Rashmika :ಇನ್ ಸ್ಟಾಗ್ರಾಂನಲ್ಲಿ ಕೊಡಗಿನ ಬೆಡಗಿಯ ಹವಾ….! 20 ಮಿಲಿಯನ್ ಫಾಲೋವರ್ಸ್ ಪಡೆದ ರಶ್ಮಿಕಾ…!!

ಬಾಲಿವುಡ್ ನಲ್ಲಿ ಒಂದಾದ ಮೇಲೊಂದು ಸಿನಿಮಾಗೆ ಸಹಿ ಹಾಕುತ್ತಲೇ ಸಾಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ನಟನೆಯಲ್ಲಿ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಸ್ಟಾರ್ ನಟಿಯರನ್ನು ಮೀರಿಸಿದ್ದಾರೆ.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇನ್ ಸ್ಟಾಗ್ರಾಂ ಖಾತೆಯಲ್ಲಿ 20 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆ ಮೂಲಕ ಸೋಷಿಯಲ್ ಮೀಡಿಯಾದಲ್ಲಿ  20 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ ಸ್ಟಾರ್ ಪಟ್ಟಿಯಲ್ಲಿ ಹಲವು ಪ್ರಮುಖ ನಟ-ನಟಿಯರನ್ನು ದಾಟಿ ರಶ್ಮಿಕಾ ಮುಂದೇ ಸಾಗಿದ್ದಾರೆ.

ಕಳೆದ ಒಂದು ತಿಂಗಳಿನಲ್ಲೇ ನಟಿ ರಶ್ಮಿಕಾ ಮಂದಣ್ಣ 1 ಮಿಲಿಯನ್ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಕನ್ನಡದಲ್ಲಿ ನಟನೆ ಆರಂಭಿಸಿ ರಶ್ಮಿಕಾ ತಮಿಳು,ತೆಲುಗು ಚಿತ್ರರಂಗದಲ್ಲೂ ಹೆಸರು ಗಳಿಸಿದ್ದು, ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.

ಇತ್ತೀಚಿಗೆ ಟ್ರೋಲ್ ಗಳ ವಿಚಾರದಲ್ಲಿ ಅತ್ಯಂತ ಮೆಚ್ಯೂರ್  ಆಗಿ ಮಾತನಾಡಿದ್ದ ರಶ್ಮಿಕಾ, ನನ್ನ 19 ನೇ ವಯಸ್ಸಿನಿಂದ ನನಗೆ ಟ್ರೋಲ್ ಗಳ ಕಾಟ ಶುರುವಾಗಿತ್ತು. ನನ್ನ ದೇಹ,ಧ್ವನಿ,ಸಿನಿಮಾ,ಪರ್ಸನಲ್ ವಿಚಾರ ಹೀಗೆ ಎಲ್ಲದರ ಬಗ್ಗೆ ಮಾತನಾಡಿದಾಗ ಮೊದ ಮೊದಲು ತುಂಬಾ ನೋವಾಗುತ್ತಿತ್ತು. ಈಗ ಟ್ರೋಲ್ ಗಳಿಗೆ ಕಲ್ಲಾಗಿದ್ದೇನೆ ಎಂದು ರಶ್ಮಿಕಾ ಹೇಳಿದ್ದರು.

ಇನ್ ಸ್ಟಾಗ್ರಾಂನಲ್ಲಿ 20 ಮಿಲಿಯನ್ ಫಾಲೋವರ್ಸ್ ಗಳಿಸಿದ ರಶ್ಮಿಕಾ ಈ ಖುಷಿಗೆ ಪೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಲವ್ ಯೂ ಎಂದಿದ್ದಾರೆ.

Comments are closed.