ಮದುವೆ ಮುನ್ನವೇ ಮಗು….! ನಿಶ್ಚಿತಾರ್ಥದ ಬಳಿಕ ಬ್ರೇಕ್ ಅಪ್…! ಇದು ವಿಲನ್ ನಟಿ ಲೈಫ್ ಕಹಾನಿ…!!

ದಿ. ವಿಲನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ಆಮಿ ಜಾಕ್ಸನ್ ಬದುಕಿನಲ್ಲಿ ಪ್ರೀತಿಯೇ ವಿಲನ್ ಆಗಿದ್ದು, ಮದುವೆಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದ ನಟಿ ಆಮಿ, ನಿಶ್ಚಿತಾರ್ಥದ  ಬಳಿಕ ಬ್ರೇಕ್ ಅಪ್ ಎಂದಿದ್ದಾರೆ.

ಬಾಲಿವುಡ್ ಸೇರಿದಂತೆ ಬಹುಭಾಷೆಯಲ್ಲಿ ನಟಿಸಿದ್ದ ಆಮಿ ಜಾಕ್ಸನ್, 2019 ರಲ್ಲಿ ಜಾರ್ಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಗಂಡುಮಗುವಿಗೆ ಜನ್ಮ ನೀಡಿದ್ದರು.  2020 ರಲ್ಲಿ ಈ ಜೋಡಿ ಡೆಸ್ಟಿನೇಶನ್ ವೆಡ್ಡಿಂಗ್ ಪ್ಲ್ಯಾನ್ ಮಾಡಿತ್ತು. ಆದರೆ ಕೊರೋನಾದಿಂದ ಮದುವೆ ಮುಂದೂಡಲಾಗಿತ್ತು.

ಆದರೆ ಈಗ ಆಮಿ ಜಾಕ್ಸನ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ಜಾರ್ಜ್ ಪೋಟೋಗಳನ್ನು ಡಿಲೀಟ್ ಮಾಡಿದ್ದು, ನಿಶ್ಚಿತಾರ್ಥ, ಮಗನ ಬರ್ತಡೇ, ಫಾದರ್ಸ್ ಡೇ ಸೇರಿದಂತೆ ಎಲ್ಲ ಒಕೆಶನ್ ಪೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

ಆಮಿ ಜಾಕ್ಸನ್ ಪೋಟೋಸ್ ಡಿಲೀಟ್ ಮಾಡಿರೋದಿಕ್ಕೆ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದು,  ಯಾಕೆ ಡಿಲೀಟ್ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಇದಕ್ಕೆ ಆಮಿ ಯಾವುದೇ ಉತ್ತರ ನೀಡಿಲ್ಲ. ಆಮಿ ತಮ್ಮ ಮಗನಿಗೆ ಜಾರ್ಜ್ ತಂದೆಯ ಹೆಸರು ಆಂಡ್ರಿಸನ್ ಎಂದು ನಾಮಕರಣ ಕೂಡ ಮಾಡಿದ್ದರು.

ಆದರೆ ಯಾವ ಕಾರಣಕ್ಕೆ ಆಮಿ ಮದುವೆ ಮುರಿದು ಬಿದ್ದಿದೆ ಎಂಬುದು ಗೊತ್ತಾಗಿಲ್ಲ. 2010 ರಲ್ಲಿ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಇದುವರೆಗೂ ತೆಲುಗು,ಕನ್ನಡ,ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಪ್ರಸ್ತುತ ಸಿನಿಮಾದಿಂದ ದೂರವಿದ್ದಾರೆ.

ಇದನ್ನೂ ಓದಿ : ಒಬ್ಬಳೇ ಮನೆಗೆ ಬಾ ಎಂದ ಪೊಲೀಸಪ್ಪ : ಬಾಲಕಿ ದೂರು, ಪೊಲೀಸ್‌ ಹೆಡ್‌ಕಾನ್ಸ್‌ಸ್ಟೇಬಲ್ ಅರೆಸ್ಟ್‌

ಕೊನೆಯದಾಗಿ ತಮಿಳಿನ 2.0 ಹಾಗೂ ಕನ್ನಡದ ವಿಲನ್ ಸಿನಿಮಾದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಇತ್ತೀಚಿಗೆ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.ಆಮಿ ಜಾಕ್ಸನ್ ರೆಡ್ ಕಾರ್ಪೆಟ್ ಲುಕ್ ಗಮನ ಸೆಳೆದಿತ್ತು.

Comments are closed.