ಏಕಾಏಕಿ ಮನೆಗೆ ನುಗ್ಗಿ ನನ್ನನ್ನು ಚುಂಬಿಸಿದ್ರು….! ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಫ್ರಾ ಆರೋಪ…!!

ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿ ಈಗಾಗಲೇ ಜೈಲು ಸೇರಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಲೈಂಗಿಕ ಕಿರುಕುಳ ಆರೋಪ ಎಸಗಿದ್ದು, ಬಾಲಿವುಡ್ ಬೆಚ್ಚಿ ಬಿದ್ದಿದೆ.

ನನ್ನ ಅನುಮತಿಯಿಲ್ಲದೇ ವ್ಯವಹಾರದ ಕುರಿತು ಚರ್ಚಿಸಲು ನನ್ನ ಮನೆಗೆ ಬಂದಿದ್ದ ರಾಜ್ ಕುಂದ್ರಾ ಏಕಾಏಕಿ ನನ್ನನ್ನು ಚುಂಬಿಸಲು ಆರಂಭಿಸಿದರು.

ನಾನು ಇದನ್ನು ವಿರೋಧಿಸಿದೆ. ವಿವಾಹಿತ ವ್ಯಕ್ತಿಯ  ಈ ರೀತಿಯ ವರ್ತನೆಗೆ ನನಗೆ ಆಘಾತ ತಂದಿತು. ಹೀಗಾಗಿ ರಾಜ್ ಕುಂದ್ರಾ ಮನೆಯಿಂದ ಹೋಗುವವರೆಗೂ ನಾನು ವಾಶ್ ರೂಂನಲ್ಲಿ ಅಡಗಿಕೊಂಡಿದೆ ಎಂದು ಶೆರ್ಲಿನ್ ಚೋಪ್ರಾ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

2021  ಏಪ್ರಿಲ್ ನಲ್ಲೇ ಶೆರ್ಲಿನ್ ಚೋಫ್ರಾ ಈ ಬಗ್ಗೆ ದೂರು ನೀಡಿದ್ದು, ಈಗ ಪ್ರಕರಣ ಬೆಳಕಿಗೆ ಬಂದಿದೆ. 2019 ರಲ್ಲಿ ಮಾರ್ಚ್ ನಲ್ಲಿ ನನಗಾಗಿ ವ್ಯವಹಾರದ ಪ್ರಸ್ತಾಪವೊಂದನ್ನು ತಂದಿದ್ದರು ರಾಜ್ ಕುಂದ್ರಾ. ಇದರ ಬಗ್ಗೆ ಚರ್ಚಿಸಲು ಏಕಾಏಕಿ ಮನೆಗೆ ಬಂದಿದ್ದರು.

ಈ ವೇಳೆ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಶೆರ್ಲಿನ್ ಚೋಫ್ರಾ ಆರೋಪಿಸಿದ್ದಾರೆ. ಶೆರ್ಲಿನ್ ಚೋಫ್ರಾ ಆರೋಪದಿಂದ ರಾಜ್ ಕುಂದ್ರಾಗೆ ಇನ್ನಷ್ಟು ಸಂಕಷ್ಟ ಎದುರಾದಂತಾಗಿದ್ದು, ಪ್ರಕರಣಕ್ಕೆ ಇನ್ನಷ್ಟು ಬಲತುಂಬಿದಂತಾಗಿದೆ.

ಈಗಾಗಲೇ ಶೆರ್ಲಿನ್ ಚೋಫ್ರಾ ಮುಂಬೈ ಸಿಸಿಬಿ ಪೊಲೀಸರ ಎದುರು ಹಾಜರಾಗಿದ್ದು, ರಾಜ್ ಕುಂದ್ರಾ ಬಗ್ಗೆ ಹೇಳಿಕೆ ಕೂಡ ನೀಡಿದ್ದಾರೆ. ಹೀಗಾಗಿ ರಾಜ್ ಕುಂದ್ರಾ ಇನ್ನಷ್ಟು ಜಟಿಲವಾದಂತಾಗಿದೆ. ಅಲ್ಲದೇ ಶಿಲ್ಪಾ ಶೆಟ್ಟಿಗೆ ಮುಜುಗರ  ಇನ್ನಷ್ಟು ಹೆಚ್ಚಿದೆ.

Comments are closed.