ಬೊಕ್ಕಸ ತುಂಬಿಸಲು ಬಿಗಿಕ್ರಮ….! ಸರ್ಕಾರಿ ಸಭೆಯಲ್ಲಿ ಹೂಗುಚ್ಛ,ಹಾರ, ತುರಾಯಿಗೆ ಬಿತ್ತು ಬ್ರೇಕ್….!!

ಕೊರೋನಾ ಸಂಕಷ್ಟದಿಂದಾಗಿ ಜನರು ಬದುಕು ಕಷ್ಟದಲ್ಲಿದ್ದು, ಸರ್ಕಾರವೂ ಬೊಕ್ಕಸಕ್ಕೆ ಆದಾಯವಿಲ್ಲದೇ ಸೊರಗುತ್ತಿದೆ. ಹೀಗಾಗಿ ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಸರ್ಕಾರಿ ಕಾರ್ಯಕ್ರಮ, ಸಭೆ,ಸಮಾರಂಭ,  ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಘಸಂಸ್ಥೆಗೆ ಈ ನಿಯಮ ಜಾರಿಗೊಳಿಸಿದೆ.

ಸಿಎಂ ಸ್ಥಾನ ಸ್ವೀಕರಿಸಿದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ಬೊಕ್ಕಸದಲ್ಲಿ ಆದಾಯ ಕುಸಿದಿದ್ದು, ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದಾಗಿ ಹೇಳಿದ್ದರು.

ಈ ಆದೇಶವನ್ನು ಅಧಿಕೃತಗೊಳಿಸಲಾಗಿದ್ದು, ಆದೇಶದ ಭಾಗವಾಗಿ ಸರ್ಕಾರಿ  ಕಾರ್ಯಕ್ರಮ ಹಾಗೂ ಸರ್ಕಾರಿ ಸ್ವಾಮ್ಯದ ಸಂಘ-ಸಂಸ್ಥೆಗಳ ಕಾರ್ಯಕ್ರಮದಲ್ಲಿ ಹಾರ,ತುರಾಯಿ,ಹೂಗುಚ್ಛ,ಹಣ್ಣಿನಬುಟ್ಟಿ,ಶಾಲು,ನೆನಪಿನ ಕಾಣಿಕೆ ನೀಡುವುದು ಸೇರಿದಂತೆ ಎಲ್ಲ ರೀತಿಯ ವೆಚ್ಚದ ಮೇಲೆ ಕಡಿವಾಣ ಹೇರಿದೆ.

ಅಲ್ಲದೇ  ಕೊಡುಗೆಯಾಗಿ ನೀಡುವುದಾದರೇ ಕನ್ನಡ ಪುಸ್ತಕಗಳನ್ನು ನೀಡಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಲಾಗಿದೆ. ಸಿಎಂ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ವೇಳೆಯೂ  ಬೊಕ್ಕೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದು, ಶಿಷ್ಟಾಚಾರದ ಹೆಸರಿನಲ್ಲಿ ಅನಗತ್ಯ ಖರ್ಚು ಬೇಡ ಎಂದಿದ್ದರು.

Comments are closed.