ಅಳಿಯನ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿದ ಅತ್ತೆ…! ಶಿಲ್ಪಾ ಶೆಟ್ಟಿ ತಾಯಿಗೆ 1.6 ಕೋಟಿ ವಂಚನೆ…!!

ಬಾಲಿವುಡ್ ನಟಿ, ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ ಪಾಲಿಗೆ ದೇವರು ಮುನಿಸಿಕೊಂಡಂತಿದ್ದು, ಪತಿ ಜೈಲು ಸೇರಿದ ಬೆನ್ನಲ್ಲೇ ತಾಯಿ ಶಿಲ್ಪಾ ಶೆಟ್ಟಿ ತಾಯಿಯೂ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.  ರಾಜ್ ಕುಂದ್ರಾ ಜೈಲು ಸೇರಿದ್ದರೇ, ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವ್ಯಕ್ತಿಯೊಬ್ಬನಿಂದ ವಂಚನೆಗೆ ಒಳಗಾಗಿದ್ದಾರೆ.

 

ಶಿಲ್ಪಾ ಶೆಟ್ಟಿ ಪೋಷಕರು ಹಲವು ವರ್ಷಗಳಿಂದ ಮುಂಬೈನಲ್ಲೇ ನೆಲೆಸಿದ್ದಾರೆ. ಶಿಲ್ಪಾ ಶೆಟ್ಟಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರೋ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ 1.6 ಕೋಟಿ ವಂಚನೆಗೀಡಾಗಿದ್ದು,  ದೂರು ದಾಖಲಿಸಿದ್ದಾರೆ.

ಸುಧಾಕರ್ ಘರೆ ಎಂಬ ವ್ಯಕ್ತಿ ನನಗೆ ನಕಲಿ ದಾಖಲೆ ಪತ್ರ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದಾರೆ ಎಂದು ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ  ಆರೋಪಿಸಿದ್ದಾರೆ. 1.6 ಕೋಟಿ ರೂಪಾಯಿ ವಂಚನೆ  ವಿರುದ್ಧ  ಸುನಂದಾ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಸುನಂದಾ ಶೆಟ್ಟಿ ದೂರಿನ ಅನ್ವಯ ವಂಚಕನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ವಿವರಣೆ ನೀಡಿದ್ದಾರೆ.

ಜುಲೈ 19 ರಂದು ರಾಜ್ ಕುಂದ್ರಾರನ್ನು ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿಯಲ್ಲಿ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಮಧ್ಯೆ ಶಿಲ್ಪಾ ತಾಯಿಯೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

Comments are closed.