂಟ್ ನಲ್ಲಿ ನೀಡಿದ ಉತ್ತರಗಳನ್ನು ಶೇರ್ ಮಾಡಿಕೊಂಡಿರುವ ರಾಖಿ ಸಾವಂತ್, ರಾಘವ್ ಚಡ್ಡಾಗೆ ನನ್ನ ಪತಿ ಪ್ರತಿಕ್ರಿಯಿಸಿದ್ದಾರೆ. ಈ ವರೆಗೂ ನಾನು ಒಬ್ಬಂಟಿಯಾಗಿದ್ದರಿಂದ ಜನರು ನನ್ನನ್ನು ಹಿಂಸಿಸುತ್ತಿದ್ದರು. ಇಂದು ನನಗೆ ಕಣ್ಣೀರು ಬರುತ್ತಿದೆ. ನನ್ನ ಜೊತೆ ಯಾರೋ ಒಬ್ಬರು ನಿಂತಿದ್ದಾರೆ. ನನ್ನ ಗೌರವ ಕಾಪಾಡುತ್ತಿರುವ ಪತಿಗೆ ಧನ್ಯವಾದ ಎಂದಿದ್ದಾರೆ.

ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಕಾಂಗ್ರೆಸ್ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿತ್ತು. ಈ ಮಧ್ಯೆ ಸಿಧು ಕೂಡ ಅರವಿಂದ್ ಕೇಜ್ರಿವಾಲ್ ವಿರುದ್ಧ  ಕಮೆಂಟ್ ಮಾಡಿದ್ದರು. ಹೀಗಾಗಿ ಎಎಪಿ ಶಾಸಕ ಸಿಧುವನ್ನು ರಾಖಿ ಸಾವಂತ್ ಗೆ ಹೋಲಿಸಿದ್ದರು.

Rakhi Sawant slams AAP MLA after comparison with Navjot Singh Sidhu

Comments are closed.